Pervez Musharraf Died: ಕಾರ್ಗಿಲ್‌ ಯುದ್ಧದ ಸಂಚುಕೋರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ - Vistara News

ಪ್ರಮುಖ ಸುದ್ದಿ

Pervez Musharraf Died: ಕಾರ್ಗಿಲ್‌ ಯುದ್ಧದ ಸಂಚುಕೋರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

1999ರಲ್ಲಿ ಕ್ಷಿಪ್ರ ಸೇನಾ ಕ್ರಾಂತಿ ನಡೆಸಿ ಪರ್ವೇಜ್ ಮುಷರಫ್ ಪಾಕಿಸ್ತಾನದ ನೇತೃತ್ವವನ್ನು ವಹಿಸಿಕೊಂಡಿದ್ದರು. ಮುಂದೆ 2001ರಲ್ಲಿ ತಾವೇ ಪಾಕಿಸ್ತಾನದ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದರು.

VISTARANEWS.COM


on

Pakistan former president Pervez Musharraf Dead
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf Died) ಅವರು ದುಬೈ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದುಬೈ ಆಸ್ಪತ್ರೆ ದಾಖಲಿಸಲಾಗಿತ್ತು. ಅವರ ಪಾರ್ಥಿವ ಶರೀರವನ್ನು ದುಬೈನಿಂದ ಪಾಕಿಸ್ತಾನಕ್ಕೆ ತರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಪಾಕಿಸ್ತಾನದಿಂದ ಹೊರಗಿದ್ದ ಅವರನ್ನು ವಾಪಸ್ ಸ್ವದೇಶಕ್ಕೆ ಕರೆ ತರುವ ಪ್ರಯತ್ನವು ಕಳೆದ ಒಂದು ವರ್ಷದಿಂದ ನಡೆದಿತ್ತು. ಅಮಿಲೋಯ್ಡೋಸಿಸ್ (Amyloidosis) ಎಂಬ ಕಾಯಿಲೆಯಿಂದ ಪರ್ವೇಜ್ ಅವರು ಬಳಲುತ್ತಿದ್ದರು.

2007ರಲ್ಲಿ ನಡೆದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಆರೋಪ ಎದುರಿಸುತ್ತಿರುವ ಮುಷರಫ್ ಕಳೆದ ಆರು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಮುಷರಫ್ ಅವರು, ಉಭಯ ರಾಷ್ಟ್ರಗಳ ನಡುವಿನ ಆಗ್ರಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು. ಆದರೆ, ಈ ಸಭೆ ವಿಫಲವಾಗಿತ್ತು.

ಇದನ್ನೂ ಓದಿ: ಮುಷರಫ್‌ಗೆ ಕಾಡುತ್ತಿದೆ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?

ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್ ಮುಷರಪ್ ಅವರು 1999ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಮುಂದೆ 2001ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 2008ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಬೆನಜೀರ್ ಭುಟ್ಟೋ ಹತ್ಯೆಯ ಆರೋಪದ ಹಿನ್ನೆಲೆಯಲ್ಲಿ ದೇಶವನ್ನು ಅವರು ತೊರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna : ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್​ ನೋಡಲು ನೂಕುನುಗ್ಗಲು!

Prajwal Revanna : ಕೇವಲ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ದೇಶವೇ ಕಂಡ ಅತ್ಯಂತ ದೊಡ್ಡ ಸೆಕ್ಸ್​ ಸ್ಕ್ಯಾಂಡಲ್​ನ ಆರೋಪಿ ಎನಿಸಿಕೊಂಡರು. ಹೀಗಾಗಿ ಪ್ರಜ್ವಲ್ ಅವರ ಬಗ್ಗೆ ಜನರ ಕೌತುಕ ಹೆಚ್ಚಾಗಿತ್ತು. ಅದು ಕೋರ್ಟ್​ ಆವರಣದಲ್ಲಿ ಪ್ರಕಟಗೊಂಡಿತು.

