Site icon Vistara News

Young at Heart: ವಯಸ್ಸಾಗಿದ್ದರೂ ‌ನಿಮ್ಮಲ್ಲಿ‌ ಈ ಗುಣಗಳಿದ್ದರೆ‌ ನೀವು ‘ಯಂಗ್ ಅಟ್ ಹಾರ್ಟ್’!

happy life

ಮನುಷ್ಯನಾಗಿ‌ ಹುಟ್ಟಿದ ಮೇಲೆ ನಾವೆಲ್ಲರೂ ನಮ್ಮ‌ ನಮ್ಮ ವಯಸ್ಸಿಗನುಗುಣವಾಗಿ ನಮ್ಮ‌ ನಮ್ಮ‌ ಕೆಲಸಗಳನ್ನು, ಜವಾಬ್ದಾರಿಗಳನ್ನೂ ನಿರ್ವಹಿಸಬೇಕು. ಬೆಳೆಯುತ್ತಾ ಬೆಳೆಯುತ್ತಾ ವಯಸ್ಸಾಗುತ್ತಾ (ageing) ಹೋದಂತೆ, ಅಯ್ಯೋ ವಯಸ್ಸಾಯ್ತು‌‌ ಎಂಬ ಹತಾಶೆಯೂ ಕೆಲವರನ್ನು‌ ಕಾಡಬಹುದು ನಿಜ. ಆದರೆ, ವಯಸ್ಸಾಯಿತು‌ ಎಂದು ನಿರಾಶಾವಾದ (pessimism) ತೋರಿಸುವುದರಲ್ಲಿ‌ ಅರ್ಥವಿದೆಯೇ‌ ಹೇಳಿ! ಯಾವುದೇ ಕಲಿಕೆಗೆ, ಕೆಲಸಕ್ಕೆ ವಯಸ್ಸಿನ‌ ಹಂಗಿಲ್ಲ ಎಂಬುದನ್ನು ಹಲವರು ‌ನಮ್ಮೆದುರೇ ಸಾಧಿಸಿ‌ ತೋರಿಸುತ್ತಾರೆ ಕೂಡಾ. ಇನ್ನೂ ಕೆಲವರು ‌ವಯಸ್ಸೇ ನಾಚುವಂತೆ (active) ಕೆಲಸ ಮಾಡುತ್ತಾರೆ. ವಯಸ್ಸಾದರೇನಂತೆ, ನಾವು ಸದಾ ‘ಯಂಗ್ ಅಟ್ ಹಾರ್ಟ್’ (young at heart) ಎಂದು ಸದಾ ಖುಷಿಯಾಗಿರುವ (Happiness) ಮಂದಿಯನ್ನೂ ನೀವು ನೋಡಿರಬಹುದು. ಬದುಕಿಗೆ ಇನ್ನೇನು‌ ಬೇಕು ಹೇಳಿ! ಹಾಗಾದರೆ ಬನ್ನಿ, ವಯಸ್ಸಾದರೂ ನೀವು ಹೃದಯದಿಂದ ಯೌವನವನ್ನು ಹೊಂದಿರುವ ಮಂದಿಯೇ ‌ಎಂಬುದನ್ನು ನೀವೇ ಪರಾಮರ್ಶೆ ಮಾಡಿಕೊಳ್ಳಿ.

1. ನಿಮಗೆ ನಿಸರ್ಗದ ಜೊತೆ ‌ಸುಮ್ಮನೆ ಸಮಯ ಕಳೆಯುವುದು‌ ಇಷ್ಟವೇ? ಸುಖಾಸುಮ್ಮನೆ ಕುಳಿತು‌ ಗಿಡಮರಗಳನ್ನು ‌ನೋಡುತ್ತಾ ಕಾಫಿಯೋ‌ ಚಹಾವನ್ನೋ ಹಿಡಿದು ‌ಕೂತರೆ ಇಹಲೋಕವೇ ಮರೆತು ಹೋಗುತ್ತದೆಯೋ? ಯಾವುದೇ ಪ್ರಕೃಯಿಯ ಜೊತೆ ಕಳೆವ ಅವಕಾಶ ಸಿಕ್ಕರೂ ಅದನ್ನು‌ ತಪ್ಪಿಸದೆ, ಛಂಗನೆ ‌ನೆಗೆದು ಆ ಅವಕಾಶವನ್ನು‌ ಬಿಗಿದಪ್ಪಿಕೊಳ್ಳುವ ಮನಸ್ಸಾಗುತ್ತದೆಯೋ, ಹಾಗಾದರೆ ನೀವು ‌ಯಂಗ್ ಅಟ್ ಹಾರ್ಟ್!

2. ಯಾವುದೇ ಹೊಸ ವಿಚಾರವನ್ನು‌, ಅಥವಾ ಹೊಸ ಕಲಿಕೆಯಲ್ಲಿ ‌ನೀವು ಆಸಕ್ತಿ ತೋರಿಸುತ್ತೀರಾ? ಹಾಗಾದರೆ ನೀವು ಯಂಗ್ ಅಟ್ ಹಾರ್ಟ್ ಎಂಬುದರಲ್ಲಿ ಸಂಶಯವೇ ಇಲ್ಲ. ವಯಸ್ಸೆಷ್ಟೇ ಆಗಲಿ, ನಾನೊಮ್ಮೆ ಈಜು ‌ಕಲಿಯಬೇಕು ಅಂತ ಅನಿಸಿದೆಯಾ? ಅಥವಾ ಹೊಸದಾಗಿ ಮಾರುಕಟ್ಟೆಗೆ ಬಂದ ಹೊಸ ಟ್ರೆಂಡ್ ದಿರಿಸನ್ನು ‌‌ಟ್ರೈ‌ ಮಾಡಲು ಹಿಂಜರಿಕೆಯೇ ಇಲ್ಲವೇ? ಟೆಕ್ನಾಲಜಿ ಹೊಸತೇನೇ ಬರಲಿ ಕಲಿಯಬೇಕು ಎಂಬ ಉತ್ಸಾಹಕ್ಕೆ‌ ಎಣೆಯೇ ಇಲ್ಲವೇ? ಖಂಡಿತವಾಗಿ‌ ನಿಮಗೊಂದು ‌ಯುವ ಮನಸ್ಸಿದೆ ಎಂದೇ ಅರ್ಥ.

