Headphone Side Effect: ಹೆಡ್ ಫೋನ್ ಬಳಕೆಯಿಂದ ಮೆದುಳು, ಹೃದಯದ ಮೇಲೆ ಭೀಕರ ಪರಿಣಾಮ! - Vistara News

ಆರೋಗ್ಯ

Headphone Side Effect: ಹೆಡ್ ಫೋನ್ ಬಳಕೆಯಿಂದ ಮೆದುಳು, ಹೃದಯದ ಮೇಲೆ ಭೀಕರ ಪರಿಣಾಮ!

Headphone Side Effect: ಹೆಡ್‌ಫೋನ್‌ ಅಥವಾ ಇಯರ್‌ಬಡ್‌ಗಳ ಹೆಚ್ಚು ಕಾಲ ಬಳಕೆ ಮಾಡುವುದು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ (Health Tips) ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಇದರಿಂದ ಶ್ರವಣ ನಷ್ಟ, ಕಿವಿಗೆ ಹಾನಿ, ತಲೆನೋವು, ಹೃದ್ರೋಗ, ಸೋಂಕು, ಕಲಿಕೆಯಲ್ಲಿ ಅಸಮರ್ಥತೆಗೆ ಕಾರಣವಾಗಬಹುದು. ಇಯರ್‌ಫೋನ್‌ಗಳಿಂದ ಬರುವ ಶಬ್ದವು ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದು ಕಿವಿಗಳ ಶಾಶ್ವತ ಹಾನಿಗೆ ಕಾರಣವಾಗಬಹುದು.

VISTARANEWS.COM


on

Headphone Side Effect
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂಗೀತ ಕೇಳುವುದು (music Listening) ಬಹುತೇಕ ಎಲ್ಲರಿಗೂ (Headphone Side Effect) ಪ್ರಿಯವಾಗಿರುತ್ತದೆ. ಇದು ನಮ್ಮ ದೇಹ, ಮನಸ್ಸಿಗೆ ಉಲ್ಲಾಸಗೊಳಿಸುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ (Health Tips) ಒದಗಿಸುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹೆಡ್ ಫೋನ್ (headphone) ಹಾಕಿಕೊಂಡು ನಿರಂತರ ಸಂಗೀತ ಕೇಳುವುದು ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು.

ಹೆಚ್ಚಿನವರು ಅನಗತ್ಯ ಶಬ್ದಗಳನ್ನು ತೊಡೆದುಹಾಕಲು ಹೆಡ್‌ಫೋನ್‌ಗಳನ್ನು ಬಳಸುತ್ತಾರೆ. ಅನೇಕರು ದಿನದಲ್ಲಿ ಗಂಟೆಗಟ್ಟಲೆ ಹೆಡ್‌ಫೋನ್‌ಗಳನ್ನು ಬಳಸುತ್ತಾರೆ. ಇದು ಕಿವಿಗಳಿಗೆ ಹಾನಿ ಉಂಟು ಮಾಡುತ್ತದೆ ಎಂಬುದನ್ನು ಮರೆತುಬಿಡುತ್ತಾರೆ.

ಇಯರ್‌ಫೋನ್‌ಗಳಿಂದ ಬರುವ ಶಬ್ದವು ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದು ಕಿವಿಗಳ ಶಾಶ್ವತ ಹಾನಿಗೆ ಕಾರಣವಾಗಬಹುದು.

ಕಳೆದ ಒಂದು ದಶಕದಲ್ಲಿ ಜೋರಾಗಿ ಸಂಗೀತಕ್ಕೆ ಅತಿಯಾದ ಒಡ್ಡಿಕೊಳ್ಳುವಿಕೆಯು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಪ್ರಕಾರ ಸುಮಾರು ಒಂದು ಶತಕೋಟಿ ಯುವಜನರಲ್ಲಿ ಅಸುರಕ್ಷಿತವಾಗಿ ಸಂಗೀತ ಕೇಳುವ ಅಭ್ಯಾಸಗಳಿಂದಾಗಿ ವಿಶ್ವಾದ್ಯಂತ ಶ್ರವಣ ದೋಷ ಹೆಚ್ಚಾಗಿದೆ. ಹೆಡ್‌ಫೋನ್‌ ಅಥವಾ ಇಯರ್‌ಫೋನ್‌ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಉಂಟಾಗುವ ಕೆಲವು ಪರಿಣಾಮಗಳು ಇಲ್ಲಿವೆ.

1. ಕಿವುಡುತನ

ಇಯರ್‌ಫೋನ್‌ ಅಥವಾ ಹೆಡ್‌ಫೋನ್‌ಗಳಿಂದ ಹೆಚ್ಚಿನ ಧ್ವನಿಯಲ್ಲಿ ಸಂಗೀತವನ್ನು ನಿರಂತರವಾಗಿ ಆಲಿಸುವುದು ಶ್ರವಣದ ಮೇಲೆ ಪರಿಣಾಮ ಬೀರುತ್ತದೆ. ಕಿವಿಗಳ ಶ್ರವಣ ಸಾಮರ್ಥ್ಯವು ಕೇವಲ 90 ಡೆಸಿಬಲ್ ಗಳಷ್ಟಿರುತ್ತದೆ. ನಿರಂತರ ಸಂಗೀತ ಅಳಿಸುವುದರಿಂದ ಇದು 40-50 ಡೆಸಿಬಲ್‌ ಗಳಿಗಿಂತ ಕಡಿಮೆಯಾಗಬಹುದು.