VISTARANEWS.COM


on

Prajwal Revanna
Koo

ಬೆಂಗಳೂರು : ಪೆನ್​ಡ್ರೈವ್​ ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನೋಡುವುದಕ್ಕಾಗಿ ಬೆಂಗಳೂರಿನ ಎಸಿಎಮ್​ಎಮ್​ ಕೋರ್ಟ್​ (ACMM) ಬಳಿ ನೂಕು ನುಗ್ಗಲು ಉಂಟಾಗಿತ್ತು. ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊಗಳನ್ನು ಕದ್ದು ಮುಚ್ಚಿ ನೋಡಿ ಚರ್ಚಿಸಿದ್ದ ಮಂದಿಯೆಲ್ಲ ಈ ಬಾರಿ ಕೋರ್ಟ್​ ಆವರಣದಲ್ಲಿ ನಿಂತು ಅವರನ್ನು ನೋಡಲು ಮುಗಿ ಬಿದ್ದರು. ವಕೀಲರು ಹಾಗೂ ಜೆಡಿಎಸ್​ ಹಾಗೂ ಪ್ರಜ್ವಲ್ ಅವರ ಅಭಿಮಾನಿಗಳೂ ಈ ವೇಳೆ ಕೋರ್ಟ್​ ಆವರಣದಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊಗಳ ಪೆನ್​ಡ್ರೈವ್​ ಚುನಾವಣೆ ವೇಳೆ ಹಾಸನ, ಮಂಡ್ಯ ಹಾಗೂ ಬೆಂಗಳೂರಿನ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ದೊರಕಿದ್ದವು. ಬಳಿಕ ಅದು ಡಿಜಿಟಲ್ ರೂಪ ಪಡೆದ ಎಲ್ಲೆಡೆ ಮೊಬೈಲ್ ಮೂಲಕ ಪ್ರಸರಣಗೊಂಡಿದ್ದವು. ಅಲ್ಲಿಯ ತನಕ ಕೇವಲ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ದೇಶವೇ ಕಂಡ ಅತ್ಯಂತ ದೊಡ್ಡ ಸೆಕ್ಸ್​ ಸ್ಕ್ಯಾಂಡಲ್​ನ ಆರೋಪಿ ಎನಿಸಿಕೊಂಡರು. ಹೀಗಾಗಿ ಪ್ರಜ್ವಲ್ ಅವರ ಬಗ್ಗೆ ಜನರ ಕೌತುಕ ಹೆಚ್ಚಾಗಿತ್ತು. ಅದು ಕೋರ್ಟ್​ ಆವರಣದಲ್ಲಿ ಪ್ರಕಟಗೊಂಡಿತು.

ಪ್ರಜ್ವಲ್​ ರೇವಣ್ಣ ಏಪ್ರಿಲ್​ 26ರಂದು ಜರ್ಮನಿಗೆ ಹಾರಿದ ಬಳಿಕದಿಂದ 33 ದಿನಗಳ ಕಾಲ ಅಲ್ಲೇ ಉಳಿದುಕೊಂಡಿದ್ದರು. ಅಂತೆಯೇ ಗುರುವಾರ ರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು.

ಇದನ್ನೂ ಓದಿ: Prajwal Revanna : ನನ್ನ ತೇಜೋವಧೆಯಾಗಿದೆ; ಪ್ರತಿ ದೂರು ನೀಡಲು ಪ್ರಜ್ವಲ್ ರೇವಣ್ಣ ಸಿದ್ಧತೆ

ಪ್ರಜ್ವಲ್​ ರೇವಣ್ಣ ಕೋರ್ಟ್​ಗೆ ಬರುತ್ತಾರೆ ಎಂದು ತಿಳಿದ ತಕ್ಷಣ ಜನರ ಕುತೂಹಲ ಹೆಚ್ಚಾಯಿತು. ತಕ್ಷಣ ಅಭಿಮಾನಿಗಳು, ಕುತೂಹಲಿಗರು ಹಾಗೂ ವಕೀಲರ ದಂಡು ಜಮಾಯಿಸಿತ್ತು. ಗಂಟೆಗಟ್ಟಲೆ ಕಾದ ಅವರೆಲ್ಲರೂ ಪ್ರಜ್ವಲ್ ಅವರನ್ನು ಪೊಲೀಸ್​ ಜೀಪ್​ನಲ್ಲಿ ಕರೆ ತರುವ ವೇಳೆ ಎದ್ದು ನೋಡಿದರು.

ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸುಮಾರು 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಭಾರತಕ್ಕೆ ಬಂದಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನು, ಶುಕ್ರವಾರ (ಮೇ 31) ಮಧ್ಯಾಹ್ನ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರೀ ಅನ್ನ-ಸಾಂಬಾರ್‌ ಸೇವಿಸಿ ನ್ಯಾಯಾಧೀಶರ ಎದುರು ಕೈಕಟ್ಟಿ ನಿಂತರು.

ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್‌ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್‌ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ. ಹೆದರಿಸಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಪ್ರಜ್ವಲ್‌ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.

Continue Reading

ಕರ್ನಾಟಕ

Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Prajwal Revanna Case: ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ಹಾಗೂ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ವಾದ ಮಂಡಿಸಿದರು. ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಅಶೋಕ್‌ ನಾಯ್ಕ್‌, ಜಾಮೀನು ನೀಡಬಹುದು ಎಂದು ಅರುಣ್‌ ವಾದ ಮಂಡಿಸಿದರು. ಇವರಿಬ್ಬರ ವಾದ-ಪ್ರತಿವಾದ ಹೇಗಿತ್ತು? ಸಂಕ್ಷಿಪ್ತ ವರದಿ ಇಲ್ಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನಗಳಿಂದ ವಿದೇಶದಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಬೆಂಗಳೂರಿಗೆ ವಾಪಸಾಗಿದ್ದು, ಎಸ್‌ಐಟಿ ಅಧಿಕಾರಿಗಳು ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ಹಾಗೂ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ವಾದ ಮಂಡಿಸಿದರು. ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಅಶೋಕ್‌ ನಾಯ್ಕ್‌, ಜಾಮೀನು ನೀಡಬಹುದು ಎಂದು ಅರುಣ್‌ ವಾದ ಮಂಡಿಸಿದರು. ಇವರಿಬ್ಬರ ವಾದ-ಪ್ರತಿವಾದ ಹೀಗಿದೆ…

“ಸಂತ್ರಸ್ತೆಯರ ಮೇಲೆ ಪ್ರಜ್ವಲ್‌ ರೇವಣ್ಣ ಬಲ ಪ್ರಯೋಗ ಮಾಡಿದ್ದಾರೆ. ಸಂತ್ರಸ್ತೆಯರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡಿದ್ದಾರೆ. ಬಟ್ಟೆ ಬಿಚ್ಚಿಸುವುದಕ್ಕೂ ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಯಾವುದೇ ವಿಡಿಯೊಗಳಲ್ಲೂ ಮುಖ ಕಾಣದಂತೆ ರೆಕಾರ್ಡ್ ಮಾಡಲಾಗಿದೆ. ಆದರೆ, ಅವರು ಪ್ರಜ್ವಲ್‌ ಎಂಬುದಕ್ಕೆ ಸಾಕ್ಷ್ಯಗಳಿವೆ. ಇದರಿಂದಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಹಾಗಾಗಿ, ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ವಹಿಸಬೇಕು” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಇದೇ ವೇಳೆ, ಪ್ರಕರಣದ ಮೆರಿಟ್ ಮೇಲೆ ವಾದ ಮಂಡಿಸಿ ಎಂದು ಕೋರ್ಟ್‌ ಅಶೋಕ್‌ ನಾಯ್ಕ್‌ ಅವರಿಗೆ ಸೂಚಿಸಿದರು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಕೆ.ಎನ್‌.ಶಿವಕುಮಾರ್ ಅವರು ಸೂಚಿಸಿದರು. “ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯೂಸ್‌ ಆಗಿದೆ. ಹಾಸನದಲ್ಲಿ ಧರಣಿ ಅಂತ ಮಾಹಿತಿ ಇದೆ” ಎಂದು ವಕೀಲ ಹೇಳಿದಾಗಕೇಸ್ ಮೆರಿಟ್ ಮೇಲೆ ವಾದಕ್ಕೆ ಜಡ್ಜ್ ಸೂಚನೆ ನೀಡಿದರು.

