ಬೆಳೆಯದ (Home Remedies) ಪ್ರತಿರೋಧಕ ಶಕ್ತಿಯ ಕಾರಣದಿಂದ ಎಳೆ ಮಕ್ಕಳಿಗೆ ಸೋಂಕುಗಳು ಅಂಟುವುದು ಬೇಗ. ಅವುಗಳ ಶ್ವಾಸನಾಳಗಳು ಪುಟ್ಟದಾಗಿ ಇರುವುದರಿಂದ ಸ್ವಲ್ಪ ಕಫ ಇದ್ದರೂ, ಕೆಮ್ಮುತ್ತಾ ಎದೆ ಬಿಗಿದು ಉಸಿರಾಡುವುದು ಕಷ್ಟವಾಗುತ್ತದೆ. ಆಡಲಾಗದೆ, ಅನುಭವಿಸಲೂ ಆಗದೆ ಅಳುವ ಕಂದಮ್ಮಗಳನ್ನು ಕಂಡಾಗ ಪಾಲಕರಿಗೆ ʻಅಯ್ಯೋʼ ಎನಿಸುವುದು ಸುಳ್ಳಲ್ಲ. ಇಂಥ ಅವಸ್ಥೆಯಲ್ಲಿ ಪುಟ್ಟ ಮಕ್ಕಳ ಆರೈಕೆಯನ್ನು ಮಾಡುವುದು ಹೇಗೆ?
ಮಳೆಗಾಲದಲ್ಲಿ ಶೀತ-ಕೆಮ್ಮಿನ ಉಪಟಳ ಯಾರನ್ನೂ ಬಿಡುವುದಿಲ್ಲ. ಆದರೆ ಚಿಕ್ಕ ಮಕ್ಕಳನ್ನು ಕಾಡಿದರೆ, ಅವರಿಗಿಂತ ಹೆಚ್ಚಿನ ತಲೆಬಿಸಿ ಹೆತ್ತವರಿಗಾಗುತ್ತದೆ. ಒಮ್ಮೆ ಚಳಿ-ಮಳೆ, ಬಿಸಿಲು-ಸೆಕೆ ಎನ್ನುತ್ತಾ ಏರಿಳಿಯುತ್ತಿರುವ ವಾತಾವರಣದಿಂದ, ಏನೇನೊ ಕಾಯಿಲೆಗಳು ಅಂಟುವುದರಲ್ಲಿ ಅನುಮಾನವೇ ಇಲ್ಲ. ಹರಿಯುವ ಮೂಗು, ಬಿಗಿಯುವ ಉಸಿರಿನಂಥ ತೊಂದರೆಗಳು ಪುಟಾಣಿಗಳನ್ನು ಸಾಕಷ್ಟು ಗೋಳಾಡಿಸುತ್ತವೆ. ಈಗಿನ್ನೂ ಪ್ರಬುದ್ಧವಾಗದ ಪ್ರತಿರೋಧಕ ಶಕ್ತಿಯ ಕಾರಣದಿಂದ ಎಳೆ ಮಕ್ಕಳಿಗೆ ಸೋಂಕುಗಳು ಅಂಟುವುದು ಬೇಗ. ಅವುಗಳ ಶ್ವಾಸನಾಳಗಳು ಪುಟ್ಟದಾಗಿ ಇರುವುದರಿಂದ ಸ್ವಲ್ಪ ಕಫ ಇದ್ದರೂ, ಎದೆ ಬಿಗಿದು ಉಸಿರಾಡುವುದು ಕಷ್ಟವಾಗುತ್ತದೆ. ಆಡಲಾಗದೆ, ಅನುಭವಿಸಲೂ ಆಗದೆ ಅಳುವ ಕಂದಮ್ಮಗಳನ್ನು ಕಂಡಾಗ ಪಾಲಕರಿಗೆ ʻಅಯ್ಯೋʼ ಎನಿಸುವುದು ಸುಳ್ಳಲ್ಲ. ಇವಿಷ್ಟು ಸಾಲದೆಂಬಂತೆ ಕಾಡುವ ಕೆಮ್ಮು. ಇಂಥ ಅವಸ್ಥೆಯಲ್ಲಿ ಪುಟ್ಟ ಮಕ್ಕಳ ಆರೈಕೆಯನ್ನು ಮಾಡುವುದು ಹೇಗೆ?
