ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿಯುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ತಾಜಾ ಸೊಪ್ಪುಗಳು ದೊರೆತರೆ, ಅವುಗಳ ರಸ ಕುಡಿಯುವುದು ಆರೋಗ್ಯಕ್ಕೆ ಒಳಿತು ಮಾಡುವುದು ಸುಳ್ಳೇನಲ್ಲ. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ, ದೇಹಕ್ಕೂ ಹಿತ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಶಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ಇನ್ನೂ ಏನೇನು ಲಾಭಗಳಿವೆ ಪಾಲಕ್ ಸೊಪ್ಪಿನ ರಸ ಕುಡಿಯುವುದರಲ್ಲಿ?
ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ, ಸಮೃದ್ಧವಾಗಿಸುತ್ತವೆ. ಜೊತೆಗೆ, ತ್ವಚೆ ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸಲು ಸಾಧ್ಯವಾಗುತ್ತದೆ. ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ತೂಕ ಇಳಿಕೆಗೂ ನೆರವಾಗಬಹುದಾದ ಪೇಯವಿದು.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!