Site icon Vistara News

Headphone Side Effect: ಹೆಡ್ ಫೋನ್ ಬಳಕೆಯಿಂದ ಮೆದುಳು, ಹೃದಯದ ಮೇಲೆ ಭೀಕರ ಪರಿಣಾಮ!

Headphone Side Effect

ಸಂಗೀತ ಕೇಳುವುದು (music Listening) ಬಹುತೇಕ ಎಲ್ಲರಿಗೂ (Headphone Side Effect) ಪ್ರಿಯವಾಗಿರುತ್ತದೆ. ಇದು ನಮ್ಮ ದೇಹ, ಮನಸ್ಸಿಗೆ ಉಲ್ಲಾಸಗೊಳಿಸುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ (Health Tips) ಒದಗಿಸುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹೆಡ್ ಫೋನ್ (headphone) ಹಾಕಿಕೊಂಡು ನಿರಂತರ ಸಂಗೀತ ಕೇಳುವುದು ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು.

ಹೆಚ್ಚಿನವರು ಅನಗತ್ಯ ಶಬ್ದಗಳನ್ನು ತೊಡೆದುಹಾಕಲು ಹೆಡ್‌ಫೋನ್‌ಗಳನ್ನು ಬಳಸುತ್ತಾರೆ. ಅನೇಕರು ದಿನದಲ್ಲಿ ಗಂಟೆಗಟ್ಟಲೆ ಹೆಡ್‌ಫೋನ್‌ಗಳನ್ನು ಬಳಸುತ್ತಾರೆ. ಇದು ಕಿವಿಗಳಿಗೆ ಹಾನಿ ಉಂಟು ಮಾಡುತ್ತದೆ ಎಂಬುದನ್ನು ಮರೆತುಬಿಡುತ್ತಾರೆ.

ಇಯರ್‌ಫೋನ್‌ಗಳಿಂದ ಬರುವ ಶಬ್ದವು ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದು ಕಿವಿಗಳ ಶಾಶ್ವತ ಹಾನಿಗೆ ಕಾರಣವಾಗಬಹುದು.

ಕಳೆದ ಒಂದು ದಶಕದಲ್ಲಿ ಜೋರಾಗಿ ಸಂಗೀತಕ್ಕೆ ಅತಿಯಾದ ಒಡ್ಡಿಕೊಳ್ಳುವಿಕೆಯು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಪ್ರಕಾರ ಸುಮಾರು ಒಂದು ಶತಕೋಟಿ ಯುವಜನರಲ್ಲಿ ಅಸುರಕ್ಷಿತವಾಗಿ ಸಂಗೀತ ಕೇಳುವ ಅಭ್ಯಾಸಗಳಿಂದಾಗಿ ವಿಶ್ವಾದ್ಯಂತ ಶ್ರವಣ ದೋಷ ಹೆಚ್ಚಾಗಿದೆ. ಹೆಡ್‌ಫೋನ್‌ ಅಥವಾ ಇಯರ್‌ಫೋನ್‌ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಉಂಟಾಗುವ ಕೆಲವು ಪರಿಣಾಮಗಳು ಇಲ್ಲಿವೆ.

1. ಕಿವುಡುತನ

ಇಯರ್‌ಫೋನ್‌ ಅಥವಾ ಹೆಡ್‌ಫೋನ್‌ಗಳಿಂದ ಹೆಚ್ಚಿನ ಧ್ವನಿಯಲ್ಲಿ ಸಂಗೀತವನ್ನು ನಿರಂತರವಾಗಿ ಆಲಿಸುವುದು ಶ್ರವಣದ ಮೇಲೆ ಪರಿಣಾಮ ಬೀರುತ್ತದೆ. ಕಿವಿಗಳ ಶ್ರವಣ ಸಾಮರ್ಥ್ಯವು ಕೇವಲ 90 ಡೆಸಿಬಲ್ ಗಳಷ್ಟಿರುತ್ತದೆ. ನಿರಂತರ ಸಂಗೀತ ಅಳಿಸುವುದರಿಂದ ಇದು 40-50 ಡೆಸಿಬಲ್‌ ಗಳಿಗಿಂತ ಕಡಿಮೆಯಾಗಬಹುದು.

2. ಹೃದ್ರೋಗದ ಅಪಾಯ

ಆರೋಗ್ಯ ತಜ್ಞರ ಪ್ರಕಾರ ಸಂಗೀತ ಕೇಳುವುದು ಕಿವಿಗೆ ಮಾತ್ರವಲ್ಲ ಹೃದಯಕ್ಕೂ ಒಳ್ಳೆಯದಲ್ಲ. ಇದು ಹೃದಯ ಬಡಿತವನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.


3. ತಲೆನೋವು

ಹೆಡ್‌ಫೋನ್‌ ಮತ್ತು ಇಯರ್‌ಫೋನ್‌ಗಳಿಂದ ಹೊರಸೂಸುವ ವಿದ್ಯುತ್ಕಾಂತೀಯ ಅಲೆಗಳು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ಮೈಗ್ರೇನ್ ಗಳನ್ನು ಉಂಟು ಮಾಡುತ್ತದೆ.

4. ನಿದ್ರಾಹೀನತೆ

ಹೆಚ್ಚಾಗಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುವುದು ನಿದ್ರಾಹೀನತೆಗೆ ಕಾರಣವಾಗಬಹುದು. ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ.

5. ಕಿವಿಯ ಸೋಂಕು

ಇಯರ್‌ಫೋನ್‌ಗಳನ್ನು ನೇರವಾಗಿ ಕಿವಿ ಸಿಕ್ಕಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ಸೇರಿದಂತೆ ವಿವಿಧ ರೀತಿಯ ಕಿವಿಗಳ ಸೋಂಕಿಗೆ ಕಾರಣವಾಗಬಹುದು. ಹೀಗಾಗಿ ಇಯರ್‌ಫೋನ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ತಜ್ಞರು.


6. ಏಕಾಗ್ರತೆ ಕೊರತೆ

ಇಯರ್‌ಬಡ್‌ಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದರೂ ಅದು ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಇದು ನರಮಂಡಲದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಏಕಾಗ್ರತೆಯ ಶಕ್ತಿಗಳು ದುರ್ಬಲಗೊಳ್ಳಬಹುದು.

ಇದನ್ನೂ ಓದಿ: Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

7. ಹೆಚ್ಚಿನ ಒತ್ತಡ, ಆತಂಕ

ಹೆಡ್‌ಫೋನ್‌ಗಳ ದೀರ್ಘಾವಧಿಯ ಬಳಕೆಯು ವ್ಯಕ್ತಿಯ ಸಾಮಾಜಿಕ ಜೀವನ, ಮಾನಸಿಕ ಆರೋಗ್ಯ, ಮತ್ತು
ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

8. ಕಲಿಕೆಯಲ್ಲಿ ಅಸಮರ್ಥತೆ

ಕಲಿಕೆಯಲ್ಲಿ ಅಸಮರ್ಥತೆಗಳು ದೀರ್ಘಕಾಲದ ಮತ್ತು ಶ್ರವಣ ನಷ್ಟದ ಸಾಮಾನ್ಯ ಫಲಿತಾಂಶಗಳಾಗಿವೆ. ಹೆಡ್ ಫೋನ್ ಹಾಕಿ ನಿರಂತರ ಸಂಗೀತ ಕೇಳುವುದು ಓದುವಿಕೆ, ಸಾಮರ್ಥ್ಯ, ಗ್ರಹಿಕೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.

Exit mobile version