ಕಾರಣಗಳು
ಮಳೆಗಾಲದಲ್ಲಿ ಚಿಕ್ಕ ಮಕ್ಕಳಲ್ಲಿ ಸೋಂಕುಗಳು, ನೆಗಡಿ-ಕೆಮ್ಮು ಹೆಚ್ಚುವುದಕ್ಕೆ ಹಲವು ಕಾರಣಗಳು ಇರಬಹುದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಕಣ್ಣಿಗೆ ಕಾಣದ ಶಿಲೀಂಧ್ರಗಳು ಬೆಳೆಯುವುದು ಬೇಗ. ಇವು ಬಿಡುಗಡೆ ಮಾಡುವ ಸೂಕ್ಷ್ಮ ಕಣಗಳು ಎಳೆಯರ ಶ್ವಾಸನಾಳವನ್ನು ಉಸಿರಾಟದ ಮೂಲಕ ಸೇರುತ್ತವೆ. ಅಲ್ಲಿ ಅಲರ್ಜಿ ಉಂಟುಮಾಡುತ್ತವೆ. ಅದರಲ್ಲೂ ಅಲರ್ಜಿಗಳಿಗೆ ಹೆಚ್ಚು ತುತ್ತಾಗುವ ಮಕ್ಕಳಿಗೆ ಮೋಡ ಮತ್ತು ಮಬ್ಬಿನ ವಾತಾವರಣವು ಇನ್ನಷ್ಟು ತೊಂದರೆಗಳನ್ನು ತರುತ್ತದೆ. ಒಂದೆರಡು ದಿನಗಳು ಮೋಡ-ಮಳೆಯ ವಾತಾವರಣ, ಮತ್ತೆರಡು ದಿನ ಬಿಸಿಲು, ಪುನಃ ಮೋಡ- ಈ ರೀತಿಯ ಹವಾಮಾನವು ಅಲರ್ಜಿ ಕಡಿಮೆಯಾಗುವುದಕ್ಕೆ ಬಿಡುವುದೇ ಇಲ್ಲ. ಜೊತೆಗೆ, ಹಲವು ರೀತಿಯ ಸೋಂಕುಗಳ ಪ್ರಸರಣವನ್ನೂ ಹೆಚ್ಚಿಸುತ್ತದೆ. ಯಾವುದೇ ಸಣ್ಣ-ದೊಡ್ಡ ಸೋಂಕು ಬಂದ ಮೇಲೆ ನೆಗಡಿ, ಕೆಮ್ಮು ಬಾಲದಂತೆ ಹಿಂದೆಯೇ ಬರುತ್ತವೆ. ಹೀಗೆ ಪ್ರತಿರೋಧಕ ಶಕ್ತಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಸೊಂಕುಗಳು ಬರುತ್ತಿದ್ದರೆ ಮಕ್ಕಳು ಸೊರಗುವುದು ಸಹಜ. ವೈದ್ಯರು ಹೇಳಿದ ಔಷಧಿಗಳ ಜೊತೆಗೆ ಕೆಲವು ಸರಳ ಮನೆಮದ್ದುಗಳು ಸಹ ಮಕ್ಕಳ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತವೆ.
