Site icon Vistara News

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Gut Health

ಬೆಂಗಳೂರು: ಬೇಸಿಗೆಯಲ್ಲಿ ಹಲವು ಹೊಟ್ಟೆಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯ ಉರಿ, ಹೊಟ್ಟೆ ತುಂಬಿರುವಂತಹ ಅನುಭವವಾಗುತ್ತದೆ. ಇದರಿಂದ ಊಟವನ್ನು ಸರಿಯಾಗಿ ಮಾಡಲು ಆಗುವುದಿಲ್ಲ. ನಿಮಗೆ ಇಷ್ಟವಾದ ಆಹಾರವನ್ನು (Food) ತಿನ್ನಲು ಹೊಟ್ಟೆ ಬಯಸುವುದಿಲ್ಲ. ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನೀವು ನಿಮ್ಮ ಕರುಳಿನ ಆರೋಗ್ಯದ (Gut Health) ಬಗ್ಗೆ ಕಾಳಜಿವಹಿಸಬೇಕು.

ನಮ್ಮ ದೇಹದಲ್ಲಿ ಕರುಳು ಬಹಳ ಮುಖ್ಯ ಅಂಗಗಳಲ್ಲಿ ಒಂದು. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ದೇಹದಿಂದ ತ್ಯಾಜ್ಯ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಉತ್ತಮವಾಗಿಡಲು ಈ ಪಾನೀಯಗಳನ್ನು ಸೇವಿಸಿ.

Gut Health

ಕೊಂಬುಚಾ

ಇದು ಪ್ರೋಬಯಾಟಿಕ್ ಗಳನ್ನು ಹೊಂದಿರುವಂತಹ ಹುದುಗಿಸಿದ ಚಹಾವಾಗಿದೆ. ಚೀನಾದ ಒಂದು ವಿಶೇಷವಾದ ಪಾನೀಯವಿದು. ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು  ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ.

Gut Health

ಕೆಫಿರ್

ಮೊಸರಿನಂತೆಯೆ ಇದು ಕೂಡ ಪ್ರೋಬಯಾಟಿಕ್ ಗಳನ್ನು ಹೊಂದಿರುವಂತಹ ಡೈರಿ ಉತ್ಪನ್ನವಾಗಿದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಣ್ಣುಗಳ ರಸ

ಇದನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಸಂಚಯನ ಹೆಚ್ಚಾಗುತ್ತದೆ. ಇದು ದೇಹಕ್ಕೆ ವಿಟಮಿನ್ ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

Gut Health

ಹಸಿರು ಸ್ಮೂಥಿಗಳು

ಇದನ್ನು ಹಸಿರು ಸೊಪ್ಪುಗಳಿಂದ ತಯಾರಿಸಲಾಗುತ್ತದೆ. ಪಾಲಕ್, ಕೇಲ್ ನಂತಹ ಸೊಪ್ಪುಗಳನ್ನು ಬಳಸಿ ಇದನ್ನು ತಯಾರಿಸಿ ಕುಡಿಯಿರಿ. ಇದರಲ್ಲಿ ಫೈಬರ್, ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಎಳನೀರು

ಇದು ದೇಹವನ್ನು ನೈಸರ್ಗಿಕವಾಗಿ ಹೈಡ್ರೀಕರಿಸುತ್ತದೆ. ಇದರಲ್ಲಿ ಪೊಟ್ಯಾಸಿಯಂನಂತಹ ಎಲೆಕ್ಟ್ರೋಲೈಟ್ ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಗಿಡಮೂಲಿಕೆ ಚಹಾಗಳು

ಪುದೀನಾ, ಶುಂಠಿ ಅಥವಾ ಕ್ಯಾಮೊಮೈಲ್ ನಂತಹ ಗಿಡಮೂಲಿಕೆ ಚಹಾಗಳು ಜೀರ್ಣಾಂಗ ವ್ಯವಸ್ಥೆಯನ್ನು ಶಾಂತವಾಗಿಡುತ್ತದೆ. ಇದರಿಂದ ಹೊಟ್ಟೆಯುಬ್ಬರ, ಸುಡುವ ವೇಧನೆ ಸಮಸ್ಯೆ ಕಾಡುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.

Gut Health

ಅಲೋವೆರಾ ರಸ

ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಶುದ್ಧ ಅಲೋವೆರಾ ರಸಗಳನ್ನು ಸೇವಿಸಿ. ಇದು ಹೊಟ್ಟೆಯ ಉರಿ ಮತ್ತು ಕಿರಿಕಿರಿಯನ್ನು ನಿವಾರಿಸುತ್ತದೆ.

ಆ್ಯಪಲ್ ಸೈಡರ್ ವಿನೆಗರ್

ಇದು ಅಸಿಟಿಕ್ ಆಮ್ಲವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕರುಳಿನಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ಇದನ್ನೂ ಓದಿ: Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

ಹುದುಗಿಸಿದ ತರಕಾರಿಗಳು

ಸೌರ್ ಕ್ರಾಟ್, ಕಿಮ್ಚಿ ಅಥವಾ ಉಪ್ಪಿನಕಾಯಿಯಂತಹ ಹುದುಗಿಸಿದ ತರಕಾರಿಗಳು ಪ್ರೋಬಯಾಟಿಕ್ ಗಳು ಮತ್ತು ಫೈಬರ್ ಅನ್ನು ಹೊಂದಿದ್ದು, ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Exit mobile version