3. ಸಾಕುಪ್ರಾಣಿಗಳ ಜೊತೆಗೆ ಆಟವಾಡುವುದು‌ ನಿಮಗೆ ಖುಷಿ‌ಕೊಡುತ್ತಿದೆಯೇ? ಹಾಗಾದರೆ ನಿಮ್ಮ ಹೃದಯಕ್ಕೆ ವಯಸ್ಸಾಗಿಲ್ಲ‌ ಎಂದೇ ‌ಅರ್ಥ. ಆಟವಾಡುವುದರಲ್ಲಿ‌ಖುಷಿ ಹುಡುಕುವ ಮನಸ್ಸು ‌ನಿಮಗಿದ್ದರೆ, ಸುತ್ತಲ ಜನರು ನಿಮ್ಮನ್ಮು ನೋಡಿ ಏನು‌‌ ಮಾತಾಡಿಕೊಂಡಾರೋ ಎಂದು‌ ಯೋಚಿಸದೆ ನೀವು ಬೆಕ್ಕಿನೊಂದಿಗೋ ನಾಯಿಯೊಂದಿಗೋ ‌ಮೈಮರೆಯಲು ನಿಮಗೆ ಗೊತ್ತಿದ್ದರೆ ನೀವು ‌ನಿಜಕ್ಕೂ ಅದೃಷ್ಟವಂತರು. ಈ‌ ಗುಣ ಎಲ್ಲರಲ್ಲೂ ‌ಇರದು.

4. ಕ್ರಿಯಾತ್ಕಕ ಕೆಲಸಗಳೆಂದರೆ ‌ನಿಮಗೆ ಇಷ್ಟವೇ? ಎಷ್ಡು‌ ಹೊತ್ತು‌ಬೇಕಾದರೂ‌ ನೀವು ಮಕ್ಕಳ ಜೊತೆಗೊಂದು ಕ್ರಿಯಾಶೀಲ‌ ಚಟುವಟಿಕೆಯಲ್ಲೋ ಅಥವಾ ನೀವೇ ನಿಮ್ಮಿಷ್ಟದ ಹವ್ಯಾಸದಲ್ಲಿಯೋ, ಕಲಾ ಚಟುವಟಿಕೆಗಳಲ್ಲೋ ತೊಡಗಿಸಿಕೊಳ್ಳುವ ಖುಷಿ‌ ಅನುಭವಿಸುತ್ತೀರಿ‌ ಎಂದಾದಲ್ಲಿ‌ ನಿಮಗೆ ವಯಸ್ಸಾಗಿದ್ದರೂ ನೀವು‌ ಯಂಗ್ ಅಟ್ ಹಾರ್ಟ್, ನೋ ‌ಡೌಟ್!

5. ಹೊಸ ಗೆಳೆಯರನ್ನು‌ ಮಾಡುವುದು, ಭವಿಷ್ಯದ ಬಗ್ಗೆ ವಿಪರೀತ ಚಿಂತೆ ಮಾಡದೆ ಬಂದದ್ದನ್ನು‌ ಬಂದ ಹಾಗೆ ಸ್ವೀಕರಿಸಿ, ವರ್ತಮಾನದ ಖುಷಿಯನ್ನು‌ ಹಾಳು‌ ಮಾಡಿಕೊಳ್ಳದೆ ಬದುಕಿನ‌ ಖುಷಿಯನ್ನು‌ ಸಂಪೂರ್ಣವಾಗಿ‌ ದಕ್ಕಿಸಿಕೊಳ್ಳುವ ಮನಸ್ಸು‌‌ ನಿಮ್ಮಲ್ಲಿದ್ದರೆ ನೀವು ‌ಮನಸ್ಸಿನಿಂದ‌‌ ಯುವ ಉತ್ಸಾಹಿಗಳು‌ ಎಂದೇ ‌ಅರ್ಥ.

ನಿಮಗೆ ವಯಸ್ಸಾಗಿದ್ದರೂ‌ ಈ ಎಲ್ಲ ಗುಣಗಳು‌ ನಿಮ್ಮಲ್ಲಿದ್ದರೆ ಖುಷಿ‌ಪಡಿ. ಯಾರೇನೇ ಅಂದರೂ ತಲೆಕೆಡಿಸದೆ ಸಂತೋಷವಾಗಿರಿ. ಯಾಕೆಂದರೆ ಎಲ್ಲರೂ ಯಂಗ್ ಅಟ್ ಹಾರ್ಟ್ ಆಗಿರುವುದಿಲ್ಲ, ನೆನಪಿಡಿ!

ಇದನ್ನೂ ಓದಿ: Happiness | ಜೀವನಪ್ರೀತಿಗೆ ಸ್ಫೂರ್ತಿ ಜಪಾನೀಯರ ಈ ಎಂಟು ಬದುಕಿನ ಸೂತ್ರಗಳು!

Exit mobile version