Site icon Vistara News

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Life Expectancy

COVID 19 Reduced Global Life Expectancy By Almost Two Years: WHO

ನ್ಯೂಯಾರ್ಕ್‌: ಚೀನಾದಲ್ಲಿ ಹರಡಿ, ಜಗತ್ತಿನಾದ್ಯಂತ ಪಸರಿಸಿ, ಕೋಟ್ಯಂತರ ಜನರ ಸಾವಿಗೆ ಕಾರಣವಾದ ಕೊರೊನಾ (Covid 19) ಮಹಾಮಾರಿಯ ಹಾವಳಿ ಕಡಿಮೆಯಾದರೂ ಅದು ಜನರ ಜೀವನದ ಮೇಲೆ ಬೀರುವ ಪರಿಣಾಮವು ಇನ್ನೂ ನಿಂತಿಲ್ಲ. ಕೊರೊನಾ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ, ರೆಮ್ಡಿಸಿವಿರ್‌ ಪಡೆದವರು, ಐಸಿಯುಗೆ ದಾಖಲಾಗಿ ಜೀವಂತವಾಗಿ ಹೊರಬಂದವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯು (WHO) ಭೀಕರ ವರದಿ ಬಿಡುಗಡೆ ಮಾಡಿದ್ದು, ಕೊರೊನಾದಿಂದ ಜಾಗತಿಕವಾಗಿ ಜನರ ಜೀವಿತಾವಧಿಯು (Life Expectancy) 2 ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದೆ.

“2019ರಿಂದ 2021ರ ಅವಧಿಯಲ್ಲಿ ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಭೀಕರ ಪರಿಣಾಮ ಉಂಟುಮಾಡಿತು. ಇದರಿಂದಾಗಿ 2019-21ರ ಅವಧಿಯಲ್ಲಿ ಜಗತ್ತಿನಾದ್ಯಂತ ಮನುಷ್ಯರ ಸರಾಸರಿ ಜೀವಿತಾವಧಿಯು 71.4 ವರ್ಷಕ್ಕೆ ಇಳಿದಿದೆ. ಜನರ ಸರಾಸರಿ ಜೀವಿತಾವಧಿಯು 1.8 ವರ್ಷ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಜನರ ಆರೋಗ್ಯಯುತ ಜೀವನ ಪ್ರಮಾಣದಲ್ಲೂ 1.5 ವರ್ಷ ಕಡಿಮೆಯಾಗಿದ್ದು, 61.9 ವರ್ಷಕ್ಕೆ ಕುಸಿದಿದೆ” ಎಂಬುದಾಗಿ ಡಬ್ಲ್ಯೂಎಚ್‌ಒ ವರದಿಯಿಂದ ತಿಳಿದುಬಂದಿದೆ.

ಏಷ್ಯಾ ಭಾಗಕ್ಕೇ ತೀವ್ರ ಪರಿಣಾಮ

“ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ. ಇದು ಜಗತ್ತಿನಲ್ಲೇ ಕೊರೊನಾದಿಂದ ಅತಿ ಹೆಚ್ಚು ಪರಿಣಾಮ ಬೀರಿದ ಭಾಗಗಳಾಗಿವೆ. ವೆಸ್ಟರ್ನ್‌ ಪೆಸಿಫಿಕ್‌ ರೀಜನ್‌ನಲ್ಲಿ ಅತಿ ಕಡಿಮೆ ಪರಿಣಾಮ ಬೀರಿದೆ. ಈ ಭಾಗದಲ್ಲಿ ಜನರ ಸರಾಸರಿ ಜೀವಿತಾವಧಿಯು ಶೇ.0.1ರಷ್ಟು ಕಡಿಮೆಯಾಗಿದೆ” ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

ಮತ್ತೊಂದು ಸೋಂಕು ಸೃಷ್ಟಿಸಿದ ಚೀನಾ

ಕೊರೊನಾ ಮೂಲಕ ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Exit mobile version