ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿ ವೆಡ್ಡಿಂಗ್ ಫೋಟೋಶೂಟ್ ಫ್ಯಾಷನ್‌ನಲ್ಲಿ ಕಲರ್‌ಫುಲ್ ಗೌನ್‌ಗಳದ್ದೇ ಹವಾ. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ಮನಮೋಹಕ ವಿನ್ಯಾಸದ ಬಣ್ಣ ಬಣ್ಣದ ಗೌನ್‌ಗಳು ಟ್ರೆಂಡಿಯಾಗಿವೆ. ಅದರಲ್ಲೂ ನೆಟ್ಟೆಡ್, ಸ್ಯಾಟಿನ್, ಸೆಮಿ ವೆಲ್ವೆಟ್, ಕ್ರೆಪ್, ಜಾರ್ಜೆಟ್, ಅರ್ಗಾನ್ಜಾ, ಶೀರ್ ಫ್ಯಾಬ್ರಿಕ್‌ನ ಮೊನೋಕ್ರೋಮ್ ಶೇಡ್‌ನ ಮಲ್ಟಿ ಡಿಸೈನ್ ಹೊಂದಿರುವ ಗೌನ್‌ಗಳು ಪಾಪ್ಯುಲರ್ ಆಗಿವೆ. ಸದ್ಯಕ್ಕೆ ಪ್ರಿಂಟೆಡ್ ಡಿಸೈನರ್ ಗೌನ್‌ಗಳು ಸೈಡಿಗೆ ಸರಿದಿದ್ದು, ಅಲ್ಲೊಂದು ಇಲ್ಲೊಂದು ಮೈಕ್ರೋ ಪ್ರಿಂಟ್ ಹಾಗೂ ಲೈಟ್ ಪ್ರಿಂಟ್‌ಗಳವು ಮಾತ್ರ ಚಾಲ್ತಿಯಲ್ಲಿವೆ.
ಹೈಲೈಟ್ ಆಗುವ ಮನಮೋಹಕ ಗೌನ್‌ಗಳು
ವೆಸ್ಟರ್ನ್ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಯಾಗಿರುವ ನಾನಾ ಬಗೆಯ ಮೊನೋಕ್ರೋಮ್ ಗೌನ್‌ಗಳು ಮದುವೆಯ ಪ್ರಿ ವೆಡ್ಡಿಂಗ್ ಶೂಟ್‌ನ ಥೀಮ್‌ಗೆ ತಕ್ಕಂತೆ ಆಯ್ಕೆ ಮಾಡುವ ಕಲರ್‌ಕೋಡ್‌ನಲ್ಲಿ ಮಿಂಚುತ್ತಿವೆ. ಕಲರ್ ಕಾಂಬಿನೇಷನ್ ಹಾಗೂ ವರನ ಉಡುಪಿಗೆ ಮ್ಯಾಚ್ ಆಗುವಂತ ಕಾನ್ಸೆಪ್ಟ್‌ನಲ್ಲಿ ಇವು ಕಾಣಿಸಿಕೊಳ್ಳುತ್ತಿವೆ. ಆಯಾ ಫೋಟೋಶೂಟ್‌ಗೆ ತಕ್ಕಂತೆ ಡಿಸೈನರ್‌ಗಳು ಕೂಡ ಟ್ವಿನ್ನಿಂಗ್ ಅಥವಾ ಕಾಂಟ್ರಾಸ್ಟ್ ಕಾನ್ಸೆಪ್ಟ್‌ನಲ್ಲಿ ಇವನ್ನು ಸಿದ್ಧಪಡಿಸತೊಡಗಿರುವುದು ಇಂದು ಸಾಮಾನ್ಯವಾಗಿದೆ.