ಪ್ರಜ್ವಲ್‌ ಪರ ವಕೀಲ ಆಕ್ಷೇಪ

“ಎಸ್‌ಐಟಿ ಕಸ್ಟಡಿಗೆ ಕೇಳಿದ್ದಕ್ಕೆ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಆಕ್ಷೇಪ ವ್ಯಕ್ತಪಡಿಸಿದರು. ಏಪ್ರಿಲ್ 28ರಿಂದ ಮೇ 2ರವರೆಗೂ ಅತ್ಯಾಚಾರ ಅಂತ ಆರೋಪ ಇಲ್ಲ. ಪೊಲೀಸರು ತಮಗೆ ಇಷ್ಟ ಬಂದ ರೀತಿ ಪದಗಳನ್ನು ಬಳಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇವಲ CrPC 161 ಅಡಿ ಹೇಳಿಕೆ ಆಧರಿಸಿ ಅತ್ಯಾಚಾರ ಆರೋಪ ಕೇಸ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು.

ಪಟ್ಟು ಸಡಿಲಿಸದ ಅಶೋಕ್‌ ನಾಯ್ಕ್

ಅರುಣ್‌ ಅವರ ವಾದ ಮಂಡನೆಗೆ ಅಶೋಕ್‌ ನಾಯ್ಕ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು. “‘ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಭೀತಿಯಿಂದ ಈಗ ಬಂದಿದ್ದಾರೆ. ಇದಕ್ಕೆ ಮೊದಲೂ ಫ್ಲೈಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು. ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ತೀನಿ ಅಂತ ದೇಶ ಬಿಟ್ಟಿದ್ದರು. ತಲೆಮರೆಸಿಕೊಂಡು ಹೋಗಲೆಂದು ದೇಶ ಬಿಟ್ಟು ಓಡಿ ಹೋಗಿದ್ದರು. ಫಾರಿನ್‌ನಲ್ಲೇ ಅರೆಸ್ಟ್‌ ಆಗ್ತೀನಿ ಅನ್ನೋ ಭೀತಿಯಿಂದ ಬಂದಿದ್ದಾರೆ. ದೇಶ ಬಿಟ್ಟು ಓಡಿ ಹೋಗಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಸುದ್ದಿ ಆಗಿದೆ” ಎಂದು ತಿಳಿಸಿದರು.

ಸಂತ್ರಸ್ತೆ ಮನೆಗೆ ಬೆಂಕಿ ಬಿದ್ದಿದೆ, ಆ ಮಹಿಳೆಯರು ದೂರು ಕೊಡಲು ಬರುತ್ತಿಲ್ಲ. ಪ್ರಜ್ವಲ್ ಮೇಲಿರುವ ಎಲ್ಲ ಗಂಭೀರ ಆರೋಪಗಳ ಬಗ್ಗೆ ವಿಚಾರಣೆ ಮಾಡುವ ಅಗತ್ಯವಿದೆ. ಆರೋಪಿಯ ಮದರ್ ಡಿವೈಸ್, ರೆಕಾರ್ಡಿಂಗ್‌ ಡಿವೇಸ್‌ ಸೀಸ್‌ ಆಗಬೇಕು. ಆರೋಪಿ ಪ್ರಜ್ವಲ್‌ ರೇವಣ್ಣ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಬೇಕು. ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಕಸ್ಟಡಿ ಬೇಕು” ಎಂದರು.