2. ಹೃದ್ರೋಗದ ಅಪಾಯ

ಆರೋಗ್ಯ ತಜ್ಞರ ಪ್ರಕಾರ ಸಂಗೀತ ಕೇಳುವುದು ಕಿವಿಗೆ ಮಾತ್ರವಲ್ಲ ಹೃದಯಕ್ಕೂ ಒಳ್ಳೆಯದಲ್ಲ. ಇದು ಹೃದಯ ಬಡಿತವನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.


3. ತಲೆನೋವು

ಹೆಡ್‌ಫೋನ್‌ ಮತ್ತು ಇಯರ್‌ಫೋನ್‌ಗಳಿಂದ ಹೊರಸೂಸುವ ವಿದ್ಯುತ್ಕಾಂತೀಯ ಅಲೆಗಳು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ಮೈಗ್ರೇನ್ ಗಳನ್ನು ಉಂಟು ಮಾಡುತ್ತದೆ.

4. ನಿದ್ರಾಹೀನತೆ

ಹೆಚ್ಚಾಗಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುವುದು ನಿದ್ರಾಹೀನತೆಗೆ ಕಾರಣವಾಗಬಹುದು. ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ.

5. ಕಿವಿಯ ಸೋಂಕು

ಇಯರ್‌ಫೋನ್‌ಗಳನ್ನು ನೇರವಾಗಿ ಕಿವಿ ಸಿಕ್ಕಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ಸೇರಿದಂತೆ ವಿವಿಧ ರೀತಿಯ ಕಿವಿಗಳ ಸೋಂಕಿಗೆ ಕಾರಣವಾಗಬಹುದು. ಹೀಗಾಗಿ ಇಯರ್‌ಫೋನ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ತಜ್ಞರು.


6. ಏಕಾಗ್ರತೆ ಕೊರತೆ

ಇಯರ್‌ಬಡ್‌ಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದರೂ ಅದು ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಇದು ನರಮಂಡಲದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಏಕಾಗ್ರತೆಯ ಶಕ್ತಿಗಳು ದುರ್ಬಲಗೊಳ್ಳಬಹುದು.

ಇದನ್ನೂ ಓದಿ: Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

7. ಹೆಚ್ಚಿನ ಒತ್ತಡ, ಆತಂಕ

ಹೆಡ್‌ಫೋನ್‌ಗಳ ದೀರ್ಘಾವಧಿಯ ಬಳಕೆಯು ವ್ಯಕ್ತಿಯ ಸಾಮಾಜಿಕ ಜೀವನ, ಮಾನಸಿಕ ಆರೋಗ್ಯ, ಮತ್ತು
ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

8. ಕಲಿಕೆಯಲ್ಲಿ ಅಸಮರ್ಥತೆ

ಕಲಿಕೆಯಲ್ಲಿ ಅಸಮರ್ಥತೆಗಳು ದೀರ್ಘಕಾಲದ ಮತ್ತು ಶ್ರವಣ ನಷ್ಟದ ಸಾಮಾನ್ಯ ಫಲಿತಾಂಶಗಳಾಗಿವೆ. ಹೆಡ್ ಫೋನ್ ಹಾಕಿ ನಿರಂತರ ಸಂಗೀತ ಕೇಳುವುದು ಓದುವಿಕೆ, ಸಾಮರ್ಥ್ಯ, ಗ್ರಹಿಕೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Dinesh Gundu Rao: ರಾಜ್ಯದಲ್ಲಿ ಕಳಪೆ ಔಷಧಗಳ ಜಾಲ; ಅಧಿಕಾರಿಗಳಿಗೆ ಆರೋಗ್ಯ ಸಚಿವರ ತರಾಟೆ

Dinesh Gundu Rao: ರಾಜ್ಯದ ಮಾರುಕಟ್ಟೆಯಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಔಷಧಗಳು ಪೂರೈಕೆ ಆಗುತ್ತಿದೆ. ಮನಬಂದಂತೆ ಔಷಧಗಳನ್ನು ಜನರಿಗೆ ನೀಡಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಡ್ರಗ್ ಕಂಟ್ರೋಲ್ ಇಲಾಖೆ ಇವುಗಳನ್ನು ತಡೆಯಲು ವಿಫಲವಾಗಿದೆ. ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಔಷಧಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾರ್ನಿಂಗ್‌ ಮಾಡಿದ್ದಾರೆ.

VISTARANEWS.COM


on

Dinesh Gundu Rao
Koo

ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆಯಾಗುವ ಔಷಧಗಳು ಸೇರಿದಂತೆ ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗರಂ ಆದರು.

