ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಲೋವೀನ್ ಪಾರ್ಟಿ ಇದೀಗ ಉದ್ಯಾನನಗರಿಯಲ್ಲೂ ಕಾಮನ್ ಆಗುತ್ತಿದೆ. ಬೆಂಗಳೂರಿನ ಅಪಾರ್ಟ್ಮೆಂಟ್ ಕಲ್ಚರ್‌ನಲ್ಲಿ ಇದು ಸೇರಿ ಹೋಗಿದ್ದು, ಸ್ಪೂಕಿ ಔಟ್‌ಫಿಟ್‌ನಲ್ಲಿ ಭಯಾನಕವಾಗಿ ಕಾಣಿಸಿಕೊಂಡು ಎಂಜಾಯ್ ಮಾಡುವುದು ಒಂದು ಭಾಗವಾಗಿದೆ. ವಿದೇಶದ ಈ ಕಾನ್ಸೆಪ್ಟನ್ನು ಹ್ಯಾಲೋವೀನ್ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು, ಇದಕ್ಕಾಗಿ ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 5 ಸಿಂಪಲ್ ಐಡಿಯಾ (Halloween Party Dressing Tips) ನೀಡಿದ್ದಾರೆ.
ಹಳೆಯ ಕಾಸ್ಟ್ಯೂಮ್‌ಗೆ ಹೊಸ ಲುಕ್ ನೀಡಿ
ಪ್ರತಿವರ್ಷ ಹೊಸ ಹ್ಯಾಲೋವೀನ್ ಕಾಸ್ಟ್ಯೂಮ್ ಖರೀದಿಸಲಾಗದಿದ್ದಲ್ಲಿ, ಚಿಂತೆ ಬೇಡ. ಹಳೆಯ ಕಾಸ್ಟ್ಯೂಮ್‌ಗೆ ಹೊಸ ಲುಕ್ ನೀಡಿ. ಔಟ್‌ಲುಕ್ ಬದಲಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಅದಲು ಬದಲು ಮಾಡಿ ಧರಿಸಿ. ಪದೇ ಪದೇ ಹೊಸದನ್ನು ಕೊಳ್ಳುವ ಬದಲು ರಿಕ್ರಿಯೇಟ್ ಮಾಡಿ.
ಪಾರ್ಟಿಯ ಥೀಮ್‌ಗೆ ತಕ್ಕಂತಿರಲಿ ಲುಕ್
ನೀವು ಅಟೆಂಡ್ ಮಾಡುತ್ತಿರುವ ಸ್ಪೂಕಿ ಪಾರ್ಟಿಗೆ ತಕ್ಕಂತೆ ನಿಮ್ಮ ಔಟ್‌ಫಿಟ್ ಮ್ಯಾಚ್ ಮಾಡಿ. ನಾನಾ ಥೀಮ್‌ಗಳಲ್ಲಿ ಅತಿ ಸುಲಭವಾಗಿ ಹೆಚ್ಚು ಭಯಾನಕವಾಗಿ ಕಾಣಿಸಿಕೊಳ್ಳಬಹುದಾದ ಡ್ರೆಸ್ ಆಯ್ಕೆ ಮಾಡಿ.
ಮೇಕಪ್‌ನಿಂದ ಭಯಾನಕ ಲುಕ್
ಔಟ್‌ಫಿಟ್ ಅಥವಾ ಸ್ಪೂಕಿ ಕಾಸ್ಟ್ಯೂಮ್ ಹೆಚ್ಚು ಭಯಾನಕವಾಗಿಲ್ಲದಿದ್ದಲ್ಲಿ, ಮೇಕಪ್ ಬದಲಿಸಿ. ಭಯಾನಕ ಲುಕ್ ನೀಡುವ ಸ್ಪೂಕಿ ಮೇಕಪ್ ಮಾಡಿ. ಇದು ಕಂಪ್ಲೀಟ್ ಲುಕ್ ಭಯಾನಕವಾಗಿಸುತ್ತದೆ. ಮುಖದ ಜೊತೆಗೆ ಇಡೀ ಲುಕ್ಕನ್ನು ಚೇಂಜ್ ಮಾಡುತ್ತದೆ.
ಆನ್‌ಲೈನ್‌ನಲ್ಲಿ ಆಯ್ಕೆ ಹೆಚ್ಚು
ಇದೀಗ ಆನ್‌ಲೈನ್‌ನಲ್ಲೂ ಲೆಕ್ಕವಿಲ್ಲದಷ್ಟೂ ಬಗೆಯ ಹ್ಯಾಲೋವೀನ್ ಉಡುಪುಗಳು ಲಭ್ಯ. ಆದಷ್ಟೂ ಯೂನಿಸೆಕ್ಸ್ ಹಾಲೋವಿನ್ ಔಟ್‌ಫಿಟ್ ಆಯ್ಕೆ ಮಾಡಿ. ಇದು ಹುಡುಗ-ಹುಡುಗಿ ಇಬ್ಬರೂ ಧರಿಸಬಹುದು. ಮಕ್ಕಳಿಗಾದಲ್ಲಿ ಆದಷ್ಟೂ ಕ್ಯೂಟ್ ಸ್ಪೂಕಿ ಡ್ರೆಸ್ ಆಯ್ಕೆ ಮಾಡಿ.
ಚಿತ್ರ-ವಿಚಿತ್ರ ಹೇರ್‌ಸ್ಟೈಲ್
ಹ್ಯಾಲೋವೀನ್ ಔಟ್‌ಫಿಟ್ ಮಾತ್ರವಲ್ಲ ಚಿತ್ರ-ವಿಚಿತ್ರ ಹೇರ್‌ಸ್ಟೈಲ್ ಕೂಡ ಭಯಾನಕವಾಗಿ ಕಾಣುವಂತೆ ಮಾಡುತ್ತವೆ. ಕೂದಲನ್ನು ಪ್ರಯೋಗ ಮಾಡಲು ಇಚ್ಛಿಸದವರು, ಕೃತಕ ವಿಗ್ ಧರಿಸಬಹುದು. ಇವು ಬಾಡಿಗೆಗೆ ದೊರೆಯುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sequence Blouse Fashion: ಸೆಲೆಬ್ರೆಟಿ ಲುಕ್‌ಗಾಗಿ ಬೇಡಿಕೆ ಹೆಚ್ಚಿಸಿಕೊಂಡ ಮಿನುಗುವ ಸಿಕ್ವಿನ್ಸ್ ಬ್ಲೌಸ್