ರೂಮ್‌ ಕ್ಲೀನ್‌ ಇಲ್ಲ ಎಂದು ಪ್ರಜ್ವಲ್‌ ಅಳಲು

ವಿಚಾರಣೆಯ ಆರಂಭದಲ್ಲಿಯೇ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಜಡ್ಜ್‌ ನಿಮ್ಮ ಹೆಸರೇನು ಎಂದು ಕೇಳಿದರು. ಹಾಗೆಯೇ, ಯಾವಾಗ ಬಂಧಿಸಿದರು? ಎಲ್ಲಿ ಬಂಧಿಸಿದರು ಎಂಬುದಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್.‌ “ಎಸ್‌ಐಟಿ ವಶದಲ್ಲಿದ್ದೇನೆ. ರೂಮ್‌ ಸರಿಯಾಗಿಲ್ಲ, ಟಾಯ್ಲೆಟ್‌ ಸರಿಯಾಗಿಲ್ಲ. ಕೋಣೆ ಕ್ಲೀನ್‌ ಇಲ್ಲ” ಎಂದು ತಿಳಿಸಿದರು. ಆಗ ನ್ಯಾಯಾಧೀಶರು, “ಎಸ್‌ಐಟಿಯವರು ಕಿರುಕುಳ ಕೊಟ್ರಾ” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಜ್ವಲ್‌, “ಕಿರುಕುಳ ಕೊಟ್ಟಿಲ್ಲ. ರೂಮ್‌ ಕ್ಲೀನ್‌ ಇಲ್ಲ, ಟಾಯ್ಲೆಟ್‌ ಸ್ವಚ್ಛವಾಗಿಲ್ಲ” ಎಂದರು.

ಇದನ್ನೂ ಓದಿ: Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Continue Reading

ಕ್ರಿಕೆಟ್

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

MS Dhoni’s last-ball Heroics: ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಇಂದಿಗೂ ಕೂಡ ಪ್ರತಿ ಟಿ20 ವಿಶ್ವಕಪ್​ ವೇಳೆ ನೆನಪಿಸಿಕೊಳ್ಳುತ್ತಾರೆ.

VISTARANEWS.COM


on

MS Dhoni's last-ball Heroics
Koo

ಬೆಂಗಳೂರು: 2007ರ ಚೊಚ್ಚಲ ವಿಶ್ವಕಪ್ ಗೆಲುವಿನ​ ಬಳಿಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಎಂದೂ ಮರೆಯದ ಪಂದ್ಯವೆಂದರೆ ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಮರೆಯಲು ಸಾಧ್ಯವೇ ಇಲ್ಲ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ 7 ವಿಕೆಟ್​ಗೆ 146 ರನ್​ ಬಾರಿಸಿತು. ಸಾಮಾನ್ಯ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 145 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಆರಾಮಾಗಿತ್ತು. ಆದರೆ ಮುಂದಿನೆರಡು ಎಸೆತಗಳಲ್ಲಿ ಹಾರ್ದಿಕ್‌ ಪಾಂಡ್ಯ ಬಾಂಗ್ಲಾದ ಸತತ 2 ವಿಕೆಟ್‌ ಎಗರಿಸಿದರು. ಕೊನೆಯ ಎಸೆತದಲ್ಲಿ ಬಾಂಗ್ಲಾಕ್ಕೆ ಗೆಲುವಿಗೆ ಎರಡು ರನ್‌ ಗಳಿಸಬೇಕಾದ ಒತ್ತಡ ಎದುರಾಗಿತ್ತು.

