ಬೆಂಗಳೂರು: ಮಂಡಿ ನೋವಿನ (Knee Problem) ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವವರು ಹಾಗೂ ವೈದ್ಯರ ಬಳಿ ಎಷ್ಟೇ ಚಿಕಿತ್ಸೆ ಪಡೆದರೂ ಈ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಭಾವಿಸಿರುವವರಿಗೆ ಸಂತಸದ ಸುದ್ದಿ ಇಲ್ಲಿದೆ. ಅದೇನೆಂದರೆ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಕಡಿಮೆ ಅವಧಿಯಲ್ಲಿ ಮಂಡಿ ಬದಲಿ ಶಸ್ತ್ರಚಿಕಿತ್ಸೆ (ಫಾಸ್ಟ್ ಟ್ರ್ಯಾಕ್ Knee Replacement Surgery) ಮೂಲಕ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಬೆಂಗಳೂರಿನ (Bengaluru Doctors) ಸಾಗರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿಸಿದ್ದಾರೆ(Sagar Hospital).
ಮಂಡಿ ನೋವಿನ ಸಮಸ್ಯೆಯನ್ನು ಹೊಂದಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ಬೆಂಗಳೂರಿನ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು. 55 ವರ್ಷದ ಮಹಿಳೆಯು 125 ಕೆ.ಜಿ ತೂಕ ಹೊಂದಿದ್ದು, ಎರಡೂ ಕಾಲಿನ ಮಂಡಿ ಸಮಸ್ಯೆಯಿಂದ ಬಳಲುತ್ತಿದ್ದರು. ಅದಲ್ಲದೆ ರೋಗಿಯು ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿತ್ತು. ಆದರೆ ನುರಿತ ವೈದ್ಯರ ತಂಡದ ಬದ್ಧತೆಯಿಂದ ಮಹಿಳೆಯ ಎರಡೂ ಕಾಲಿನ ಮಂಡಿ ಬದಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಈ ಪ್ರಕರಣದಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಕಾರ್ಯಕ್ಕೆ ಸಾಕ್ಷಿಯಾಗಿದೆ ಬೆಂಗಳೂರಿನ ಸಾಗರ್ ಆಸ್ಪತ್ರೆ.
ಸಾಮಾನ್ಯವಾಗಿ ಎರಡೂ ಕಾಲುಗಳ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಏಕಕಾಲದಲ್ಲಿ ನಡೆಸುವುದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಸಾಗರ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ತಜ್ಞರಾದ ಡಾ.ಯೋಗೀಶ್ವರ್ ಎ.ವಿ ನೇತೃತ್ವದ ವೈದ್ಯರ ತಂಡವು ವಿನೂತನ ವಿಧಾನಗಳನ್ನು ಅನುಸರಿಸುವ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿಸಿದ್ದಾರೆ.
ಈ ಯಶಸ್ವಿ ಪ್ರಕರಣದಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಶಸ್ತ್ರಚಿಕಿತ್ಸೆ ನಡೆದ ಮೊದಲ ದಿನದಂದೇ ಮಹಿಳೆಯು ವಾಕರ್ ಸಹಾಯದಿಂದ ನಡೆಯುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಯಶಸ್ವಿ ಚಿಕಿತ್ಸೆಯ ಫಲಿತಾಂಶವು ವೈದ್ಯಕೀಯ ಕ್ಷೇತ್ರದಲ್ಲಿ ಬೆರಗು ಮೂಡಿಸಿದೆ. ಮಹಿಳೆಯು ಶಸ್ತ್ರಚಿಕಿತ್ಸೆ ಪಡೆದ ಐದು ದಿನದೊಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸಾಗರ್ ಆಸ್ಪತ್ರೆಯು ಪರಿಣಾಮಕಾರಿ ಚಿಕಿತ್ಸಾ ವಿಧಾನ ಮತ್ತು ರೋಗಿಯ ಆರೈಕೆಯಲ್ಲಿನ ಬದ್ಧತೆ ಮತ್ತಷ್ಟು ಸ್ಪಷ್ಟವಾಗಿದೆ.
ಈ ಚಿಕಿತ್ಸೆಯ ವೇಳೆ ರೋಗಿಯು ಮೊಣಕಾಲು ನೋವು ಮತ್ತು ಸ್ಥೂಲಕಾಯ ಸಮಸ್ಯೆಗಳ ಹೊರತಾಗಿ, ಅಧಿಕ ರಕ್ತದೊತ್ತಡವನ್ನು ಸಹ ಹೊಂದಿದ್ದರು. ಪರಿಸ್ಥಿತಿಯನ್ನು ಅವಲೋಕಿಸಿದ ಸಾಗರ್ ಆಸ್ಪತ್ರೆಯ ವೈದ್ಯರ ತಂಡವು ಮೊದಲು ರೋಗಿಯ ಆರೋಗ್ಯವನ್ನು ಸ್ಥಿರಗೊಳಿಸಲು ಸಮಯ ತೆಗೆದುಕೊಂಡರು. ಒಂದು ದಿನದ ನಂತರ ಚಿಕಿತ್ಸೆಗೆ ಮುಂದಾಗಿದ್ದಾರೆ. ಈ ಮೂಲಕ ವೈದ್ಯರು ಚಿಕಿತ್ಸೆಯ ಜೊತೆಗೆ ರೋಗಿಯ ಆರೋಗ್ಯ ಸ್ಥಿತಿಗತಿಗಳತ್ತ ಕಾಳಜಿ ವಹಿಸಿರುವುದೂ ಕೂಡ ವಿಶೇಷ ಸಂಗತಿ.
ರೋಗಿಯ ಮೊಣಕಾಲಿನ ಹೊಲಿಗೆಗಳನ್ನು ಕೇವಲ 15 ದಿನಗಳಲ್ಲಿ ತೆಗೆದು ಹಾಕಲಾಗಿದ್ದು, ಸ್ವತಃ ಅವರೇ ಆತಂಕರಹಿತವಾಗಿ ನಡೆದಾಡುವಂತಾಗಿದ್ದಾರೆ. ಅನೇಕ ಸವಾಲುಗಳ ಹೊರತಾಗಿಯೂ ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿದ್ದು, ರೋಗಿಯು ಶೀಘ್ರ ಚೇತರಿಕೆ ಕಂಡಿರುವುದು ವೈದ್ಯರ ನೈಪುಣ್ಯತೆಗೆ ಸಾಕ್ಷಿಯಾಗಿದೆ.
ಈ ಸುದ್ದಿಯನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