Site icon Vistara News

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

ICMR Guidelines

ಕೆಲವೆಡೆ ಮಳೆ (rain) ಸುರಿದರೂ ಇನ್ನು ಕೆಲವೆಡೆ ಬಿಸಿಲಿನ (summer) ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಬೇಸಿಗೆಯ ಶಾಖದಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕರು ಕಬ್ಬಿನ ರಸ (sugercane juice), ಹಣ್ಣಿನ ರಸ (fruit juice) ಮತ್ತು ಕೋಲ್ಡ್ ಕಾಫಿಗಳಂತಹ (cold coffee) ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR Guidelines) ಜನಪ್ರಿಯ ಬಾಯಾರಿಕೆ ತಣಿಸುವ ಈ ಪಾನೀಯಗಳ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಆದ್ದರಿಂದ ಇದರ ಸೇವನೆಯನ್ನು ಕಡಿಮೆ ಮಾಡಬೇಕು ಎನ್ನುತ್ತದೆ ಐಸಿಎಂಆರ್. ತಂಪು ಪಾನೀಯಗಳು ನೀರು ಅಥವಾ ತಾಜಾ ಹಣ್ಣುಗಳಿಗೆ ಪರ್ಯಾಯವಲ್ಲ. ಹೀಗಾಗಿ ಆದಷ್ಟು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಬೇಕು. ಬದಲಿಗೆ ಮಜ್ಜಿಗೆ, ಸಕ್ಕರೆ ಸೇರಿಸದೆ ನಿಂಬೆ ನೀರು, ಸಂಪೂರ್ಣ ಹಣ್ಣಿನ ರಸ ಮತ್ತು ತೆಂಗಿನ ನೀರು ಸೇವನೆ ಒಳ್ಳೆಯದು ಎಂದು ಹೇಳಿದೆ.

ಕಬ್ಬಿನ ರಸ ಅಪಾಯಕಾರಿ ಏಕೆ?

ಆಹಾರ ತಜ್ಞರ ಪ್ರಕಾರ ಕಬ್ಬಿನ ರಸದಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸಮೃದ್ಧವಾಗಿದೆ. ಇದು ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಹಲವಾರು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ.
ನಿರ್ಜಲೀಕರಣ

ಹೆಚ್ಚಿನ ಸಕ್ಕರೆ ಸೇವನೆಯು ದೇಹದಲ್ಲಿ ಹೆಚ್ಚಿನ ನೀರಿನ ನಷ್ಟಕ್ಕೆ ಕಾರಣವಾಗಬಹುದು. ಸಕ್ಕರೆಯು ಚಯಾಪಚಯಗೊಳಿಸಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ದೇಹವು ಈಗಾಗಲೇ ಬೆವರಿನ ಮೂಲಕ ಗಮನಾರ್ಹವಾದ ನೀರನ್ನು ಕಳೆದುಕೊಂಡಾಗ ಬೇಸಿಗೆಯಲ್ಲಿ ಇದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ.

ಮಧುಮೇಹ

ಕಬ್ಬಿನ ರಸದಿಂದ ದೇಹ ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಏರುಪೇರಾಗುವುದು. ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಇದು ಹೆಚ್ಚಿಸುತ್ತದೆ.

ತೂಕ ಹೆಚ್ಚಳ

ಸಕ್ಕರೆ ಪಾನೀಯಗಳಿಂದ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಹಣ್ಣು ಮತ್ತು ಹಣ್ಣಿನ ರಸ ಯಾವುದು ಒಳ್ಳೆಯದು?