ಒಂದು ರನ್​ ಗಳಿಸುತ್ತಿದ್ದರೂ ಪಂದ್ಯವನ್ನು ಟೈ ಮಾಡಬಹುದಿತ್ತು. ಹಾರ್ದಿಕ್‌ ಪಾಂಡ್ಯ ಎಸೆದ ಕೊನೆಯ ಎಸೆತವನ್ನು ಶುವಗತಗೆ ಬಾರಿಸಲು ಆಗಲಿಲ್ಲ. ಚೆಂಡು ಕೀಪರ್​ ಕೈ ಸೇರಿತು. ಆದರೂ ಇನ್ನೊಂದು ತುದಿಯಲ್ಲಿದ್ದ ಮುಸ್ತಫಿಜುರ್‌ ರೆಹಮಾನ್‌ ರನ್‌ ಗಳಿಸಲು ಓಡಿದರು. ಈ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ಅಚ್ಚರಿಯದ್ದಾಗಿತ್ತು. ಅವರು ದೂರದಿಂದಲೇ ಚೆಂಡನ್ನು ವಿಕೆಟ್‌ನತ್ತ ಎಸೆಯದೇ, ಅತಿ ವೇಗವಾಗಿ ಓಡಿಬಂದು ನೇರವಾಗಿ ಬೇಲ್ಸ್‌ ಎಗರಿಸಿದರು. ಕೂದಲೆಳೆ ಅಂತರದಲ್ಲಿ ಮುಸ್ತಫಿಜುರ್‌ ರನೌಟಾದರು. ಭಾರತಕ್ಕೆ 1 ರನ್‌ ಜಯ ಲಭಿಸಿತು. ಧೋನಿ ಜತೆಗೆ ಪಾಂಡ್ಯ ಕೂಡ ಗೆಲುವಿನ ಹೀರೊ ಎನಿಸಿಕೊಂಡರು. ಅಂದಿನ ಈ ರನೌಟ್​ ವಿಡಿಯೊವನ್ನು ಈ ಬಾರಿಯ ಟೂರ್ನಿಗೂ ಮುನ್ನ ಐಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಶ್ರೀಶಾಂತ್‌ ಕ್ಯಾಚ್‌; ಭಾರತಕ್ಕೆ ವಿಶ್ವಕಪ್‌


2007ರ ಟಿ20 ವಿಶ್ವಕಪ್‌ ಫೈನಲ್‌ ಸೆ.24ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ ರೋಚಕವಾಗಿ 5 ರನ್‌ಗಳಿಂದ ಗೆದ್ದಿದ್ದು ಮಾತ್ರವಲ್ಲ, ಟಿ20 ಇತಿಹಾಸದ ಮೊದಲ ವಿಶ್ವಕಪ್ಪನ್ನು ಜೈಸಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ ಬೇಕಿತ್ತು. ಜೋಗಿಂದರ್‌ ಶರ್ಮ ಈ ಓವರ್​ ಎಸೆದಿದ್ದರು. ಪಾಕ್​ ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

Continue Reading

ಕರ್ನಾಟಕ

Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Prajwal Revanna Case: ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್‌ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್‌ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ ಎಂದು ಹೇಳಿದರು.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸುಮಾರು 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಭಾರತಕ್ಕೆ ಬಂದಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನು, ಶುಕ್ರವಾರ (ಮೇ 31) ಮಧ್ಯಾಹ್ನ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರೀ ಅನ್ನ-ಸಾಂಬಾರ್‌ ಸೇವಿಸಿ ನ್ಯಾಯಾಧೀಶರ ಎದುರು ಕೈಕಟ್ಟಿ ನಿಂತರು.

ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್‌ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್‌ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ. ಹೆದರಿಸಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಪ್ರಜ್ವಲ್‌ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.

ಒಂದೇ ದಿನ ಕಸ್ಟಡಿ ಸಾಕು ಎಂದ ಎಂಪಿ ಪರ ವಕೀಲ

ಅಶೋಕ್‌ ನಾಯ್ಕ್‌ ವಾದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್‌ ಪ್ರತಿವಾದ ಮಂಡಿಸಿದರು. ಪೊಲೀಸರು ತಮಗೆ ಇಷ್ಟ ಬಂದ ಹಾಗೆ ಪ್ರಕರಣಗಳನ್ನು ದಾಖಲಿಸಿ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಕೇಸ್‌ ಅಡಿಯಲ್ಲಿ ಅವರಿಗೆ ಜಾಮೀನು ನೀಡಬಹುದು.‌ ಜಾಮೀನು ಸಿಗುವ ಪ್ರಕರಣದಲ್ಲಿ ಜಾಮೀನುರಹಿತ ಕೇಸ್‌ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಅತ್ಯಾಚಾರ ಎಂಬ ಕೇಸ್‌ ದಾಖಲಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ವಿನಾಕಾರಣ 15 ದಿನ ಕಸ್ಟಡಿಗೆ ಕೇಳುತ್ತಿದ್ದಾರೆ. ಒಂದು ದಿನ ಕಸ್ಟಡಿಗೆ ನೀಡಿದರೆ ಸಾಕು. ಏಪ್ರಿಲ್‌ 28ರಿಂದ ಮೇ 2ರವರೆಗೆ ಅತ್ಯಾಚಾರ ಆರೋಪ ಇರಲಿಲ್ಲ. ಸಂತ್ರಸ್ತೆಯ ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಎಸ್‌ಐಟಿ ತನಿಖೆಗೆ ಪ್ರಜ್ವಲ್‌ ರೇವಣ್ಣ ಸಹಕಾರ ನೀಡಲಿದ್ದಾರೆ.

