Site icon Vistara News

Nutrition Week 2023: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ! ಪೌಷ್ಟಿಕತೆ ಹೆಚ್ಚಿಸುವ ಉದ್ದೇಶ

millets

ಸಿರಿಧಾನ್ಯಗಳು ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಆಹಾರ. ಇವುಗಳಲ್ಲಿ ಧಾರಾಳ (Nutrition Week 2023) ಪೌಷ್ಟಿಕಾಂಶಗಳಿರುತ್ತವೆ. ಭಾರತ ಸೇರಿ ಅನೇಕ ರಾಷ್ಟ್ರಗಳಲ್ಲಿ ಸಿರಿಧಾನ್ಯದ ಬಳಕೆ ಹೆಚ್ಚಿದೆ. ಅದರಲ್ಲೂ ಭಾರತದಲ್ಲಿ ರಾಗಿ, ಜೋಳದಂತಹ ಸಿರಿಧಾನ್ಯಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತದೆ. ಪ್ರಪಂಚದಾದ್ಯಂತ ಸುಮಾರು ನೂರು ಕೋಟಿ ಮಂದಿ ಸಿರಿಧಾನ್ಯಗಳನ್ನು ತಮ್ಮ ಪ್ರಮುಖ ಆಹಾರವಾಗಿ ಬಳಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ (International Year of Millets) ಆಚರಿಸಲಾಗುತ್ತಿದೆ.

ಹೌದು. ಇದು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ. ಈ ರೀತಿಯ ಆಚರಣೆಯೊಂದನ್ನು ಮಾಡಬೇಕು ಎಂದು ಮೊದಲು ಯೋಚಿಸಿದ್ದು ಭಾರತವೇ. ಈ ವಿಚಾರವನ್ನು ಭಾರತವು ವಿಶ್ವಸಂಸ್ಥೆಯ ಎದುರಿಟ್ಟಿತ್ತು. 2023ನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ ಎಂದು ಗುರುತಿಸಬೇಕು ಎಂದು ಮನವಿ ಮಾಡಿತ್ತು. ಅದಕ್ಕೆ 70ಕ್ಕೂ ಅಧಿಕ ರಾಷ್ಟ್ರಗಳು ಒಪ್ಪಿಗೆಯನ್ನೂ ಸೂಚಿಸಿದವು. ಹಾಗಾಗಿ ವಿಶ್ವಸಂಸ್ಥೆಯು ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಇದನ್ನೂ ಓದಿ: Elon Musk: ಪತ್ರಕರ್ತರಿಗೆ ಎಲಾನ್‌ ಮಸ್ಕ್‌ ಬಿಗ್ ಆಫರ್;‌ ಇನ್ನು Xನಲ್ಲಿ ಬರೆಯಿರಿ, ಕೈತುಂಬ ಹಣ ಗಳಿಸಿರಿ

ಏಕೆ ಈ ಆಚರಣೆ?

ಸಿರಿಧಾನ್ಯಗಳ ವರ್ಷ ಆಚರಣೆಗೆ ಮುಖ್ಯ ಕಾರಣ ಅದರಲ್ಲಿರುವ ಪೌಷ್ಟಿಕಾಂಶ. ಸಿರಿಧಾನ್ಯಗಳು ಹೆಚ್ಚು ಪ್ರೋಟೀನ್‌ ಮತ್ತು ಫೈಬರ್‌ ಇರುವಂತಹ ಧಾನ್ಯಗಳು. ಇದನ್ನು ಸೇವಿಸುವ ಮನುಷ್ಯನಿಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಸಿರಿಧಾನ್ಯಗಳು ನೀಡುತ್ತವೆ. ಅದಕ್ಕಾಗಿಯೇ ದಿನೇದಿನೆ ಹೆಚ್ಚು ಹೆಚ್ಚು ಪ್ರಮಾಣದ ಜನರು ಅದನ್ನು ಬಳಕೆ ಮಾಡುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ಸಿರಿಧಾನ್ಯಗಳನ್ನು ಬೆಳೆಯುವುದು ಕೂಡ ಬೇರೆ ಎಲ್ಲ ಧಾನ್ಯಗಳ ಬೆಳೆಗಿಂತ ಸುಲಭವಾಗಿದ್ದಾಗಿದೆ. ಕಡಿಮೆ ನೀರಿದ್ದರೂ ಕೂಡ ಸಿರಿಧಾನ್ಯಗಳನ್ನು ಅರಾಮವಾಗಿ ಬೆಳೆಯಬಹುದು. ರಾಸಾಯನಿಕ ಬಳಸದೆಯೇ ಉತ್ತಮ ಬೆಳೆ ಪಡೆಯಬಹುದು. ಆ ಕಾರಣದಿಂದಾಗಿ ಈ ಸಿರಿಧಾನ್ಯಗಳು ರೈತ ಸ್ನೇಹಿ ಕೂಡ ಹೌದು.