ಹಣ್ಣುಗಳು ಪೌಷ್ಟಿಕಾಂಶದ ಫೈಬರ್ ಅನ್ನು ಹೊಂದಿರುತ್ತವೆ. ಇದು ಜ್ಯೂಸ್ ಮಾಡುವಾಗ ಹೊರಹಾಕಲ್ಪಡುತ್ತದೆ. ಫೈಬರ್ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಂಪೂರ್ಣ ಹಣ್ಣುಗಳನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಆದರೆ ಸಕ್ಕರೆ ಹೀರಿಕೊಳ್ಳುವಿಕೆಯ ವೇಗವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ತಂಪು ಪಾನೀಯ

ಹಲವು ಬಾರಿ ನೀರಿಗೆ ಬದಲಾಗಿ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಇದು ಆರೋಗ್ಯಕರವಲ್ಲ ಎನ್ನುತ್ತಾರೆ ಆಹಾರ ತಜ್ಞರು. ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಕ್ಯಾಲೋರಿ ಸೇವನೆ ಮತ್ತು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅನೇಕ ತಂಪು ಪಾನೀಯಗಳು ಕೃತಕ ಸುವಾಸನೆ, ಬಣ್ಣ ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತವೆ. ಇದು ಕಾಲಾನಂತರದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ತಂಪು ಪಾನೀಯಗಳಲ್ಲಿನ ಕೆಫೀನ್ ಮತ್ತು ಆಮ್ಲೀಯ ಅಂಶವು ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಭಾರತದಂತಹ ಬಿಸಿ ವಾತಾವರಣದಲ್ಲಿ ಇದು ವಿಶೇಷವಾಗಿ ಅಪಾಯಕಾರಿ.

ಬೇಸಿಗೆಯಲ್ಲಿ ಚಹಾ, ಕಾಫಿ

ಪ್ರತಿದಿನ ಎಷ್ಟು ಕಾಫಿ ಮತ್ತು ಚಹಾವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಬರಿ ಹೊಟ್ಟೆಗೆ ಚಹಾ, ಕಾಫಿ ಸೇವನೆಯನ್ನು ತಪ್ಪಿಸಿ. ಕುಡಿಯಲೇ ಬೇಕು ಅನಿಸಿದರೆ ಉಪಹಾರ ಮತ್ತು ಮಧ್ಯಾಹ್ನ ಊಟದ ಮಧ್ಯದ ಸಮಯಕ್ಕೆ ಮುಂದೂಡಿ. ಇಲ್ಲವಾದರೆ ದಾಲ್ಚಿನ್ನಿ, ಅರಿಶಿನದಂತಹ ಗಿಡಮೂಲಿಕೆಗಳನ್ನು ಮತ್ತು ಕ್ಯಾಮೊಮೈಲ್, ಮಲ್ಲಿಗೆ, ದಾಸವಾಳದ ಚಹಾದಂತಹ ಹೂವುಗಳನ್ನು ಕುಡಿಯಬಹುದು.

ದೇಹದ ಸಮಸ್ಯೆ ಆಲಿಸಿ

ಬೇಸಿಗೆಯಲ್ಲಿ ನಡುಗುವಿಕೆ, ಆತಂಕ ಅಥವಾ ನಿದ್ರೆಯ ಸಮಸ್ಯೆಗಳನ್ನು ಅನುಭವಿಸಿದರೆ ಆದಷ್ಟು ವಿಶ್ರಾಂತಿ ಪಡೆಯಿರಿ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ.

ನಿರ್ಜಲೀಕರಣವಾಗದಂತೆ ತಡೆಯುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯವಾಗಿರಲು ದೇಹವನ್ನು ಹೈಡ್ರೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್ ನೀರನ್ನು ಕುಡಿಯಿರಿ. ದೇಹದಲ್ಲಿ ಬೆವರಿನ ಮೂಲಕ ಕಳೆದುಹೋಗುವ ಲವಣ ಮತ್ತು ಖನಿಜಗಳನ್ನು ಪುನಃ ತುಂಬಿಸಲು ಮನೆಯಲ್ಲಿ ಅಥವಾ ವಾಣಿಜ್ಯಿಕವಾಗಿ ಲಭ್ಯವಿರುವ ಎಲೆಕ್ಟ್ರೋಲೈಟ್ ಪರಿಹಾರಗಳನ್ನು ಬಳಸಿ.

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸಲು ಆಹಾರದಲ್ಲಿ ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಯಂತಹ ನೀರು-ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಆಲ್ಕೋಹಾಲ್ ಮತ್ತು ಸಕ್ಕರೆ ಪಾನೀಯಗಳು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ಮಿತವಾಗಿ ಸೇವಿಸಿ ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು.

Exit mobile version