Site icon Vistara News

International Year of Millets : ಸಿರಿಧಾನ್ಯಗಳ ಬಗ್ಗೆ ಭಾರತಕ್ಕೆ ಏಕೆ ಇಷ್ಟು ಆಸಕ್ತಿ?

Raitha Siri Yojana

ಇದು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ(International Year of Millets) 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಬೇಕು ಎಂದು ಭಾರತವೇ ವಿಶ್ವ ಸಂಸ್ಥೆ ಎದುರು ಪ್ರಸ್ತಾಪ ಇಟ್ಟು ಅದಕ್ಕೆ 70 ರಾಷ್ಟ್ರಗಳಿಗೂ ಅಧಿಕ ರಾಷ್ಟ್ರಗಳಿಂದ ಸಹಮತ ಪಡೆದುಕೊಂಡಿದೆ. ಅಂದ ಹಾಗೆ ಭಾರತದ ಸಿರಿಧಾನ್ಯಗಳ ಬಗ್ಗೆ ಏಕಿಷ್ಟು ಆಲೋಚನೆ ಮಾಡುತ್ತಿದೆ ಎನ್ನುವ ಯೋಚನೆ ಬರುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಡತನ ಹಾಗೂ ಅಪೌಷ್ಠಿಕಾಂಶಕತೆ ಕಾಡುತ್ತಿದೆ. ಹಲವಾರು ರಾಷ್ಟ್ರಗಳಲ್ಲಿ ಪೌಷ್ಠಿಕ ಆಹಾರ ಸಿಗದ ಕಾರಣಕ್ಕೇ ಸಾಕಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ರೀತಿಯ ಸ್ಥಿತಿಯಲ್ಲಿರುವ ವಿಶ್ವಕ್ಕೆ ಪೌಷ್ಠಿಕಾಂಶ ತುಂಬಬಲ್ಲದ್ದು ಸಿರಿಧಾನ್ಯ. ಅಧಿಕ ಪೌಷ್ಠಿಕಾಂಶ ಹಾಗೂ ಪ್ರೋಟೀನ್‌ ಹೊಂದಿರುವ ಸಿರಿಧಾನ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎನ್ನುವುದು ಭಾರತ ಸರ್ಕಾರದ ಚಿಂತನೆಯಾಗಿದೆ.

ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಿರಿಧಾನ್ಯ ಉತ್ಪಾದನೆ ಮಾಡುವ ದೇಶಗಳ ಪೈಕಿ ಮೊದಲನೇ ಸ್ಥಾನದಲ್ಲಿದೆ. ಹಾಗೆಯೇ ಸಿರಿಧಾನ್ಯಗಳ ರಫ್ತು ಪೈಕಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಪುರಾತನ ಕಾಲದಿಂದಲೂ ಸಿರಿಧಾನ್ಯ ಬಳಕೆ ಹೆಚ್ಚಾಗಿ ಆಗುತ್ತಾ ಬಂದಿದೆ. ಈಗಲೂ ಗ್ರಾಮೀಣ ಭಾಗಗಳಲ್ಲಿ ಜನರು ಸಿರಿಧಾನ್ಯಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ.

ಈ ಸಿರಿಧಾನ್ಯಗಳ ಮಹತ್ವವನ್ನು ವಿಶ್ವಕ್ಕೆ ಸಾರುವುದರಿಂದ ವಿಶ್ವದಲ್ಲಿ ಅಪೌಷ್ಠಿಕತೆ ಸಮಸ್ಯೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಬೆಳೆಯಲಾಗುವ ಸಿರಿಧಾನ್ಯಗಳಿಗೆ ಬೇಡಿಕೆಯೂ ಹೆಚ್ಚಾಗಲಿದ್ದು, ಇಲ್ಲಿನ ರೈತರಿಗೆ ಆದಾಯ ಹೆಚ್ಚಲಿದೆ. ಅಷ್ಟೇ ಅಲ್ಲದೆ ಅಕ್ಕಿ, ಗೋಧಿಗಳಂತಹ ಮುಖ್ಯ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯಗಳ ಬೆಳೆ ಸುಲಭವಾಗಿದೆ. ಅದಕ್ಕೆ ಹೆಚ್ಚಿನ ನೀರಿನಾಂಶ ಬೇಕಾಗುವುದಿಲ್ಲ. ರಾಸಾಯನಿಕಗಳೂ ಅಧಿಕವಾಗಿ ಬೇಡದ ಸಿರಿಧಾನ್ಯಗಳು ರೈತ ಸ್ನೇಹಿಯೂ ಹೌದು.

ಭಾರತ ಕಳೆದ ಕೆಲವು ವರ್ಷಗಳಿಂದ ಸಿರಿಧಾನ್ಯಗಳ ಬಳಕೆ ಬಗ್ಗೆ ಉತ್ತೇಜನ ನೀಡುತ್ತಲೇ ಬಂದಿದೆ. 2018 ಅನ್ನು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿತು. 2021ರಲ್ಲಿ ಭಾರತ 64 ಮಿಲಿಯನ್‌ ಡಾಲರ್‌ ಮೌಲ್ಯದ ಸಿರಿಧಾನ್ಯವನ್ನು ರಫ್ತು ಮಾಡಿದೆ. 2019 ಮತ್ತು 2020ರಲ್ಲಿ 30 ಮಿಲಿಯನ್‌ ಡಾಲರ್‌ ಮೌಲ್ಯದ ಸಿರಿಧಾನ್ಯ ರಫ್ತು ಮಾಡುವುದು ಕೂಡ ಭಾರತಕ್ಕೆ ಕಷ್ಟವಾಗಿತ್ತು.

ಪೂರ್ತಿ ಏಷ್ಯಾದಲ್ಲಿ ಉತ್ಪತ್ತಿಯಾಗುತ್ತಿರುವ ಸಿರಿಧಾನ್ಯಗಳ ಪೈಕಿ ಶೇ.80 ಅನ್ನು ಭಾರತದಲ್ಲೇ ಬೆಳೆಯಲಾಗುತ್ತದೆ. ಹಾಗೆಯೇ ಜಾಗತಿಕವಾಗಿ ಶೇ.20 ಸಿರಿಧಾನ್ಯದ ಬೆಳೆ ಭಾರತದಲ್ಲಿ ಆಗುತ್ತಿದೆ.

ಇದನ್ನೂ ಓದಿ: Nutrition Week 2023: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ! ಪೌಷ್ಟಿಕತೆ ಹೆಚ್ಚಿಸುವ ಉದ್ದೇಶ

Exit mobile version