Site icon Vistara News

Pervez Musharraf Died: ಮುಷರಫ್‌ ಸಾವಿಗೆ ಕಾರಣವಾದ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?

ನವ ದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ(Pervez Musharraf Died). ಕಳೆದ ಕೆಲವು ತಿಂಗಳಿನಿಂದ ಅವರು ಯುಎಇನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾದರೆ ಮುಷರಫ್‌ ಅವರಿಗೆ ಏನು ಆಗಿತ್ತು(Amyloidosis)? ಅವರ ಅಂಗಗಳ ಕಾರ್ಯಕ್ಷಮತೆ ಕ್ಷೀಣಿಸಲು ಏನು ಕಾರಣ? ಇಲ್ಲಿದೆ ಮಾಹಿತಿ.

ಮುಷರಫ್‌ ಅವರ ಈ ಅಪರೂಪದ ಸಮಸ್ಯೆಗೆ ಅಮೈಲೋಡೋಸಿಸ್‌ (Amyloidosis) ಎಂದು ಹೇಳಲಾಗುತ್ತದೆ. ದೇಹದ ಪ್ರಮುಖ ಅಂಗಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಪ್ರೊಟೀನ್ ಜಮಾವಣೆಗೊಂಡು, ಆ ಅಂಗಗಳ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ಅಮೈಲಾಯ್ಡ್‌ ಸಾಮಾನ್ಯವಾಗಿ ದೇಹದಲ್ಲಿ ಇರುವುದಿಲ್ಲ. ಆದರೆ ಬೇರೆ ಬೇರೆ ರೀತಿಯ ಪ್ರೊಟೀನ್‌ಗಳಿಂದ ಇವು ರೂಪುಗೊಳ್ಳುವುದಕ್ಕೆ ಸಾಧ್ಯವಿದೆ. ಹೃದಯ, ಮೂತ್ರಪಿಂಡ, ಯಕೃತ್‌ ಮತ್ತು ಜೀರ್ಣಾಂಗದಂಥ ಪ್ರಮುಖ ಭಾಗಗಳಲ್ಲಿ ಇವು ರೂಪುಗೊಂಡು ಪ್ರಾಣಾಪಾಯನ್ನೂ ತರಬಹುದು.

‌2018ರಲ್ಲಿ ಅವರಿಗೆ ಅಮೈಲೋಡೋಸಿಸ್‌ ಇರುವುದು ಪತ್ತೆಯಾಗಿತ್ತು. ಇದರಿಂದ ನರ ಮತು ಹೃದಯ ಸಂಬಂಧೀ ಸಮಸ್ಯೆಗಳಿಗೆ ಅವರು ಚಿಕಿತ್ಸೆ ತೆಗೆದುಕೊಳ್ಳುವಂತಾಗಿತ್ತು. ಇದೀಗ ಈ ಸಮಸ್ಯೆ ಉಲ್ಭಣಗೊಂಡಿದ್ದು, ಅವರ ನರಮಂಡಲ ಸಂಪೂರ್ಣ ದುರ್ಬಲಗೊಂಡಿದೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.

ಕಾರಣಗಳೇನು?
ಅಮೈಲೋಡೋಸಿಸ್‌ ಎನ್ನುವುದು ನಾನಾ ಆರೋಗ್ಯ ಸಮಸ್ಯೆಗಳ ಉಪ ಉತ್ಪನ್ನ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಜೀನ್‌ ಮ್ಯುಟೇಷನ್‌ನಿಂದ ಈ ಸಮಸ್ಯೆ ಬರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕಾರಣಗಳೇ ಗೊತ್ತಾಗುವುದಿಲ್ಲ. ಅಮೈಲೋಡೋಸಿಸ್‌ನಲ್ಲಿ ಲೈಟ್‌ ಚೈನ್‌ ಅಮೈಲೋಡೋಸಿಸ್‌, ಎಎ ಅಮೈಲೋಡೋಸಿಸ್‌, ಟ್ರಾನ್ಸ್‌ ಥೈರೆಟಿನ್‌ ಅಮೈಲೋಡೋಸಿಸ್‌ ಎಂಬ ಮೂರು ಪ್ರಕಾರಗಳಿವೆ.

ಇದನ್ನೂ ಓದಿ: Pervez Musharraf Died: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಪ್ರಮುಖ ಲಕ್ಷಣಗಳು
– ದೇಹ ತುಂಬ ದುರ್ಬಲವಾಗುವುದು, ಆಯಾಸ
– ಯಾವುದೇ ಕಾರಣವಿಲ್ಲದೆ ದೇಹದ ತೂಕ ಕುಸಿತ
– ಸೊಂಟ, ಕಾಲು, ಮೊಣಗಂಟು ಮತ್ತು ಪಾದಗಳಲ್ಲಿ ಊತ
– ಕೈ ಮತ್ತು ಪಾದಗಳಲ್ಲಿ ನೋವು, ಇರುವೆ ಹರಿದಂತಾಗುವುದು
– ಚರ್ಮದಲ್ಲಿ ಕೆಲವು ಕಡೆ ಉರಿಯೂತ
– ನಾಲಿಗೆ ದಪ್ಪ ಆಗುವುದು
– ಉಸಿರಾಟದ ಅವಧಿ ಕಡಿಮೆ, ಏದುಸಿರು

Exit mobile version