Site icon Vistara News

Halloween Makeup Removing Tips: ಹ್ಯಾಲೋವೀನ್‌ ಪಾರ್ಟಿ ಮೇಕಪ್‌ನಿಂದ ಮುಕ್ತಿ ಹೇಗೆ?

Halloween Makeup Removing Tips

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಿತ್ರ-ವಿಚಿತ್ತ್ರ ಮೇಕಪ್‌ ಹ್ಯಾಲೋವೀನ್‌ ಪಾರ್ಟಿಯ ಸಾಮಾನ್ಯ ದೃಶ್ಯ. ಒಬ್ಬರಿಗಿಂತ ಒಬ್ಬರು ವೈವಿಧ್ಯಮಯ ಸ್ಕೇರಿ ಮೇಕಪ್‌ನಲ್ಲಿ ಕಾಣಿಸಿಕೊಳ್ಳುವುದು ಇಲ್ಲಿ ಸಾಮಾನ್ಯ. ಎಷ್ಟೇ ಎಚ್ಚರಿಕೆ ವಹಿಸಿ, ಈ ರೀತಿಯ ಮೇಕಪ್‌ ಮಾಡಿದರೂ ಕೆಲವೊಮ್ಮೆ ನಂತರದ ದಿನಗಳಲ್ಲಿ ತ್ವಚೆ ಹಾಳಾಗುತ್ತದೆ. ಕೆಲವೊಮ್ಮೆ ಮೊಡವೆಗಳು ಮೂಡುತ್ತವೆ. ಇನ್ನು ಕೆಲವರಿಗೆ ಅಲರ್ಜಿಯುಂಟಾಗುತ್ತದೆ. ಕ್ಷಣಿಕ ಮೇಕಪ್‌ ಖುಷಿ ಕೆಲವೊಮ್ಮೆ ನಂತರದ ದಿನಗಳಲ್ಲಿ ತ್ವಚೆಯ ಸಮಸ್ಯೆ ಎದುರಿಸುವಂತೆ ಮಾಡುತ್ತವೆ. ಹಾಗಾಗಿ ಈ ರೀತಿಯ ಮೇಕಪ್‌ ಮಾಡುವಾಗ ಹಾಗೂ ತೆಗೆಯುವಾಗ (Halloween Makeup Removing Tips) ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್‌ ಆರ್ಟಿಸ್ಟ್ಸ್.

ಫೇಸ್‌ ಪೇಂಟ್‌ ಕ್ಲೆನ್ಸ್‌ ಮಾಡಿ

ಕೆಲವರು ಮುಖಕ್ಕೆ ಆಯಿಲ್‌ ಫೇಸ್‌ ಪೇಂಟ್‌ ಮಾಡಿಸುತ್ತಾರೆ. ಕೆಲವರು ಮೇಕಪ್‌ ಪ್ರಾಡಕ್ಟ್‌ ಬಳಸುತ್ತಾರೆ. ಫೇಸ್‌ ಪೇಂಟ್‌ ಆದಲ್ಲಿ ವಾಟರ್‌ ಬೇಸ್ಡ್ ಕ್ಲೆನ್ಸರ್‌ ಬಳಸಬಹುದು. ಆಯಿಲ್‌ ಬೇಸ್ಡ್ ಆದಲ್ಲಿ ಕ್ಲೆನ್ಸಿಂಗ್‌ ಆಯಿಲ್‌ ಅಥವಾ ಮೇಕಪ್‌ ರಿಮೂವರ್‌ನಿಂದಲೇ ತೆಗೆಯಬಹುದು.

ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ಮೇಕಪ್‌

ನಿಮ್ಮ ತ್ವಚೆ ಸೆನ್ಸಿಟೀವ್‌, ಜಿಡ್ಡಿನಂಶ, ಒರಟು ಹಾಗೂ ಮಿಕ್ಸ್ ತ್ವಚೆಯೇ ಎಂಬುದನ್ನು ಮೊದಲು ಕಂಡುಕೊಳ್ಳಿ. ಸೆನ್ಸಿಟೀವ್‌ ತ್ವಚೆಯಾದಲ್ಲಿ ಆದಷ್ಟೂ ಫೇಸ್‌ ಪೇಂಟ್‌ ಬೇಡ. ಗಾಢ ಮೇಕಪ್‌ ಆವಾಯ್ಡ್‌ ಮಾಡಿ. ಇಲ್ಲವಾದಲ್ಲಿ ಸಮಸ್ಯೆಯುಂಟಾಗಬಹುದು.

ಮಕ್ಕಳ ಸುಕೋಮಲ ತ್ವಚೆಗಾದಲ್ಲಿ

ಮಕ್ಕಳ ಮುಖಕ್ಕೆ ಪೇಂಟ್‌ ಆವಾಯ್ಡ್‌ ಮಾಡಿ. ಹಚ್ಚಿದರೂ ಕೆಮಿಕಲ್‌ರಹಿತ ಪೇಂಟ್‌ ಬಳಸಿ. ಹೋಗಲಾಡಿಸಲು ಬೇಬಿ ಆಯಿಲ್‌ ಬಳಸಬಹುದು. ಮೈಲ್ಡ್ ಫೇಸ್‌ ವಾಶ್‌ನಿಂದ ತೊಳೆಯಬಹುದು. ನಂತರ ಕೋಲ್ಡ್‌ ಕ್ರೀಮ್‌ ಹಚ್ಚಿ.

ಕೊಬ್ಬರಿ ಎಣ್ಣೆ ಬಳಕೆ

ಕೊಬ್ಬರಿ ಎಣ್ಣೆಯು ಮುಖದ ಗಾಢ ಮೇಕಪ್‌ ಹಾಗೂ ಪೇಂಟ್‌ ತೆಗೆಯುವುದು. ಹತ್ತಿಯನ್ನು ಬಳಸಿ ಮುಖಕ್ಕೆ ಲೇಪಿಸಿ, ತೆಗೆಯಬಹುದು. ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ವಾಶ್‌ ಮಾಡಬಹುದು.

ಫೇಸ್‌ ಪೇಂಟ್‌ ಬದಲು ಮೇಕಪ್‌ ಉತ್ಪನ್ನಗಳನ್ನೇ ಬಳಸಿ

ಫೇಸ್‌ ಪೇಂಟ್‌ ಬದಲು ತಮ್ಮ ಬಳಿಯಿರುವ ಮೇಕಪ್‌ ಪ್ರಾಡಕ್ಟ್‌ಗಳನ್ನು ಬಳಸಿದಲ್ಲಿ ಹೆಚ್ಚು ತಲೆ ಬಿಸಿಯಿರದು. ತ್ವಚೆ ಹಾಳಾಗದು ಹಾಗೂ ತೆಗೆಯಲು ಸುಲಭ. ಆಯಾ ಬ್ರಾಂಡ್‌ನ ಮೇಕಪ್‌ ರಿಮೂವರ್‌ನಿಂದ ಸುಲಭವಾಗಿ ತೆಗೆಯಬಹುದು.

ಪೆಟ್ರೊಲಿಯಂ ಜೆಲ್ಲಿ ಅಥವಾ ವ್ಯಾಸಲೀನ್‌

ಐಬ್ರೋ ಸುತ್ತಮುತ್ತಲಿನ ಜಾಗದ ಗಾಢವಾದ ಮೇಕಪ್‌ ತೆಗೆಯಲು ವ್ಯಾಸಲೀನ್‌ ಬಳಸಿ. ಹತ್ತಿಯಿಂದ ಒರೆಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Halloween Nailart: ಭಯ ಮೂಡಿಸುವ ಹ್ಯಾಲೋವೀನ್‌ ಸ್ಪೂಕಿ ನೇಲ್‌ಆರ್ಟ್

Exit mobile version