Site icon Vistara News

Heart attack: ಪೊಲೀಸ್‌ ಬಳಿಕ ಕೋರ್ಟ್‌ ಅಟೆಂಡರ್‌ ; ಹೃದಯಾಘಾತದಿಂದ ಒಂದೇ ದಿನ ಇಬ್ಬರು ಸರ್ಕಾರಿ ಉದ್ಯೋಗಿಗಳ ಸಾವು

Court attender death

ರಾಮನಗರ: ರಾಯಚೂರಿನ ಮಸ್ಕಿಯಲ್ಲಿ ಪೊಲೀಸ್‌ ಠಾಣೆಯಲ್ಲಿ (Maski Police station) ರೈಟರ್‌ ಆಗಿ (writer work) ಕೆಲಸ ಮಾಡುತ್ತಿದ್ದವರು ಮಲಗಿದಲ್ಲೇ ಮೃತಪಟ್ಟ ಬೆನ್ನಲ್ಲೇ ಇದೀಗ ಕೋರ್ಟ್‌ ಅಟೆಂಡರ್‌ (Court attender) ಒಬ್ಬರು ಕರ್ತವ್ಯದಲ್ಲಿದ್ದಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಒಂದೇ ದಿನದ ಅವಧಿಯಲ್ಲಿ ಇಬ್ಬರು ಸರ್ಕಾರಿ ಉದ್ಯೋಗಿಗಳು ಹೃದಯಾಘಾತದಿಂದ (Heart attack) ಮೃತಪಟ್ಟಂತಾಗಿದೆ.

ರಾಮ ನಗರ ನ್ಯಾಯಾಲಯ ಆವರಣದಲ್ಲಿ ಕೋರ್ಟ್‌ ಅಟೆಂಡರ್‌ ಸಾವು

ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಮಧು(36) ಎಂಬವರು ಕುಳಿತಲ್ಲೇ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಈ ಘಟನೆ ನಡೆದಿದ್ದು, ಅವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ.

ಕನಕಪುರ ತಾಲೂಕಿನ ಬೂದನಗುಪ್ಪೆ ಮೂಲದವರಾಗಿರುವ ಮಧು ಅವರು ಕಳೆದ ಮೂರು ವರ್ಷಗಳಿಂದ ರಾಮನಗರ ಕೋರ್ಟ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಲಗಿದಲ್ಲೇ ಮೃತಪಟ್ಟ ಮಸ್ಕಿ ಠಾಣೆಯ ಕಾನ್‌ಸ್ಟೇಬಲ್‌

ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ರೈಟರ್ ಆಗಿದ್ದ ಬಸನಗೌಡ (34) ಅವರು ಗುರುವಾರ ರಾತ್ರಿ ಮಲಗಿದಲ್ಲೇ ಮೃತಪಟ್ಟಿದ್ದಾರೆ. ಬಸನಗೌಡಗೆ ಬಿಪಿ, ಶುಗರ್ ಅಥವಾ ಯಾವುದೇ ಹೃದಯ ಸಂಬಂಧಿ ಖಾಯಿಲೆ ಇರಲಿಲ್ಲ. ನಿನ್ನೆ (ಆ.10) ರಾತ್ರಿ ಮಲಗಿದ್ದಲ್ಲೇ ಬಸನಗೌಡಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

Gril dies of heart attack

ಬಸನಗೌಡ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿ. ಸಿಬ್ಬಂದಿ ಸಾವಿಗೆ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಮರುಗಿದೆ.

ಲೋ ಬಿಪಿಯಾಗಿ ಕುಸಿದು ಬಿದ್ದು ಹೆಡ್‌ ಕಾನ್ಸ್‌ಟೇಬಲ್‌ ಸಾವು!

ಕೆಲವು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಒಬ್ಬರು ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾರೆ. . ಬಸಪ್ಪ ಮಲ್ಲಾಡದ (48) ಮೃತ ದುರ್ದೈವಿ.

112 ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಪ್ಪ ಅವರು ರಕ್ತದೊತ್ತಡ ಕಡಿಮೆಯಾಗಿದೆ. ಕುಸಿದು ಬಿದ್ದಿದ್ದರು.. ಮೂಲತಃ ರಾಣೇಬೆನ್ನೂರು ತಾಲ್ಲೂಕಿನ ಹಾರೋಗೊಪ್ಪ ನಿವಾಸಿ ಆಗಿದ್ದು, 26 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ : Heart Attack : ಹೃದಯಾಘಾತ ಯಾರಿಗೆ ಬೇಕಾದರೂ ಆಗಬಹುದು! ಅದರಲ್ಲೂ ಸೋಮವಾರ ಭಾರಿ Dangerous!

SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ

ಹೃದಯಾಘಾತ ಈಗ ಎಲ್ಲ ವಯೋಮಾನದವರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕೆಲವು ದಿನಗಳ ಹಿಂದೆ 16 ವರ್ಷದ ಬಾಲಕಿಯೊಬ್ಬಳು ಹೃದಯಾಘಾತಕ್ಕೆ ತುತ್ತಾಗಿದ್ದಾಳೆ. ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫೆಲಿಶಾ (16) ಮೃತ ದುರ್ದೈವಿ ಬಾಲಕಿ.

Gril dies of heart attack

ಬೆಂಗಳೂರು ನಿವಾಸಿಗಿರುವ ಫೆಲಿಶಾ ಗುಂಡ್ಲುಪೇಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಬುಧವಾರ ಬೆಳಗ್ಗೆ ವಾಯು ವಿಹಾರ ಮಾಡುವ ವೇಳೆ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಳು. ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದ ಆಕೆಯನ್ನು ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ.

Exit mobile version