ಸ್ಟೀಮರ್
ಶೀತ-ಕೆಮ್ಮಿನ ದಿನಗಳಲ್ಲಿ ಬಿಸಿ ಆವಿಯನ್ನು ತೆಗೆದುಕೊಳ್ಳುವುದು ಶೀಘ್ರ ಚೇತರಿಕೆಗೆ ಎಡೆ ಮಾಡುತ್ತದೆ. ಬಿಸಿ ನೀರಿನ ಟಬ್‌ನಲ್ಲಿ ಕೆಲಕಾಲ ಮಗುವಿನೊಂದಿಗೆ ಇರುವುದಕ್ಕೆ ಸಾಧ್ಯವೇ ನೋಡಿ. ಇದರಿಂದ ಹೆಚ್ಚಿನ ಪ್ರಮಾಣದ ನೀರಾವಿ ಮಗುವಿಗೆ ದೊರೆಯುತ್ತದೆ. ಮಕ್ಕಳಿಗೆ ಬಳಸಲು ಸಾಧ್ಯವಾಗುವಂಥ ಸ್ಟೀಮರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಿಮಗೆ ಸೂಕ್ತ ಎನಿಸಿದ್ದನ್ನು ತಂದು ಉಪಯೋಗಿಸಿ ನೋಡಬಹುದು. ಇದರಿಂದ ಬಿಗಿದ ಶ್ವಾಸನಾಳಗಳು ಸಡಿಲವಾಗಿ, ಕಫ ಹೊರಬರಲು ಸಾಧ್ಯವಾಗುತ್ತದೆ.
ಬೆಚ್ಚಗಿನ ಪೇಯಗಳು
ಆರು ತಿಂಗಳ ನಂತರದ ಎಳೆ ಮಕ್ಕಳಿಗೆ ಆಗಾಗ ಒಂದೆರಡು ಚಮಚದಷ್ಟು ಬೆಚ್ಚಗಿನ ನೀರು ಅಥವಾ ಸೌಮ್ಯವಾದ ಜೀರಿಗೆ ಇಲ್ಲವೇ ಕೊತ್ತಂಬರಿ ನೀರನ್ನು ಕುಡಿಸಬಹುದು. ವರ್ಷದ ಮೇಲಿನ ಮಕ್ಕಳಿಗೆ ಬೆಚ್ಚಗಿನ ನೀರು ಅಥವಾ ಹಾಲಿಗೆ ಕೊಂಚ ಜೇನುತುಪ್ಪ ಹಾಕಿಯೂ ಕುಡಿಸಬಹುದು. ಇದರಿಂದ ಗಂಟಲಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಮೂಗಿನ ಸ್ಪ್ರೇ
ಉಪ್ಪು ನೀರಿನ ಸ್ಪ್ರೇಗಳು ಕಟ್ಟಿದ ಮೂಗನ್ನು ಖಾಲಿ ಮಾಡಲು ಸಹಾಯ ಮಾಡಬಲ್ಲವು. ಪುಟ್ಟ ಮಕ್ಕಳಿಗೆಂದೇ ಮೀಸಲಾದ ಸ್ಪ್ರೇಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆಗಳು ಬರಲಾರವು. ಈ ಮೂಲಕ ಉಸಿರಾಟ ಸರಾಗವಾಗಿ ಮಕ್ಕಳಿಗೆ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಸಾಕಷ್ಟು ವಿಶ್ರಾಂತಿ ದೇಹಕ್ಕೆ ದೊರೆಯದಿದ್ದರೆ, ಗುಣವಾಗುವುದು ನಿಧಾನವಾಗುತ್ತದೆ.
ಮಲಗಿಸುವ ಭಂಗಿ
ಉಸಿರಾಟ ಕಷ್ಟವಾಗಿ ಕೆಮ್ಮು ಕಾಡುತ್ತಿದ್ದರೆ, ಮಕ್ಕಳ ತಲೆಯನ್ನು ಕೊಂಚ ಎತ್ತರ ಮಾಡಿ ಮಲಗಿಸಿ. ಕೇವಲ ದಿಂಬನ್ನಷ್ಟೇ ಎತ್ತರಿಸಬೇಡಿ. ಬದಲಿಗೆ ಹಾಸಿಗೆಯನ್ನೇ ತಲೆಯ ಭಾಗದಲ್ಲಿ ಎತ್ತರ ಬರುವಂತೆ ಮಾಡಿ. ಇದರಿಂದ ಉಸಿರಾಟ ಸರಾಗವಾಗಿ, ಕೆಮ್ಮು ಕಡಿಮೆಯಾಗುತ್ತದೆ. ಶಾಂತವಾಗಿ ನಿದ್ದೆ ಮಾಡಲು ಮಕ್ಕಳಿಗೆ ಸಹಾಯವಾಗುತ್ತದೆ.
