Site icon Vistara News

Covid -19 treatment | ಕೋವಿಡ್‌ ಚಿಕಿತ್ಸೆಯ ವೆಚ್ಚಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ

tax

ITR

ನವ ದೆಹಲಿ: ಕೋವಿಡ್‌ ಚಿಕಿತ್ಸೆಗಳ ವೆಚ್ಚಗಳಿಗೆ (Covid -19 treatment ) ಆದಾಯ ತೆರಿಗೆಯಿಂದ ವಿನಾಯಿತಿಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಸಿಬಿಡಿಟಿ ಕಲ್ಪಿಸಿದೆ.

ಹೀಗಾಗಿ ಉದ್ಯೋಗಿಗಳು ಕೋವಿಡ್‌ -19 ಚಿಕಿತ್ಸೆಯ ಸಲುವಾಗಿ ಕಂಪನಿ ಅಥವಾ ಉದ್ಯೋಗದಾತರಿಂದ ಪಡೆದ ಹಣಕಾಸು ನೆರವು ಹಾಗೂ ಇತರ ವಿಷಯಗಳ ಬಗ್ಗೆ ಪೂರಕ ದಾಖಲಾತಿಗಳನ್ನು ಸಲ್ಲಿಸಿ, ತೆರಿಗೆ ಕಡಿತವನ್ನು ಕ್ಲೇಮ್‌ ಮಾಡಿಕೊಳ್ಳಬಹುದು. ಈ ಸಂಬಂಧ ನೀಡಬೇಕಿರುವ ದಾಖಲಾತಿಗಳ ಪಟ್ಟಿಯನ್ನು ಒಳಗೊಂಡಿರುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ಆದಾಯ ತೆರಿಗೆ ಕಡಿತದ ಕ್ಲೇಮ್‌ ಮಾಡಲು ಸಲ್ಲಿಸಬಹುದಾದ ದಾಖಲೆಗಳು ಇಂತಿವೆ- ಆದಾಯ ತೆರಿಗೆ ಇಲಾಖೆಯ ಫಾರ್ಮ್‌ ಸಂಖ್ಯೆ ೧ ಭರ್ತಿ ಮಾಡಬೇಕು. ಪ್ಯಾನ್‌ ಕಾರ್ಡ್‌, ಡಯಾಗ್ನೊಸಿಸ್‌ ವಿವರಗಳು, ಚಿಕಿತ್ಸೆಯ ವೆಚ್ಚ ವಿವರ, ಕೋವಿಡ್‌ ಬಾಧಿತ ವ್ಯಕ್ತಿಯ ಹೆಸರು, ವಿಳಾಸ ನೀಡಬೇಕು.

ಕೋವಿಡ್-‌19 ಬಿಕ್ಕಟ್ಟಿನ ಸಂದರ್ಭ ಅನೇಕ ಕಂಪನಿಗಳು ಉದ್ಯೋಗಿಗಳ ಚಿಕಿತ್ಸೆಗೆ ಹಣಕಾಸು ನೆರವನ್ನು ನೀಡಿತ್ತು. ಅನೇಕ ಮಂದಿ ಸ್ನೇಹಿತರಿಂದಲೂ ನೆರವು ಪಡೆದಿರಬಹುದು. ಇದಕ್ಕೆ ಸಂಬಂಧಿಸಿ ತೆರಿಗೆ ವಿನಾಯಿತಿಯನ್ನು ನೀಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು.

Exit mobile version