ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡಬೇಕಾದವರು ಹೀಟ್‌ವೇವ್ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಬಿಸಿಲಿಗೆ ಹೋಗದೇ ಇರುವವರೂ ಸಾಕಷ್ಟು ದ್ರವ ಪದಾರ್ಥ ಸೇವಿಸಿ ದೇಹವನ್ನು ಸಮರ್ಥವಾಗಿ ಇಟ್ಟುಕೊಳ್ಳದೇ ಹೋದರೆ ಸಮಸ್ಯೆ ಉಂಟಾಗಬಹುದು. ಕೂಲಿ ಕೆಲಸಗಾರರು, ರೈತರು, ಅಗ್ನಿಶಾಮಕ ಕೆಲಸಗಾರರು, ವಿದ್ಯುತ್ ಕಂಪನಿ ಸಿಬ್ಬಂದಿ, ವಾತಾನುಕೂಲ ವ್ಯವಸ್ಥೆ ಇಲ್ಲದಲ್ಲಿ ಕೆಲಸ ಮಾಡುವವರು ಎಚ್ಚರವಾಗಿರಬೇಕು. ಸಣ್ಣ ಮಕ್ಕಳು, ಹಿರಿಯ ನಾಗರಿಕರು, ದುರ್ಬಲ ಆರೋಗ್ಯವುಳ್ಳವರು ಶಾಖದಲೆಯ ಹೊಡೆತಕ್ಕೆ ತುತ್ತಾಗುವ ಸಾಧ್ಯತೆ ಅಧಿಕ
ಶಾಖದ ಸುಸ್ತು
ಮನುಷ್ಯನ ದೇಹ ಹೆಚ್ಚಿನ ಶಾಖ ತಾಳಿಕೊಳ್ಳದು. ಪರಿಸರದ ತಾಪಮಾನ 37 ಡಿಗ್ರಿ ಸೆಂಟಿಗ್ರೇಡ್ ದಾಟಿದರೆ ದೇಹದಲ್ಲಿ ತಳಮಳ ಶುರುವಾಗುತ್ತದೆ. ಶಾಖದ ಸುಸ್ತು ಉಂಟಾಗಬಹುದು. ಅದರ ಲಕ್ಷಣಗಳು ಹೀಗಿವೆ:
- ಆಲಸ್ಯ, ಜಡತೆ,
- ಹೆಚ್ಚುವ ದಾಹ
- ಹಸಿವು ಮಾಯ
- ಸುಸ್ತು, ಬಳಲಿಕೆ
- ತಲೆನೋವು
- ತಲೆತಿರುಗುವಿಕೆ
- ವಾಕರಿಕೆ, ವಾಂತಿ
- ದೇಹಶಾಖ ಹೆಚ್ಚಳ
- ಮೂತ್ರ ಕಡಿಮೆ ಹೋಗುವಿಕೆ
ಹೀಟ್‌ಸ್ಟ್ರೋಕ್ ಆದರೆ…
ಶಾಖದಿಂದ ಉಂಟಾಗುವ ಸುಸ್ತನ್ನು ಕೂಡಲೇ ಗಮನಿಸಿ ಸಾಕಷ್ಟು ನೀರು ಕುಡಿಯಬೇಕು. ಇಲ್ಲದೇ ಹೋದರೆ ಹೀಟ್‌ಸ್ಟ್ರೋಕ್ ಆಗಬಹುದು. ಇಂಥ ಪೇಷೆಂಟ್‌ಗಳನ್ನು ಕೂಡಲೇ ನೆರಳಿಗೆ ಸಾಗಿಸಿ, ದೇಹವನ್ನು ತಂಪುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಹೋದರೆ ಪೇಷೆಂಟ್ ಕೋಮಾಗೆ ಹೋಗಬಹುದು, ಬಹು ಅಂಗ ವೈಫಲ್ಯ ಉಂಟಾಗಬಹುದು.
ಜನತೆಗೆ ಸೂಚನೆ
ಹೆಚ್ಚುತ್ತಿರುವ ಹೀಟ್‌ವೇವ್‌ನ ಹಾನಿಕಾರಕ ಆರೋಗ್ಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ತಜ್ಞರು ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ:
- ಬಿಸಿಲಿಗೆ ತೆರಳುವುದನ್ನು ತಪ್ಪಿಸಿ.
- ಸಾಕಷ್ಟು ನೀರು ಕುಡಿಯಿರಿ, ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ.
- ಹಗುರ, ತಿಳಿ ಬಣ್ಣದ, ಸಡಿಲ, ಹತ್ತಿಯ ಬಟ್ಟೆಗಳನ್ನು ಧರಿಸಿ.
- ಬಿಸಿಲಿಗೆ ಹೋಗುವಾಗ ತಲೆಯನ್ನು ಬಟ್ಟೆಯಿಂದ ಕವರ್ ಮಾಡಿಕೊಳ್ಳಿ, ಟೋಪಿ ಧರಿಸಿ ಅಥವಾ ಕೊಡೆ ಬಳಸಿ.
- ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ತಪ್ಪಿಸಿ.
- ದಿನದ ಮಧ್ಯಭಾಗದಲ್ಲಿ ಕಠಿಣ ಕೆಲಸ, ವ್ಯಾಯಾಮ ಬೇಡ.
- ದೇಹ ತಂಪುಗೊಳಿಸುವ ಎಳನೀರು, ಮಜ್ಜಿಗೆ, ಜ್ಯೂಸ್ನಂಥ ಪದಾರ್ಥಗಳನ್ನು ಸೇವಿಸಿ.
ಇದನ್ನೂ ಓದಿ: Explainer: Heatwave, ಭಾರತ ಕುದಿಯುವ ಕುಲುಮೆ