ರಾಜ್ಯದ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಔಷಧಿಗಳು ಪೂರೈಕೆ ಆಗುತ್ತಿದೆ. ಯಾರ ನಿಯಂತ್ರಣವೂ ಇಲ್ಲದೇ ಮನಬಂದಂತೆ ಔಷಧಿಗಳನ್ನು ಜನರಿಗೆ ನೀಡಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಡ್ರಗ್ ಕಂಟ್ರೋಲ್ ಇಲಾಖೆಯ ಮುಖ್ಯ ಉದ್ದೇಶವೇ ಪಬ್ಲಿಕ್ ಹೆಲ್ತ್. ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ ಆ ರೀತಿಯ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Kali Bridge Collapse: ಕಾಳಿನದಿ ಸೇತುವೆ ಕುಸಿತ; ಉ.ಕ ಡಿಸಿಯಿಂದ ಮಾಹಿತಿ ಪಡೆದ ಸಿಎಂ

ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ? ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಷ್ಟು ಕಳಪೆ ಔಷಧಿಗಳ ತಯಾರಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಯಾವ ಔಷಧಿಗಳನ್ನು ಟೆಸ್ಟಿಂಗ್ ಒಳಪಡಿಸಲಾಗಿದೆ. ಕಳಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸುವಂತೆ ಡ್ರಗ್ ಕಂಟ್ರೋಲರ್‌ಗೆ ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ: Utthana Essay Competition 2024: ಉತ್ಥಾನ ಪ್ರಬಂಧ ಸ್ಪರ್ಧೆಗೆ ಬರಹ ಕಳುಹಿಸಿ; 10,000 ರೂ. ಬಹುಮಾನ ಪಡೆಯಿರಿ!

ಎಷ್ಟು ಫಾರ್ಮಸಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ವರದಿ ಕೊಡಿ. ಸುಮ್ಮನೆ ಸ್ಪೆಷಲ್ ಡ್ರೈವ್ ಮಾಡುತ್ತಿದ್ದೇವೆ ಎಂದು ಭಾಷಣ ಬಿಗಿಯಬೇಡಿ. ನೀವು ಕೊಡುತ್ತಿರುವ ಅಂಕಿ ಅಂಶಗಳಲ್ಲಿ ಯಾವುದೇ ಪರಿಣಾಮಕಾರಿ ಕಾರ್ಯ ಕಂಡುಬರುತ್ತಿಲ್ಲ ಎಂದು ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸಚಿವರು ಚಾಟಿ ಬೀಸಿದರು.

ಯಾವ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಅವರ ರಕ್ಷಣೆಗೆ ನಾವಿದ್ದೇವೆ. ಯಾವ ಒತ್ತಡಕ್ಕೂ ಮಣಿಯುವ ಅಗತ್ಯವಿಲ್ಲ. ಮೊದಲು ಕೆಲಸ ಮಾಡಿ ತೋರಿಸಿ. ನಿಮಗೆ ತೊಂದರೆ ಆದರೆ ಸರ್ಕಾರ ನಿಮ್ಮ ರಕ್ಷಣೆಗೆ ಬರಲಿದೆ.‌ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲವು ನಿಮಗೆ ಸಿಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಭರವಸೆ ನೀಡಿದರು.

ಔಷಧ ನಿಯಂತ್ರಣ ಇಲಾಖೆಯನ್ನು ಮುಚ್ಚಿ ಬಿಡೊಣವೇ?

ಔಷಧ ನಿಯಂತ್ರಣಾಧಿಕಾರಿಗಳ ವಿವರಣೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಎಲ್ಲವು ಸರಿಯಿದ್ದರೆ ಔಷಧ ನಿಯಂತ್ರಣ ಇಲಾಖೆಯನ್ನು ಮುಚ್ವಿ ಬಿಡೊಣವೇ ಎಂದು ಪ್ರಶ್ನಿಸಿದರು. ಕಳಪೆ ಔಷಧಿಗಳ ತಯಾರಿಕರ ವಿರುದ್ಧ ಒಂದು ಕೇಸ್ ಬುಕ್ ಮಾಡಿ, ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗಿಲ್ಲ. ನೀವು ಇನ್ನೇನು ಕೆಲಸ ಮಾಡುತ್ತಿದ್ದೀರಾ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಗರಂ ಆದರು.

ಇದನ್ನೂ ಓದಿ: Kannada New Movie: ʼಆಪರೇಷನ್ ಕೊಂಬುಡಿಕ್ಕಿʼ ಚಿತ್ರ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ

ಸಭೆಗೆ ಬರುವ ಮುನ್ನ ಸಂಪೂರ್ಣ ಮಾಹಿತಿಯನ್ನು ತರಬೇಕು. ಅರೆ ಬರೆ ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟು ನಿಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಚಿವರ ನಿರ್ದೇಶನದಂತೆ ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳುವುದು ನಿಮ್ಮ ಮುಖ್ಯ ಕೆಲಸ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಎಚ್ಚರಿಕೆ ನೀಡಿದರು.

Continue Reading

ಆರೋಗ್ಯ

World Breastfeeding Week 2024: ಹಾಲುಣಿಸುವುದು ನಿಲ್ಲಿಸಿದ ಮೇಲೆ ತಾಯಿಯ ತೂಕ ಹೆಚ್ಚುವುದೇಕೆ? ಆಗೇನು ಮಾಡಬೇಕು?

World Breastfeeding Week 2024: ಮಗುವಿಗೆ ಹಾಲು ಉಣಿಸುವಷ್ಟೇ ಮಹತ್ವದ ಘಟ್ಟ ಹಾಲು ಬಿಡಿಸುವುದು. ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಹಾಲು ಬಿಡಿಸುವ ಸಮಯದಲ್ಲಿ ಅಮ್ಮಂದಿರು ತಮ್ಮ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿಗಳೇನು ಎಂಬ ಬಗ್ಗೆ ಒಂದಿಷ್ಟು ಮಾತು.