ಹ್ಯುಮಿಡಿಫಯರ್
ಮನೆಯಲ್ಲಿ ಹ್ಯುಮಿಡಿಫಯರ್ ಉಪಯೋಗಿಸುವುದು ಸಹ ಕೆಮ್ಮು ಕಡಿಮೆ ಮಾಡುವುದಕ್ಕೆ ಇನ್ನೊಂದು ಪರಿಣಾಮಕಾರಿ ವಿಧಾನ. ಇದರಿಂದ ಗಂಟಲಿನ ಕಿರಿಕಿರಿ ಗಣನೀಯವಾಗಿ ತಗ್ಗಿಸಬಹುದು. ಆದರೆ ವಾತಾವರಣ ಶುಷ್ಕವಾಗಿ ಇದ್ದಾಗ ಮಾತ್ರವೇ ಇದು ಹೆಚ್ಚು ಪ್ರಯೋಜನಕಾರಿ. ವಾತಾವರಣದಲ್ಲಿ ತೇವ ಹೆಚ್ಚಿದ್ದರೆ, ಈ ಉಪಕರಣದಿಂದ ಸಹಾಯ ಆಗಲಾರದು.
ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ
ಮನೆಮದ್ದುಗಳು
- ಕಫ ಕರಗಿಸಿ, ಕೆಮ್ಮು ಕಡಿಮೆ ಮಾಡುವಲ್ಲಿ ಹಸಿ ಶುಂಠಿಯ ರಸ ಪರಿಣಾಮಕಾರಿ. ವರ್ಷ ಮೇಲಿನ ಮಕ್ಕಳಿಗಾದರೆ ಇದನ್ನು ನೀಡಬಹುದು. ಒಂದೆರಡು ಹನಿಯಷ್ಟು ನಿಂಬೆ ರಸ, ಅಷ್ಟೇ ಪ್ರಮಾಣದ ಶುಂಠಿ ರಸವನ್ನು ನಾಲ್ಕಾರು ಹನಿ ಜೇನುತಪ್ಪದೊಂದಿಗೆ ಮಿಶ್ರ ಮಾಡಿ, ಮಗುವಿನ ನಾಲಿಗೆಗೆ ಆಗಾಗ ಸ್ವಲ್ಪವೇ ನೆಕ್ಕಿಸುವುದರಿಂದ ಕೆಮ್ಮು ನಿಯಂತ್ರಿಸಲು ಸಹಾಯವಾಗುತ್ತದೆ.
- ಕೊಂಚ ದೊಡ್ಡ ಮಕ್ಕಳಿಗಾದರೆ, ಸೋಂಪನ್ನು ಹುರಿದು ತರಿಯಾಗಿ ಪುಡಿ ಮಾಡಿ. ಅದನ್ನು ಆಗೀಗ ಕಾಲು ಚಮಚದಷ್ಟು ಮಕ್ಕಳಿಗೆ ಅಗಿಯುವುದಕ್ಕೆ ನೀಡಿ. ಇದರಿಂದಲೂ ಕೆಮ್ಮು ನಿಯಂತ್ರಣಕ್ಕೆ ಬರಬಹುದು.
- ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿ, ಅದರಲ್ಲಿ ಒಂದೆರಡು ಕರ್ಪೂರವನ್ನು ಕರಗಿಸಿ. ಈ ತೈಲವನ್ನು ಮಕ್ಕಳ ಎದೆ ಮತ್ತು ಬೆನ್ನಿನ ಭಾಗಕ್ಕೆ ತೆಳುವಾಗಿ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ಬಿಸಿ ನೀರಲ್ಲಿ ಅದ್ದಿ ತೆಗೆದು ಹಿಂಡಿದ ಬಟ್ಟೆಯಿಂದ, ಈ ಭಾಗಗಳಿಗೆ ಶಾಖ ಕೊಡಿ