ಡಿಸೈನರ್ ರಿತಿಜಾ ಹೇಳುವಂತೆ, ಯಾವುದೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ಗೆ ಸಿದ್ಧಪಡಿಸುವ ಗೌನ್‌ಗಳು ಆದಷ್ಟೂ ಸೀಸನ್ ಹಾಗೂ ಥೀಮ್‌ಗೆ ತಕ್ಕಂತೆ ಮ್ಯಾಚ್ ಮಾಡಲಾಗುತ್ತದೆ. ಇನ್ನು ಮದುವೆಯಾಗುವ ಹೆಣ್ಣು ಹಾಗೂ ಗಂಡಿನ ವ್ಯಕ್ತಿತ್ವಕ್ಕೆ ಸೂಟ್ ಆಗುವಂತೆ ಅಥವಾ ಅವರ ಬಾಡಿ ಸ್ಟ್ರಕ್ಚರ್‌ಗೆ ತಕ್ಕಂತೆ ಮ್ಯಾಚ್ ಆಗುವಂತೆ ಪ್ಲಾನ್ ಮಾಡಲಾಗುತ್ತದೆ. ಇನ್ನು ಫೋಟೋಶೂಟ್ ಮಾಡುವಾಗ ಡಿಸೈನರ್ ಉಡುಪಿನ ಜತೆ ಸ್ಟೈಲಿಂಗ್ ಮಾಡುವುದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜತೆಗೆ ಆಯಾ ಗೌನ್‌ಗಳಿಗೆ ತಕ್ಕಂತೆ ಪರ್ಫೆಕ್ಟ್ ಮೇಕಪ್ ಮಾಡಿದಲ್ಲಿ ಗೌನ್‌ಗಳು ಹುಡುಗಿಯನ್ನು ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಗೌನ್‌ಗಳು ಬಾಡಿಗೆಗೂ ಲಭ್ಯ
ಗೌನ್‌ಗಳ ಬೆಲೆ ಅತಿ ಹೆಚ್ಚಿದ್ದಾಗ ಅಥವಾ ಮರು ಬಳಕೆ ಮಾಡಲು ಸಾಧ್ಯವಾಗದಿದ್ದಾಗ ಇವನ್ನು ಬಾಡಿಗೆಗೂ ಪಡೆಯಬಹುದು. ಇದಕ್ಕಾಗಿ ಸಾಕಷ್ಟು ಆನ್‌ಲೈನ್ ಆಫ್‌ಲೈನ್ ಫೋಟೋಶೂಟ್ ಟೀಮ್‌ಗಳು ಕೆಲಸ ಮಾಡುತ್ತವೆ. ಅವುಗಳೇ ಗೌನ್‌ಗಳನ್ನು ಶುಲ್ಕ ಪಡೆದು ಪೂರೈಸುತ್ತವೆ. ಇದರ ಸದುಪಯೋಗವನ್ನು ಪಡೆದುಕೊಂಡು ಫೋಟೋಶೂಟ್‌ಗೆ ತಕ್ಕಂತೆ ಗೌನ್ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಚಂದನ್.
ಫೋಟೋಶೂಟ್ ಗೌನ್ ಮನಮೋಹಕವಾಗಿರಲಿ
ನೋಡಲು ಮಾತ್ರವಲ್ಲ, ಸೀಸನ್‌ನಲ್ಲೂ ಟ್ರೆಂಡಿಯಾಗಿರಬೇಕು
ಒಂದೇ ಶೇಡ್‌ನ ಮೊನೋಕ್ರೋಮ್ ಗೌನ್‌ಗಳು ಎದ್ದುಕಾಣುತ್ತವೆ.
ಗೌನ್ ಡಿಸೈನ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಹಾಗೂ ಮೇಕಪ್ ಇರುವುದು ಅಗತ್ಯ.
ವೆಸ್ಟರ್ನ್ ಕಾನ್ಸೆಪ್ಟ್ ಗೌನ್‌ಗೆ ಬ್ಯಾಕ್‌ಗ್ರೌಂಡ್ ಸರಿಯಾಗಿ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Star Fashion | ನಟಿ ಅಲಯಾಗೆ ನಯಾ ಲುಕ್ ನೀಡಿದ ಕಟೌಟ್ ಮಿನಿ ಫ್ರಾಕ್