VISTARANEWS.COM


on

World Breastfeeding Week 2024
Koo

ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ (World Breastfeeding Week 2024) ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ (ಆಗಸ್ಟ್‌ 1ರಿಂದ 8ರವರೆಗೆ), ಕೋಟ್ಯಾನುಕೋಟಿ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಶಿಶುಪೋಷಣಾ ಕ್ರಮದ ಬಗೆಗಿನ ಕೆಲವು ಗೊಂದಲಗಳಿಗೆ ಉತ್ತರ ಕಂಡುಕೊಳ್ಳುವುದು ಅಗತ್ಯವೆನಿಸಿದೆ. ಅಂಥವುಗಳಲ್ಲಿ ಒಂದು- ಕೂಸಿಗೆ ಹಾಲುಣಿಸುವುದನ್ನು ನಿಲ್ಲಿಸಿದ ತಕ್ಷಣವೇ ಅಮ್ಮಂದಿರ ತೂಕ ಹೆಚ್ಚುತ್ತದೆ, ಯಾಕೆ- ಎಂಬುದು. ನಿಜ, ಮಕ್ಕಳಿಗೆ ಒಂದು ವರ್ಷವಾದ ನಂತರ ಯಾವಾಗಲಾದರೂ ಹಾಲೂಡುವುದನ್ನು ನಿಲ್ಲಿಸಬಹುದು ಅಥವಾ ಮುಂದುವರಿಸಬಹುದು. ಅದು ಅವರವರ ಅನುಕೂಲಕ್ಕೆ ಬಿಟ್ಟಿದ್ದು. ಆದರೆ ಯಾವಾಗ ನಿಲ್ಲಿಸಿದರೂ ಹಲವರಲ್ಲಿ ತೂಕ ಹೆಚ್ಚಳವಾಗುವುದನ್ನು ಕಾಣಬಹುದು. ತಾಯಿಯ ದೇಹದಲ್ಲಿ ಖರ್ಚಾಗುವ ಕ್ಯಾಲರಿ ಇದ್ದಕ್ಕಿದ್ದಂತೆ ಕಡಿಮೆಯಾವುದು ಇದಕ್ಕೆ ಮುಖ್ಯ ಕಾರಣ. ಜೊತೆಗೆ, ಹಾರ್ಮೋನ್‌ ವ್ಯತ್ಯಾಸ, ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು, ವ್ಯಾಯಾಮದತ್ತ ಗಮನ ನೀಡದಿರುವುದು- ಇವೆಲ್ಲವೂ ತಾಯಿಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

World Breastfeeding Week

ಯಾಕೆ ಹೀಗೆ?

ತಾಯಿಯ ದೇಹದಲ್ಲಿನ ಶಕ್ತಿ ಮತ್ತು ಸತ್ವಗಳನ್ನು ಬಳಸಿಕೊಂಡು, ಪ್ರೊಲಾಕ್ಟಿನ್‌ ಎಂಬ ಚೋದಕ ಹಾಲು ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಮುಂದಿನ ಕೆಲಸಗಳನ್ನು ಆಕ್ಸಿಟೋಸಿನ್‌ ಎಂಬ ಚೋದಕ ನೋಡಿಕೊಳ್ಳುತ್ತದೆ. ಇದರಿಂದ ಮಗುವಿನ ಹೊಟ್ಟೆ ತುಂಬುವುದಷ್ಟೇ ಅಲ್ಲದೆ, ತಾಯಿ-ಕೂಸು ಇಬ್ಬರದೂ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ, ತಾಯಿಯ ದೇಹದ ಚಯಾಪಚಯವೂ ತೀವ್ರವಾಗಿರುತ್ತದೆ. ಮಗುವಿನ ಬೇಡಿಕೆ ಹೆಚ್ಚಿದಷ್ಟೂ ತಾಯಿಯ ದೇಹದಲ್ಲಿ ಹಾಲು ವೃದ್ಧಿಸಿ, ತೂಕ ಕರಗುತ್ತದೆ. ಇದಕ್ಕೆ ಸೂಕ್ತವಾದ ರೀತಿಯಲ್ಲಿ ಹೊಟ್ಟೆಯೂ ತನ್ನ ಹಸಿವಿನ ಬೇಡಿಕೆಯನ್ನು ಮಂಡಿಸುತ್ತದೆ. ಹಾಲುಣಿಸುವುದನ್ನು ನಿಲ್ಲಿಸುತ್ತಿದ್ದಂತೆ ತಾಯಿಯ ದೇಹದ ಚಯಾಪಚಯ ಕಡಿಮೆಯಾಗುತ್ತದೆ. ಮೊದಲಿನಷ್ಟು ಶಕ್ತಿ ಖರ್ಚಾಗುವುದಿಲ್ಲ. ಜೊತೆಗೆ ಪ್ರೊಲಾಕ್ಟಿನ್‌ ಮತ್ತು ಆಕ್ಸಿಟೋಸಿನ್‌ ಮಟ್ಟವೂ ಇಳಿಯುತ್ತದೆ. ಕಾರಣ, ಮಗುವಿಗೆ ಹಾಲೀಗ ಬೇಕಾಗಿಲ್ಲ. ಇದರಿಂದ ಮೂಡ್‌ ಏರಿಳಿತ, ಚಯಾಪಚಯ ಇಳಿತ ಮತ್ತು ಹಸಿವೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೆಲವರಲ್ಲಿ ಕಾಣಬಹುದು. ಈ ಎಲ್ಲದರ ಪರಿಣಾಮವಾಗಿ ದೇಹದಲ್ಲಿ ಕೊಬ್ಬು ಶೇಖರವಾಗುವ ಸಾಧ್ಯತೆ ಹೆಚ್ಚುತ್ತದೆ. ಖರ್ಚಾಗುವ ಶಕ್ತಿ ಕಡಿಮೆಯಾಗಿ, ತಿನ್ನುವ ಆಹಾರ ಕಡಿಮೆಯಾಗದಿದ್ದರೆ ತೂಕ ಹೆಚ್ಚವುದು ಸಾಮಾನ್ಯ ತಾನೆ?