ಇದಕ್ಕೆ ಅಶೋಕ್‌ ನಾಯ್ಕ್‌ ಆಕ್ಷೇಪ ವ್ಯಕ್ತಪಡಿಸಿದರು. “ಅತ್ಯಾಚಾರ ಆರೋಪಿಯು ಸಾಮಾನ್ಯ ವ್ಯಕ್ತಿಯಲ್ಲ, ಅವರೊಬ್ಬ ಸಂಸದ. ಆರೋಪಿಯು ಜೀವನಪೂರ್ತಿ ಜೈಲು ವಾಸ ಅನುಭವಿಸಬೇಕಾದ ಕೇಸ್‌ ಇದು” ಎಂದರು. ಆಗ ಅರುಣ್‌, “ಆರೋಪಿಯು ಪೊಲೀಸರಿಗೆ ಬಂದು ಶರಣಾಗಿದ್ದಾರೆ. ಹಾಗಾಗಿ, 15 ದಿನ ಕಸ್ಟಡಿಗೆ ವಹಿಸುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಇದನ್ನೂ ಓದಿ: Prajwal Revanna : ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗುವಾಗ ಧರಿಸಿದ್ದ ಬಟ್ಟೆಯ ಬ್ರಾಂಡ್ ಗಮನಿಸಿ! ಅದರ ಬೆಲೆ ಎಷ್ಟಿರಬಹುದು?

Continue Reading
Advertisement
Prajwal Revanna
ಪ್ರಮುಖ ಸುದ್ದಿ6 mins ago

Prajwal Revanna : ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್​ ನೋಡಲು ನೂಕುನುಗ್ಗಲು!

Prajwal Revanna Case
ಕರ್ನಾಟಕ8 mins ago

Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Road Accident
ಕ್ರೈಂ12 mins ago

Road Accident : ಸ್ಕೂಟರ್‌ ಪಲ್ಟಿಯಾಗಿ ದಂಪತಿ ನರಳಾಟ; ನೆರವಿಗೆ ಧಾವಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Bomb threat
ದೇಶ14 mins ago

Bomb Threat: ನಿಲ್ಲುತ್ತಲೇ ಇಲ್ಲ ಹುಸಿಬಾಂಬ್‌ ಕರೆ ಹಾವಳಿ; ಮತ್ತೆ ಬೆದರಿಕೆ-ವಿಮಾನ ತುರ್ತು ಭೂಸ್ಪರ್ಶ

MS Dhoni's last-ball Heroics
ಕ್ರಿಕೆಟ್28 mins ago

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

Bujji and Bhairava Prabhas animated show raises
ಒಟಿಟಿ32 mins ago

Bujji and Bhairava: ಅಮೆಜಾನ್​ಗೆ ಬಂದ ‘ಕಲ್ಕಿ’ಯ ಬುಜ್ಜಿ-ಭೈರವ; ಹೆಚ್ಚಾಯ್ತು ‘ಕಲ್ಕಿ 2898 ಎಡಿ’ ನಿರೀಕ್ಷೆ!

Self harming
ಬೆಂಗಳೂರು37 mins ago

Self Harming : ವೆಗಾ ಸಿಟಿ ಮಾಲ್‌ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

Prajwal Revanna Case
ಕರ್ನಾಟಕ38 mins ago

Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Heat Wave
ದೇಶ42 mins ago

Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

Rooftop collapse in bagalakota
ಬಾಗಲಕೋಟೆ57 mins ago

Rooftop collapse : ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