Site icon Vistara News

Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

Curry Leaves


ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ. ಕಾರಣ, ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲದೆ ಇದು ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುವ ಮೂಲದ ಇಲ್ಲವಾದರೆ ಹಸಿಯಾಗಿ ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದರಿಂದ ಕೂಡ ನಮ್ಮ ಆರೋಗ್ಯವನ್ನು(Curry Leaves) ವೃದ್ಧಿಸಿಕೊಳ್ಳಬಹುದು.

ಕೂದಲಿನ ಬೆಳವಣಿಗೆಗೆ ಸಹಾಯಕಾರಿ

ಕರಿಬೇವಿನ ಎಲೆಗಳನ್ನು ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

ಚರ್ಮಕ್ಕೆ ವರದಾನ

ಕರಿಬೇವಿನ ಎಲೆಗಳು ಚರ್ಮಕ್ಕೆ ವರದಾನವಾಗಿದ್ದು, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಮೊಡವೆಗಳು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ತೂಕ ಕಡಿಮೆ ಮಾಡುವಲ್ಲಿ ಸಹಾಯಕ

ಬೆಳಗ್ಗೆ ಕರಿಬೇವಿನ ಎಲೆಗಳು ಅಥವಾ ಅವುಗಳ ರಸವನ್ನು ಸೇವಿಸುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ನಿರ್ವಿಷಗೊಳ್ಳುತ್ತದೆ ಮತ್ತು ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತಹೀನತೆ ನಿವಾರಣೆ

ಕರಿಬೇವಿನಲ್ಲಿ ಕಬ್ಬಿಣದ ಸತ್ವಗಳು ಸಮೃದ್ಧವಾಗಿದೆ. ಕರಿಬೇವಿನ ಎಲೆಗಳು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಕ್ತಹೀನತೆ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಕರಿಬೇವಿನ ಎಲೆಯ ರಸವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಇರುವ ವ್ಯಕ್ತಿಗಳು ಕರಿಬೇವಿನ ಎಲೆಯ ರಸವನ್ನು ಸೇವಿಸುವುದನ್ನು ತಪ್ಪಿಸಬೇಕು.

ಒತ್ತಡ, ಆತಂಕ ನಿವಾರಣೆ

ಇದಲ್ಲದೇ ಕರಿಬೇವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ಪ್ರತಿದಿನ ಬೆಳಗ್ಗೆ 5-6 ತಾಜಾ ಕರಿಬೇವಿನ ಎಲೆಗಳನ್ನು ಜಗಿಯಿರಿ. ಅಥವಾ ಕರಿಬೇವಿನ ಎಲೆಯ ರಸ 1 ಚಮಚದಷ್ಟು ನೀರಿನೊಂದಿಗೆ ಬೆರೆಸಿ ಕುಡಿಯಿರಿ. ನಿಮ್ಮ ಊಟಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿ.

ಇದನ್ನೂ ಓದಿ: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಆದರೆ ನೀವು ನಿಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಯಾಕೆಂದರೆ ಕೆಲವೊಂದು ಆರೋಗ್ಯಕರ ವಸ್ತುಗಳು ದೇಹಕ್ಕೆ ಅನುಕೂಲಕರವಾಗಿದ್ದರೂ ಕೆಲವೊಮ್ಮೆ ಅಡ್ಡಪರಿಣಾಮಗಳನ್ನುಂಟುಮಾಡುವ ಸಂಭವವಿದೆ. ಹಾಗಾಗಿ ವೈದ್ಯರ ಸಲಹೆಯಂತೆ ಸೇವಿಸಿ.

Exit mobile version