ಇದನ್ನೂ ಓದಿ: World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

ಏನು ಮಾಡಬೇಕು?

ಮಗುವಿಗೆ ಹಾಲುಣಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ. ದಿನಕ್ಕೆ ನಾಲ್ಕು ಬಾರಿ ನರ್ಸಿಂಗ್‌ ಮಾಡುತ್ತಿದ್ದರೆ, ಅದನ್ನು ಮೂರು, ಎರಡು, ಒಂದಕ್ಕಿಳಿಸಿ. ಕೊನೆಗೆ ರಾತ್ರಿ ಮಾತ್ರವೇ ಹಾಲುಣಿಸಿ, ಕ್ರಮೇಣ ಅದನ್ನೂ ನಿಲ್ಲಿಸಿ. ಹೀಗೆ ಮಾಡುವುದರಿಂದ ದೇಹ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳಲು ಅನುಕೂಲವಾಗುತ್ತದೆ. ತಿನ್ನುವ ಆಹಾರದ ಬಗ್ಗೆ ಗಮನ ನೀಡಿ. ಹಾಲುಣಿಸುವಾಗ ಕೊಂಚ ಹೆಚ್ಚು ಕೊಬ್ಬಿನ ಆಹಾರಗಳನ್ನು ತಿಂದರೆ ಅಷ್ಟೇನು ಸಮಸ್ಯೆಯಾಗುವುದಿಲ್ಲ. ಆದರೆ ಅದನ್ನು ನಿಲ್ಲಿಸಿದ ಮೇಲೆ, ಆಹಾರದ ಸಮತೋಲನೆಯತ್ತ ಗಮನ ನೀಡಿ. ಹಣ್ಣು-ತರಕಾರಿ-ಇಡೀ ಧಾನ್ಯಗಳ ಆಹಾರ ನಿಮಗೆ ಬೇಕು. ಸಾಕಷ್ಟು ಪ್ರೊಟೀನ್‌ ತಿನ್ನಿ. ಚೆನ್ನಾಗಿ ನೀರು ಕುಡಿಯಿರಿ.
ನಿತ್ಯವೂ ದೈಹಿಕ ಚಟುವಟಿಕೆಯನ್ನು ನಿಯಮಿತವಾಗಿ ಮಾಡಿ. ನಿಧಾನವಾಗಿ ವಾಕಿಂಗ್‌, ಯೋಗ ಮುಂತಾದ ಯಾವುದೇ ವ್ಯಾಯಾಮಕ್ಕೆ ತೆರೆದುಕೊಳ್ಳಿ. ಇದರಿಂದ ಶರೀರ ಸಬಲವಾಗುತ್ತದೆ. ಮಗುವಿನ ಹಿಂದೆ ಓಡುವಷ್ಟರಲ್ಲೇ ಸುಸ್ತಾಗುತ್ತದೆ ಎನ್ನುವ ಕಾರಣ ನೀಡಬೇಡಿ. ಇನ್ನೂ ಕೆಲವು ವರ್ಷಗಳು ಈ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವುದಿಲ್ಲ. ಹಾಗೆಂದು ಅಷ್ಟೂ ವರ್ಷಗಳು ವ್ಯಾಯಾಮ ಇಲ್ಲದೆ ಬದುಕುವುದು ಒಳ್ಳೆಯದಲ್ಲ. ಇರುವ ಅವಕಾಶದಲ್ಲಿ ಹೆಚ್ಚು ನಿದ್ದೆ ಮಾಡಲು ಯತ್ನಿಸಿ. ಮಗು ಮಲಗಿದಾಗ ನೀವೂ ಮಲಗುವ ಅಭ್ಯಾಸವಿದ್ದರೆ ಅದನ್ನು ಮುಂದುವರಿಸಿ. ಮಾನಸಿಕ ಆರೋಗ್ಯದ ಬಗ್ಗೆ ಗಮನ ನೀಡಿ. ಅತಿಯಾದ ಮಾನಸಿಕ ಒತ್ತಡವೂ ತೂಕ ಏರಿಕೆಗೆ ಕಾರಣವಾಗುತ್ತದೆ. ಸ್ವಾಸ್ಥ್ಯದ ಕಾಳಜಿಯಲ್ಲಿ ದೇಹ ಮಾತ್ರವಲ್ಲ, ಮನಸ್ಸೂ ಸೇರುತ್ತದೆ ಎಂಬುದನ್ನು ಗಮನಿಸಿ.

