Site icon Vistara News

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

Health Tips

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

Exit mobile version