Site icon Vistara News

Hairpin Fashion: ಹುಡುಗಿಯರ ಫಂಕಿ ಲುಕ್‌ಗೆ ಬಂತು ಜಂಕ್‌ ಹೇರ್‌ ಪಿನ್ಸ್

Hairpin Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹುಡುಗಿಯರು ಧರಿಸಿದಾಗ ಫಂಕಿ ಲುಕ್‌ ನೀಡುವ ಸ್ಟೈಲಿಶ್ ಜಂಕ್‌ ಹೇರ್‌ಪಿನ್‌ಗಳು (Hairpin Fashion) ಇದೀಗ ಮಾರುಕಟ್ಟೆಗೆ ಕಾಲಿಟ್ಟಿವೆ. ನೋಡಲುಚಿತ್ರ-ವಿಚಿತ್ರ ಡಿಸೈನ್‌ನ ಈ ಕ್ಲಿಪ್‌ಗಳು ಇದೀಗ ಬಿಂದಾಸ್‌ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ.

ಆಕರ್ಷಕ ಹೇರ್‌ಕ್ಲಿಫ್ಸ್‌

ಹೇರ್‌ ಸ್ಟೈಲ್‌ ಪ್ರಿಯರಿಗೆಂದೇ, ಇದೀಗ ವಿವಿಧ ಬಣ್ಣದ ಆಕಾರದ ಬಗೆಬಗೆಯ ಹೇರ್‌ಪಿನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹುಡುಗಿಯರನ್ನು ಆಕರ್ಷಿಸುತ್ತಿವೆ. ಇನ್ನು, ಸರಳ ಸಮಾರಂಭಗಳಿಂದ ಹಿಡಿದು, ಮದುವೆ, ಗ್ರ್ಯಾಂಡ್‌ ಪಾರ್ಟಿಗಳಿಗೆ ಸರಿ ಹೊಂದುವಂಥ ತರಹೇವಾರಿ ಹೇರ್‌ಪಿನ್‌ಗಳು ಮಹಿಳೆಯರನ್ನು ಸೆಳೆಯುತ್ತಿವೆ.

ನಾನಾ ಡಿಸೈನ್‌ಗಳು ಲಭ್ಯ

ಪೇಪರ್‌ ಪ್ಲಾಸ್ಟಿಕ್‌ಗಳಿಂದ ತಯಾರಿಸಲಾದ ಹೇರ್‌ಪಿನ್‌ಗಳು, ಸ್ಟೋನ್‌, ಪರ್ಲ್‌ಗಳಿಂದ ತಯಾರಿಸಲಾದ ಪಿನ್‌ಗಳು, ಪಾರ್ಟಿಗೆ ಮ್ಯಾಚ್‌ ಆಗುವ ಕ್ರಿಸ್ಟಲ್‌ ಹೇರ್‌ ಪಿನ್‌ಗಳು ಒಂದೆಡೆಯಾದರೆ, ಮದುವೆ ಸಮಾರಂಭಗಳಿಗೆ ಒಪ್ಪುವಂಥ ಗ್ರ್ಯಾಂಡ್‌ ಲುಕ್‌ ನೀಡುವಂತಹ ಆಕರ್ಷಕ ಪಿನ್‌ಗಳು, ಗೋಲ್ಡ್‌, ಸಿಲ್ವರ್‌ ಪ್ಲೇಟೆಡ್‌ ಪಿನ್‌ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ.