Continue Reading

ಕ್ರೀಡೆ

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Vinesh Phogat:‌ 52 ಕೆ.ಜಿ ತೂಕ ಹೊಂದಿದ್ದ ವಿನೇಶ್‌ ಫೋಗಟ್‌ ಅವರು 2 ಕೆ.ಜಿ ತೂಕ ಇಳಿಸಲು ಇಡೀ ರಾತ್ರಿ ವರ್ಕೌಟ್‌ ಮಾಡಿದ್ದು, ನಿರ್ಜಲೀಕರಣದಿಂದಾಗಿ ಬೆಳಗ್ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ವಿನೇಶ್‌ ಫೋಗಟ್‌ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ, ರಾತ್ರೋರಾತ್ರಿ 2 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹದಲ್ಲಿ ಏನೆಲ್ಲ ಆಗುತ್ತದೆ, ವಿನೇಶ್‌ ಫೋಗಟ್‌ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ತಜ್ಞರು ಏನು ಹೇಳುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Vinesh Phogat
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ವಿನೇಶ್‌ ಫೋಗಟ್‌ (Vinesh Phogat) ಅವರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಆಘಾತವಾಗಿದೆ. ಕುಸ್ತಿಯಲ್ಲಿ ಫೈನಲ್‌ ತಲುಪಿ ಇತಿಹಾಸ ಸೃಷ್ಟಿಸಿದ್ದ ಅವರು ಇನ್ನೇನು ಚಿನ್ನದ ಪದಕಕ್ಕಾಗಿ ಕಾದಾಡಬೇಕು ಎನ್ನುವರಷ್ಟರಲ್ಲಿಯೇ ದೇಹದ ತೂಕ 100 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿರುವುದು ಕುಸ್ತಿಪಟುವಿನ ಜತೆಗೆ ಇಡೀ ದೇಶದ ಜನರಿಗೆ ಅಸಮಾಧಾನ ಉಂಟಾಗಿದೆ. ಮತ್ತೊಂದೆಡೆ, 52 ಕೆ.ಜಿ ತೂಕ ಹೊಂದಿದ್ದ ವಿನೇಶ್‌ ಫೋಗಟ್‌ ಅವರು 2 ಕೆ.ಜಿ ತೂಕ ಇಳಿಸಲು ಇಡೀ ರಾತ್ರಿ ವರ್ಕೌಟ್‌ ಮಾಡಿದ್ದು, ನಿರ್ಜಲೀಕರಣದಿಂದಾಗಿ ಬೆಳಗ್ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ, ರಾತ್ರೋರಾತ್ರಿ ದೇಹದ ತೂಕವನ್ನು 2-3 ಕೆ.ಜಿ ಇಳಿಸಿದರೆ ದೇಹಕ್ಕೆ ಏನಾಗುತ್ತದೆ ಎಂಬುದರ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ತಜ್ಞರು ಹೇಳುವುದೇನು?

‘ಒಂದೇ ರಾತ್ರಿಯಲ್ಲಿ ದೇಹದ ತೂಕವನ್ನು 2-3 ಕೆ.ಜಿ ಇಳಿಸುವುದು ಸಾಧ್ಯವೇ ಇಲ್ಲ ಅಂತಲ್ಲ. ಆದರೆ, ಹಾಗೆ ಮಾಡುವುದು ತುಂಬ ಅಪಾಯಕಾರಿ’ ಎಂದು ದೆಹಲಿಯ ಮಹಾರಾಜ ಅಗ್ರಸೇನ ಆಸ್ಪತ್ರೆಯ ಔಷಧ ತಜ್ಞ ಡಾ.ಸಂಜಯ್‌ ಗುಪ್ತಾ ತಿಳಿಸಿದ್ದಾರೆ. ಮತ್ತೊಬ್ಬ ಔಷಧ ತಜ್ಞರಾದ ಡಾ.ಮಂಜೀತಾ ನಾಥ್‌ ದಾಸ್‌ ಅವರು ಕೂಡ ಇದನ್ನೇ ಉಚ್ಚರಿಸಿದ್ದು, “ಹಾಗೆ ಮಾಡುವುದು ಪ್ರಾಣಕ್ಕೂ ಅಪಾಯಕಾರಿ” ಎಂದಿದ್ದಾರೆ.

“ನಮ್ಮ ದೇಹದ ತೂಕವು ಮೂಳೆ, ಮಾಂಸ ಹಾಗೂ ಬೊಜ್ಜನ್ನು ಆಧರಿಸಿರುತ್ತದೆ. ಆದರೆ, ನೀರು ಕುಡಿಯದೆ, ಉಪ್ಪು ಸೇವಿಸದೆ, ಕಾರ್ಬ್ಸ್‌ ಹಾಗೂ ಪ್ರೊಟೀನ್‌ಗಳನ್ನು ಮಾತ್ರ ಸೇವಿಸಿ ಇಡೀ ರಾತ್ರಿ ವರ್ಕೌಟ್‌ ಮಾಡಿದರೆ, 2-3 ಕೆ.ಜಿ ತೂಕ ಇಳಿಸಿದರೆ ದೇಹ ತಡೆದುಕೊಳ್ಳುವುದಿಲ್ಲ. ನಿರ್ಜಲೀಕರಣವು ದೇಹವನ್ನು ಬಾಧಿಸುತ್ತದೆ. ಅದರಲ್ಲೂ 29 ವರ್ಷದ ವಿನೇಶ್‌ ಫೋಗಟ್‌ ಅವರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದು ಅವರ ದೇಹದ ಮೇಲೆ ಪರಿಣಾಮ ಬೀರಿದೆ” ಎಂದು ಅವರು ತಿಳಿಸಿದ್ದಾರೆ.

