ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾದಾ ಸೀದಾ ಸ್ಕೂಲ್ ಹುಡುಗಿಯರ, ಟ್ರೆಡಿಷನಲ್ ದೇಸಿ ಸ್ಟೈಲ್ (Hairstyle Trend) ಮಾಡುವ ಹಳ್ಳಿ ಹುಡುಗಿಯರ ಫೇವರೇಟ್ ಲಿಸ್ಟ್‌ನಲ್ಲಿದ್ದ, ಎರಡು ಜಡೆ, ಇದೀಗ ಬಿಂದಾಸ್ ಮಾಡರ್ನ್ ಯುವತಿಯರ ಫಂಕಿ ಲುಕ್‌ಗೆ ಎಂಟ್ರಿ ನೀಡಿದೆ. ಡಿಫರೆಂಟ್ ವೆಸ್ಟರ್ನ್ ಡ್ರೆಸ್‌ಕೋಡ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ.
ಎರಡು ಜಡೆಯ ಪರಿವರ್ತನೆ
ಅಂದಹಾಗೆ, ಎರಡು ಜಡೆ ಮೊದಲಿನಿಂದಲೂ ದೇಸಿ ಹೇರ್‌ಸ್ಟೈಲ್‌ನಲ್ಲಿದೆ. ಅದರಲ್ಲೂ ಸ್ಕೂಲ್ ಯೂನಿಫಾರ್ಮ್ ಜೊತೆ ಹಾಕಿಕೊಳ್ಳುವ ಹುಡುಗಿಯರ ಲಿಸ್ಟ್‌ನಲ್ಲಿ ಇಂದಿಗೂ ಇದೆ. ಆದರೆ, ಇದೀಗ ಈ ಕಾನ್ಸೆಪ್ಟ್ ಶಾಲಾ ಮಕ್ಕಳ ಲಿಸ್ಟ್‌ನಿಂದ ಒಂದು ಹೆಜ್ಜೆ ಮುಂದೆ ಹೋಗಿದೆ. ಬಡ್ತಿ ಪಡೆದಿದೆ. ಸಾದಾ ಸೀದಾ ಹುಡುಗಿಯರನ್ನೂ ದಾಟಿ, ಬಿಂದಾಸ್ ಯುವತಿಯರ ಔಟಿಂಗ್ ಹಾಗೂ ಟ್ರಾವೆಲಿಂಗ್ ಹೇರ್‌ಸ್ಟೈಲ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇತ್ತೀಚೆಗೆ ಈ ಹೇರ್‌ಸ್ಟೈಲ್ ಪಾಪ್ಯುಲರ್ ಆಗಲು ಪ್ರಮುಖ ಕಾರಣ, ಯಂಗ್ ಲುಕ್ ಎನ್ನುತ್ತಾರೆ.
ಸೆಲೆಬ್ರೇಟಿಗಳ ಎರಡು ಜಡೆ
ಅಂದಹಾಗೆ, ಬಾಲಿವುಡ್‌ಗರು ಈ ಎರಡು ಜಡೆಯಲ್ಲಿ ಕಾಣಿಸಿಕೊಳ್ಳುವುದು ನಿನ್ನೆ ಮೊನ್ನೆಯ ಕಥೆಯಲ್ಲ! ಬಹಳಷ್ಟು ವರ್ಷಗಳಿಂದಲೇ ಅಪರೂಪಕ್ಕೊಮ್ಮೆ ಈ ಜಡೆಯಲ್ಲಿ ಕಾಣಿಸಿಕೊಳ್ಳುವುದು ಕಂಡು ಬರುತ್ತಿತ್ತು. ತಾರಾ ಸುತಾರಿಯಾ, ಅನನ್ಯಾ, ನೋರಾ, ಶ್ರದ್ಧಾ, ಅಲಯಾಎಫ್ ಸೇರಿದಂತೆ ನಾನಾ ತಾರೆಯರು ತಮ್ಮ ವರ್ಕೌಟ್ ಅಥವಾ ಔಟಿಂಗ್‌ಗಳಲ್ಲಿ ಈ ರೀತಿಯ ಜಡೆ ಹಾಕಿಕೊಳ್ಳುವುದು ಕಂಡು ಬರುತ್ತಿತ್ತು ಎನ್ನುತ್ತಾರೆ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್. ಅವರು ಹೇಳುವಂತೆ, ಫಂಕಿ ಲುಕ್ ನೀಡಲು ಸಾಕಷ್ಟು ಸೆಲೆಬ್ರೆಟಿಗಳು ಈ ಹೇರ್‌ಸ್ಟೈಲ್ ಹಾಕಿಕೊಳ್ಳುತ್ತಾರೆ. ಯಾವುದೇ ಜಂಜಾಟವಿಲ್ಲದೇ ಆರಾಮ ಎನಿಸುವ ಈ ಹೇರ್‌ಸ್ಟೈಲ್ ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತದೆ. ಬಿಂದಾಸ್ ಫಂಕಿ ಲುಕ್ ನೀಡುತ್ತದೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್.
ಫಂಕಿ ಲುಕ್ ನೀಡುವ ಡ್ರೆಸ್‌ಗಳಿಗೆ ಎರಡು ಜಡೆ
- ಔಟಿಂಗ್ ಹಾಗೂ ಟ್ರಾವೆಲಿಂಗ್ ಔಟ್ಫಿಟ್ಗಳಿಗೆ ಮ್ಯಾಚ್ ಆಗುತ್ತದೆ.
- ಸ್ಪೋರ್ಟ್ಸ್ ಆಧಾರಿತ ಕಾರ್ಯಕ್ರಮಗಳಲ್ಲೂ ಹಾಕಿಕೊಳ್ಳಬಹುದು.
- ಕಿವಿಯಿಂದ ಕೆಳಭಾಗದಲ್ಲಿ ಎರಡು ಜಡೆ ಹಾಕಿಕೊಂಡಾಗ ನೋಡಲು ಚೆನ್ನಾಗಿ ಕಾಣುತ್ತದೆ.
- ಕಿವಿಯಿಂದ ಮೇಲೆ ಪೋನಿಟೇಲ್ನಂತೆ ಹಾಕಿಕೊಂಡಲ್ಲಿ ನಗೆಪಾಟಲಿಗೀಡಾಗಬಹುದು.
- ದಪ್ಪನಾದ ಯಾವುದೇ ಬ್ಯಾಂಡ್ ಧರಿಸಕೂಡದು. ಜೋಕರ್ನಂತೆ ಕಾಣಬಹುದು.
- ಕೂದಲು ಶೋಲ್ಡರ್ ತನಕ ಇದ್ದಾಗ ಕ್ಯೂಟ್ ಲುಕ್ ನೀಡುವುದು.
- ಲೂಸಾಗಿ ಜಡೆ ಹೆಣೆದು ಹಾಕಿಕೊಳ್ಳಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!