Site icon Vistara News

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Brain Eating Amoeba

ಭಾರತದಲ್ಲಿ ಈವರೆಗೆ ಅಷ್ಟಾಗಿ (Brain Eating Amoeba) ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸುದ್ದಿ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ಈ ಅಮೀಬಾಕ್ಕೆ ಮೂವರು ಬಲಿಯಾಗಿದ್ದಾರೆ. ನೀರಿನಲ್ಲಿರುವ ಇದು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ ೯೭ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳದ ಸಂಗತಿ. ಇಂಥ ಅಪಾಯಕಾರಿ ಸೂಕ್ಷ್ಮಾಣುವಿನ ಬಗ್ಗೆ, ಅದು ಹರಡುವ ರೀತಿ ಮತ್ತು ಪ್ರತಿಬಂಧಕ ಕ್ರಮಗಳ ಬಗ್ಗೆ ಇಲ್ಲಿದೆ ವಿವರಗಳು. ಅಮೀಬಿಕ್‌ ಮೆನಿಂಜೈಟಿಸ್ ಎಂದೂ ಕರೆಯಲಾಗುವ ಈ ಸ್ಥಿತಿಗೆ ಮುಖ್ಯ ಕಾರಣ ನಗ್ಲೇರಿಯ ಫೌಲೇರಿ ಎಂಬ ಏಕಕೋಶ ಜೀವಿ. ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ನದಿ, ಹೊಳೆ, ಕೊಳ, ಬಾವಿ, ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇರಬಹುದು. ಒದ್ದೆ ಮಣ್ಣು ಮತ್ತು ನೀರಿನ ಪೈಪುಗಳಲ್ಲಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ವಾತಾವರಣದಲ್ಲಿ ಹಲವೆಡೆ ಕಾಣಬಹುದು. ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ. ಇವು ಸಾಮಾನ್ಯವಾಗಿ ನದೀತಳದ ಮಣ್ಣಿನಲ್ಲಿ ಹುದುಗಿರುತ್ತವೆ. ಡೈವಿಂಗ್‌, ಈಜು ಅಥವಾ ನೀರನ್ನು ಕದಡುವ ಯಾವುದಾದರೂ ಚಟುವಟಿಕೆಯಿಂದ ಇವು ಮೇಲ್ಮೈಗೆ ತಲುಪುತ್ತವೆ. ಅಲ್ಲಿಂದ ಮೂಗಿನ ಮೂಲಕ ದೇಹ ಪ್ರವೇಶಿಸಿ, ಮೆದುಳಿಗೆ ಲಗ್ಗೆ ಇಡುತ್ತವೆ. ಬಿಸಿ ನೀರಿನಲ್ಲೂ ಇವು ಇರಬಲ್ಲವು. ಆದರೆ ಅಂಥ ಕಲುಷಿತ ನೀರನ್ನು ನುಂಗಿದರೆ ಈ ಸಮಸ್ಯೆ ಆಗಲಿಕ್ಕಿಲ್ಲ, ಮೂಗಿಗೆ ಹೋದರೆ ಮಾತ್ರ ಉಳಿಗಾಲವಿಲ್ಲ. ವಯಸ್ಕರಿಗಿಂತಲೂ ಮಕ್ಕಳಿಗೆ ಈ ಸೋಂಕು ಬಲುಬೇಗ ತಾಗುತ್ತಿದೆ. ಹಾಗೆನ್ನುತ್ತಿದ್ದಂತೆ ನೀರು ಮುಟ್ಟುವುದಿಲ್ಲ ಎಂದು ಶಪಥ ಮಾಡುವ ಅಗತ್ಯವಿಲ್ಲ. ಕಾರಣ, ಒಂದು ದಶಲಕ್ಷ ಮಂದಿಯಲ್ಲಿ ಒಬ್ಬರಿಗೆ ಈ ಸೋಂಕು ಬರುತ್ತದೆನ್ನುವಷ್ಟು ಅಪರೂಪವಿದು.

ಲಕ್ಷಣಗಳೇನು?

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮಾ… ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ಇದನ್ನೂ ಓದಿ: Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

ತಡೆಗಟ್ಟಬಹುದೇ?

ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು. ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ಬಾರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು-

Exit mobile version