ತೂಕ ಕಳೆದುಕೊಳ್ಳುವ ಪ್ರಸ್ತಾಪವೇ ಇಲ್ಲ

“ನೀರನ್ನೂ ಸೇವಿಸದೆ ರಾತ್ರಿಯಿಡೀ ವರ್ಕೌಟ್‌ ಮಾಡಿದರೆ ದೇಹವು ನಿರ್ಜಲೀಕರಣದಿಂದ ಬಸವಳಿದುಹೋಗುತ್ತದೆ. ಹಾಗೆ ಮಾಡಿದವರು ಬೆಳಗ್ಗೆ ಎದ್ದು ತಿರುಗಾಡಲು ಕೂಡ ಆಗುವುದಿಲ್ಲ. ಹೀಗೆ, ರಾತ್ರೋರಾತ್ರಿ ನೀರು ಕುಡಿಯದೆ, ವರ್ಕೌಟ್‌ ಮಾಡಿ, ತೂಕ ಕಳೆದುಕೊಳ್ಳುವಂತೆ ಸಾಮಾನ್ಯ ಜನರಿಗಾಗಲಿ, ಅಥ್ಲೀಟ್‌ಗಳಿಗಾಗಲಿ ವೈದ್ಯಕೀಯವಾಗಿ ಅನುಮತಿ ನೀಡಲು ಸಾಧ್ಯವೇ ಇಲ್ಲ” ಎಂಬುದಾಗಿ ಡಾ.ದಾಸ್‌ ತಿಳಿಸಿದ್ದಾರೆ.

ರಾತ್ರಿಯಿಡೀ ವರ್ಕೌಟ್‌ ಮಾಡುವುದು, ನೀರು ಸೇವಿಸದಿರುವುದರಿಂದ, ಕ್ಯಾಲರಿ ತೆಗೆದುಕೊಳ್ಳದಿರುವುದರಿಂದ ದೇಹದಲ್ಲಿ ಬ್ಲಡ್‌ ಶುಗರ್‌ ಲೆವೆಲ್‌ 70 ಮಿಲಿಗ್ರಾಂಗೆ (ಪ್ರತಿ ಡೆಸಿಲಿಟರ್‌ಗೆ) ಇಳಿಯಲಿದೆ. ದೇಹದ ಶಕ್ತಿಯ ಮೂಲವಾದ ಗ್ಲಿಕೋಜೆನ್‌ ಸಂಗ್ರಹವು ಕುಸಿತವಾಗುತ್ತದೆ. ಇದರಿಂದಾಗಿ ದೇಹವು ನಿಶ್ಯಕ್ತಿಗೊಳ್ಳುತ್ತದೆ ಎಂಬುದಾಗಿ ಡಾ.ಗುಪ್ತಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Vinesh Phogat: ವಿನೇಶ್‌ ಫೋಗಟ್‌ ಅನರ್ಹ; ಕ್ರಮ ಕೈಗೊಳ್ಳುವಂತೆ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ ಮೋದಿ ಸೂಚನೆ!

Continue Reading

ಆರೋಗ್ಯ

Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತವೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಉತ್ತಮ ಆರೋಗ್ಯವನ್ನು (Health Tips) ಕಾಪಾಡಿಕೊಳ್ಳಲು ರಾತ್ರಿ ಬಾಯಾರಿಕೆಯನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ. ಅವು ಯಾವುದು, ಅದಕ್ಕೆ ಪರಿಹಾರವೇನು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಅನೇಕ ಬಾರಿ ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಯಾಗುತ್ತದೆ (thirst problem). ಇದರಿಂದ ನಿದ್ರೆಗೂ (sleeping problem) ತೊಂದರೆಯಾಗುತ್ತದೆ. ರಾತ್ರಿ ಹೆಚ್ಚು ಬಾಯಾರಿಕೆಯಾಗುವುದು ಸಾಮಾನ್ಯ ಎಂದುಕೊಳ್ಳಬಾರದು. ಇದು ಗಂಭೀರ ಆರೋಗ್ಯ (Health Tips) ಸಮಸ್ಯೆಯ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾತ್ರಿ ಬಾಯಾರಿಕೆಯನ್ನು (night thirst) ನಿರ್ಲಕ್ಷಿಸುವುದು ಸರಿಯಲ್ಲ.

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತದೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹೀಗಾಗಿ ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ.

Health Tips
Health Tips


ಮಧುಮೇಹ

ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆ ಅನುಭವಿಸಲು ಸಾಮಾನ್ಯ ಕಾರಣವೆಂದರೆ ಮಧುಮೇಹ. ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಮೂತ್ರಪಿಂಡವು ಅದನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟು ಮಾಡುತ್ತದೆ ಮತ್ತು ಬಾಯಾರಿಕೆಯನ್ನು ಹೆಚ್ಚಿಸುತ್ತದೆ.

ನಿರ್ಜಲೀಕರಣ

ದಿನವಿಡೀ ಸಾಕಷ್ಟು ನೀರು ಕುಡಿಯದಿದ್ದರೆ ರಾತ್ರಿಯಲ್ಲಿ ದೇಹವು ಹೆಚ್ಚು ನೀರಿನ ಅಗತ್ಯವನ್ನು ಅನುಭವಿಸಬಹುದು. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದು ಮುಖ್ಯ.