ಮಿನಿ ಹೇರ್‌ಕ್ಲಿಪ್‌ ವಿನ್ಯಾಸ

ಬಾಲ್‌ ಪಿನ್ಸ್‌, ಲಾಕ್‌ ಪಿನ್ಸ್‌, ಬನಾನ ಕ್ಲಿಪ್‌ ಪಿನ್‌, ಫ್ರೆಂಷ್‌ ಬ್ಯಾರೆಟ್‌ ಪಿನ್‌, ಬಾಬಿ ಪಿನ್‌ ಹೀಗೆ ನಾನಾ ಬಗೆಯ ಹೇರ್‌ಪಿನ್‌ಗಳು ಮೊದಲಿನಿಂದಲೂ ಪ್ರಚಲಿತದಲ್ಲಿದ್ದವು. ಇದೀಗ ಇವುಗಳು ರೂಪಾಂತರಗೊಂಡಿದ್ದು ನಾನಾ ಡಿಸೈನ್ಸ್‌ನಲ್ಲಿ ದೊರೆಯುತ್ತಿವೆ. ಉದಾಹರಣೆಗೆ ಮಿನಿ ಫ್ಲವರ್‌ ಹೇರ್‌ಪಿನ್‌, ಚಟ್‌ಪಟ್‌ ಹೇರ್‌ಪಿನ್‌, ಕ್ಲಿಪ್‌ ಸ್ಟೈಲ್‌ ಮಿನಿ ಹೇರ್‌ಪಿನ್‌, ಬಣ್ಣಬಣ್ಣದ ಹೇರ್‌ ಪಿನ್‌ಗಳು ಹೊಸ ವಿನ್ಯಾಸದಲ್ಲಿ ಹೆಸರಲ್ಲಿ ಬಿಡುಗಡೆಗೊಂಡಿವೆ. ಹೇರ್‌ಪಿನ್‌ಗಳು ಕೇವಲ ಕೂದಲನ್ನು ಹಿಡಿದಿಡುವುದರೊಂದಿಗೆ ಆಕರ್ಷಕವಾಗಿಯೂ ಕಾಣುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.

ಮಕ್ಕಳಿಗೆ ಕಲರ್‌ಫುಲ್‌ ಹೇರ್‌ಪಿನ್ಸ್

ಇನ್ನು ಮಕ್ಕಳಿಗೆ ಫ್ರೂಟ್ಸ್, ಪ್ಲವರ್ಸ್‌, ಅನಿಮಲ್ಸ್‌, ಬಾರ್ಬಿ ಥೀಮ್‌ ಹೀಗೆ ನಾನಾ ಬಗೆಯ ಥೀಮ್‌ ಹೇರ್‌ಪಿನ್‌ಗಳು ಆಗಮಿಸಿವೆ. ಇವು ನೋಡಲು ಆಕರ್ಷಕವಾಗಿ ಕಾಣಿಸುವುದಲ್ಲದೇ, ಟ್ರೆಂಡಿಯಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ದಿಯಾ. ಅವರ ಪ್ರಕಾರ, ಹೇರ್‌ಪಿನ್‌ಗಳು ಇನ್‌ಸ್ಟಂಟ್‌ ಹೇರ್‌ಸ್ಟೈಲಿಂಗ್‌ಗೆ ಸಾಥ್‌ ನೀಡುತ್ತವೆ.

ಕ್ರಿಸ್ಟಲ್‌ –ಕುಂದನ್‌ ಹೇರ್‌ಪಿನ್ಸ್

ಎಥ್ನಿಕ್‌ ಲುಕ್‌ ನೀಡುವ ಸ್ಟೋನ್ಸ್‌, ಕ್ರಿಸ್ಟಲ್‌ ಹಾಗೂ ಕುಂದನ್‌ ಕ್ಲಿಪ್‌ಗಳು ಕೂಡ ಇಂದು ಬೇಡಿಕೆ ಪಡೆದುಕೊಂಡಿವೆ. ಇವುಗಳನ್ನು ಸರಿಯಾಗಿ ಧರಿಸದಿದ್ದರೇ, ಕೂದಲು ಸಿಕ್ಕಿಹಾಕಿಕೊಳ್ಳುವುದು ಗ್ಯಾರಂಟಿ.

ಡಿಸೈನರ್‌ ಹೇರ್‌ಪಿನ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Big Jhumka Fashion: ಯುವತಿಯರ ಕಿವಿಯ ಸೌಂದರ್ಯ ಹೆಚ್ಚಿಸಿದ ಬಟ್ಟಲಗಲದ ಬಿಗ್‌ ಜುಮಕಿಗಳು

Exit mobile version