ಸಿರಿಧಾನ್ಯಗಳ ವಿಧಗಳು

ಸಿರಿಧಾನ್ಯವೆಂದ ಮಾತ್ರಕ್ಕೆ ಅದು ರಾಗಿ, ಜೋಳ ಮಾತ್ರವಲ್ಲ. ವಿಶ್ವದಲ್ಲಿ ಒಟ್ಟು 60ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯಗಳನ್ನು ಬೆಳೆದು, ಬಳಸಲಾಗುತ್ತಿದೆ. ಭಾರತ, ಮೆಕ್ಸಿಕೋ, ಚೀನಾ, ಆಫ್ರಿಕಾ, ಯುರೋಪ್‌ ಸೇರಿ ಹಲವಾರು ದೇಶಗಳು ಸಿರಿಧಾನ್ಯಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿಕೊಂಡು ಸೇವಿಸುತ್ತವೆ. ಭಾರತದಲ್ಲಿ ಹಲವು ಸಿರಿಧಾನ್ಯಗಳ ಬಳಕೆಯಿದೆ. ಅದರಲ್ಲಿ ಪ್ರಮುಖವೆಂದರೆ ರಾಗಿಯ ಹಲವು ಬಗೆಗಳು ಮತ್ತು ಜೋಳ.

ಆರೋಗ್ಯಕ್ಕೇನು ಉಪಯೋಗ?

ಸಿರಿಧಾನ್ಯಗಳ ಬಳಕೆಯಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಸಿರಿಧಾನ್ಯಗಳ ಬಳಕೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅವುಗಳಲ್ಲಿ ನಿಯಾಸಿನ್‌ ಅಧಿಕವಾಗಿರುವುದರಿಂದ ಚರ್ಮ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಹಾಗೆಯೇ ಅವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ದೇಹದಲ್ಲಿ ರಕ್ತದೊತ್ತಡ ಕಡಿಮೆ ಮಾಡುವುದಕ್ಕೆ ಕೂಡ ಸಹಾಯಕಾರಿ. ಇತರೆ ಧಾನ್ಯಗಳಿಗಿಂತ ಸಿರಿಧಾನ್ಯಗಳಲ್ಲಿ ಅಮೈನೋ ಆಮ್ಲ ಹೆಚ್ಚಾಗಿರುತ್ತದೆ. ಹಾಗಾಗಿ ಸಿರಿಧಾನ್ಯ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಸಿರಿ ಧಾನ್ಯಗಳಿಗೆ ಭಾರಿ ಬೇಡಿಕೆ ಇದೆ. ಆರೋಗ್ಯಕರ ಜೀವನಕ್ಕೆ ಸಿರಿ ಧಾನ್ಯಗಳು ಒಂದು ವರ.

ಇದನ್ನೂ ಓದಿ: National Nutrition Week 2023: ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ: ಸತ್ವಯುತ ಆಹಾರ ಸೇವಿಸಿ, ಪೂರ್ಣಾವಧಿ ಬದುಕಿ!

Exit mobile version