Health Tips
Health Tips


ನಿದ್ರೆಯ ತೊಂದರೆ

ನಿದ್ರಾ ಸಮಸ್ಯೆಗಳು ರಾತ್ರಿಯಲ್ಲಿ ಬಾಯಾರಿಕೆಗೆ ಕಾರಣವಾಗುತ್ತವೆ. ಉಸಿರಾಟದ ತೊಂದರೆ ಉಂಟು ಮಾಡುವ ಸ್ಲೀಪ್ ಅಪ್ನಿಯದಿಂದ ಬಾಯಿ ಒಣಗುವುದು, ಹೆಚ್ಚಿನ ಬಾಯಾರಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಾದಾಗ ನಿದ್ರೆಯ ಸಮಯದಲ್ಲಿ ಉಸಿರಾಟ ತೊಂದರೆ ಉಂಟಾಗುತ್ತದೆ. ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯದೇ ಇದ್ದಾಗ ಬಾಯಿ ಒಣಗಲು ಪ್ರಾರಂಭಿಸುತ್ತದೆ. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗುತ್ತದೆ ಮತ್ತು ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾದ ಚಿಕಿತ್ಸೆಯಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಗೆ ಕಾರಣವಾಗಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಹೆಚ್ಚಿದ ಬಾಯಾರಿಕೆ ಈ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ. ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾವು ಮೂತ್ರದ ಪ್ರದೇಶದಲ್ಲಿ ಸೋಂಕನ್ನು ಹರಡುತ್ತದೆ, ಇದು ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ. ಇದು ರಾತ್ರಿಯಲ್ಲಿ ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಮತ್ತು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಇದರಿಂದ ಸರಿಯಾದ ಚಿಕಿತ್ಸೆಯನ್ನು ಮಾಡಬಹುದು.

ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಔಷಧಗಳ ಪರಿಣಾಮ

ಕೆಲವು ಔಷಧಗಳು ಸಹ ಬಾಯಾರಿಕೆಯನ್ನು ಹೆಚ್ಚಿಸಬಹುದು. ಅಂತಹ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಪರಿಹಾರ

1. ರಾತ್ರಿಯಲ್ಲಿ ಬಾಯಾರಿಕೆಯಾಗದಂತೆ ತಡೆಯಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

2. ನಿರಂತರವಾಗಿ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಖಂಡಿತವಾಗಿಯೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

3. ಉತ್ತಮ ನಿದ್ರೆ ಮಾಡಿ. ನಿದ್ರಾ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

4. ಸರಿಯಾದ ಮತ್ತು ಸಮತೋಲಿತ ಆಹಾರ ಸೇವಿಸಿ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಲಿ.

5. ಬಾಯಾರಿಕೆಯ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂಪೂರ್ಣ ತಪಾಸಣೆ ಮಾಡಿಸಿ.

Continue Reading
Advertisement
ಕರ್ನಾಟಕ53 mins ago

Police Raid: ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

John Abraham
ಕ್ರೀಡೆ55 mins ago

John Abraham: ಮನು ಭಾಕರ್‌ ಗೆದ್ದ ಒಲಿಂಪಿಕ್ಸ್‌ ಪದಕ ಮುಟ್ಟಿದ ಜಾನ್‌ ಅಬ್ರಾಹಂ; ನೆಟ್ಟಿಗರಿಂದ ನಟನಿಗೆ ಕ್ಲಾಸ್‌ ಏಕೆ?

Karnataka Governor
ಕರ್ನಾಟಕ1 hour ago

Karnataka Governor: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಸಿಎಂ

Dinesh Gundu Rao
ಬೆಂಗಳೂರು1 hour ago

Dinesh Gundu Rao: ರಾಜ್ಯದಲ್ಲಿ ಕಳಪೆ ಔಷಧಗಳ ಜಾಲ; ಅಧಿಕಾರಿಗಳಿಗೆ ಆರೋಗ್ಯ ಸಚಿವರ ತರಾಟೆ

Bangladesh Unrest
ವಿದೇಶ2 hours ago

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

couple's fight
ಕರ್ನಾಟಕ2 hours ago

Couple’s fight: ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು!

Bangladesh Unrest
ವಿದೇಶ2 hours ago

Bangladesh Unrest: ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಗೆ ಇಸ್ಲಾಮಿಕ್‌ ರಾಷ್ಟ್ರಗಳಿಂದ ಹಣ; ಇಲ್ಲಿದೆ ಸ್ಫೋಟಕ ಮಾಹಿತಿ

World Breastfeeding Week 2024
ಆರೋಗ್ಯ2 hours ago

World Breastfeeding Week 2024: ಹಾಲುಣಿಸುವುದು ನಿಲ್ಲಿಸಿದ ಮೇಲೆ ತಾಯಿಯ ತೂಕ ಹೆಚ್ಚುವುದೇಕೆ? ಆಗೇನು ಮಾಡಬೇಕು?

Actor Darshan
ಕ್ರೈಂ2 hours ago

Actor Darshan: ನಟ ದರ್ಶನ್‌ಗೆ ಮನೆಯೂಟ ನಿರಾಕರಿಸಿದ ಜೈಲಾಧಿಕಾರಿಗಳು; ಕೋರ್ಟ್‌ಗೆ ವರದಿ

IND vs SL 3rd ODI
ಕ್ರೀಡೆ2 hours ago

IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