Site icon Vistara News

Ear Cleaning: ದಿನನಿತ್ಯ ಕಿವಿ ಶುಚಿಗೊಳಿಸುವುದು ಅಗತ್ಯವೇ ? ಈ ಬಗ್ಗೆ ತಜ್ಞರ ಸಲಹೆಯೇನು?

Health Tips for ear cleaning

ದುಕಿನಲ್ಲಿ ಆರೋಗ್ಯ (Health) ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ತುಂಬಾನೆ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯ ಶುಚಿಯಲ್ಲಿ ಅನೇಕರು ಕಿವಿ ಶುಚಿತ್ವಕ್ಕೆ (Ear Cleaning) ಕೂಡ ಮಹತ್ವ ನೀಡುತ್ತಾರೆ. ಹೀಗಾಗಿ ಕಿವಿ ಸ್ವಚ್ಛತೆಗಾಗಿ ಅನೇಕರು ಕಿವಿಯೊಳಗೆ ಪಿನ್‌ ಹಾಕುವುದು, ಬಡ್ಸ್‌ ಹಾಕುವುದು(Ear Buds), ನೀರು ಅಥವಾ ಸೋಪಿನ ನೀರನ್ನು ಹಾಕಿ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳನ್ನು ಹೊತ್ತ ಅನೇಕರು ವೈದ್ಯರ ಬಳಿ ಬಂದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎನ್ನುತ್ತಾರೆ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ಸುನಿತಾ ಮಾಧವನ್(Dr Sunita Madhavan).

ಕಿವಿ ಶುಚಿತ್ವಕ್ಕೆ ಜನರು ಮಹತ್ವ ಕೊಡುವುದೇಕೆ? ಅದನ್ನು ಪ್ರತಿನಿತ್ಯ ಶುಚಿಗೊಳಿಸುವುದು ಅನಿವಾರ್ಯವೇ ?

ದೈಹಿಕ ಆರೋಗ್ಯ ಎಂದ ಮೇಲೆ ಕಿವಿ ಶುಚಿತ್ವವೂ ಕೂಡ ಸೇರುತ್ತದೆ. ಹೀಗಾಗಿ ಜನರು ಕಿವಿಯೊಳಗೆ ಬಡ್ಸ್‌ ಹಾಕುವುದು, ಪಿನ್‌ ಹಾಕಿ ಶುಚಿ ಮಾಡಲು ಮುಂದಾಗುತ್ತಾರೆ. ಆದರೆ ಇದೊಂದು ಅಪಾಯಕಾರಿ ಕಾರ್ಯ ಎಂದರೆ ತಪ್ಪಿಲ್ಲ. ಏಕೆಂದರೆ ಈ ರೀತಿಯಾಗಿ ಶುಚಿಗೊಳಿಸಲು ಮುಂದಾಗುವವರು ಅನೇಕ ರೀತಿಯ ಕಿವಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣಬಹುದು. ಹಾಗಾದ್ರೆ ಕಿವಿಯನ್ನು ಶುಚಿಗೊಳಿಸುವುದು ಹೇಗೆ ಎನ್ನುತ್ತೀರಾ,…. ಕಿವಿಯು ಸ್ವಯಂ ಶುಚಿಗೊಳಿಸುವ ಕಾರ್ಯವಿಧಾನವನ್ನು ಹೊಂದಿದೆ. ಹೀಗಾಗಿ ಕಿವಿಯಲ್ಲಿರುವ ವ್ಯಾಕ್ಸ್‌ ಕಾಲಕ್ರಮೇಣ ತನ್ನಿಂದ ತಾನೆ ಹೊರಬರುತ್ತದೆ. ಹಾಗಾಗಿ ನಾವು ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸಬೇಕಾಗಿಲ್ಲ. ಅದಾಗ್ಯೂ ಕಿವಿ ಸ್ವಚ್ಚಗೊಳಿಸಬೇಕೆಂದರೆ ಒಂದು ಮೃದು ಬಟ್ಟೆಯಿಂದ ಸ್ವಚ್ಚಗೊಳಿಸಿದರೆ ಸಾಕು ಎನ್ನುತ್ತಾರೆ ತಜ್ಞರು.

ಪ್ರತಿನಿತ್ಯ ಕಿವಿ ಶುಚಿ ಮಾಡುವುದರಿಂದ ಆಗುವ ತೊಂದರೆಗಳೇನು ?

ಕಿವಿ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪ್ರತಿದಿನ ಕಿವಿ ತೊಳೆಯುತ್ತಿದ್ದರೆ ಅದರ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಳಿಕ ತುರಿಕೆಯಾಗುವುದು ಅಥವಾ ಗಾಯಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ಕಿವಿಯನ್ನು ತೊಳೆಯುವುದು ಒಳ್ಳೆಯದಲ್ಲ. ಕೆಲವೊಮ್ಮೆ ಕಲುಷಿತ ನೀರಿನಲ್ಲಿ ಈಜಿದರೂ ಕೂಡ ಸೋಂಕುಗಳು ಕಾಣಬರುತ್ತವೆ. ಕಿವಿ ಸ್ವಚ್ಛತೆಗಾಗಿ ಪಿನ್‌ ಹಾಕುವುದು, ಬಡ್ಸ್‌ ಹಾಕುವುದರಿಂದಲೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ತಜ್ಞರ ಎಚ್ಚರಿಕೆ.

ಕಿವಿ ಶುಚಿಗೊಳಿಸಲು ವೈದ್ಯರ ಸಲಹೆಯೇನು ?

ಕಿವಿ ಶುಚಿಗಾಗಿ ಏನೆಲ್ಲಾ ಮಾಡಬಾರದು ?

Exit mobile version