Site icon Vistara News

Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

Jackfruit benefits

ಬೇಸಿಗೆ ಬಂತೆಂದರೆ ಮಾವು ಹಲಸುಗಳ ಸಂಭ್ರಮ. ಸೆಖೆಯಲ್ಲಿ ಮೈ ಬೇಯುತ್ತಿದ್ದರೂ, ಹಲಸಿನ ಹಣ್ಣಿನ (Jackfruit) ಬಗೆಬಗೆಯ ಖಾದ್ಯಗಳನ್ನು ಮಾಡಿ ಬಾಯಿ ಚಪ್ಪರಿಸುವ ಸುಖ ಬಹುತೇಕ ಎಲ್ಲರದ್ದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವು ಹಲಸನ್ನು ಕಡೆಗಣಿಸಲಾರಿರಿ. ಈ ರುಚಿಯಾದ ಹಣ್ಣನ್ನು ಈ ಬೇಸಿಗೆಯಲ್ಲಿ ನೀವು ಯಾಕೆ ತಿನ್ನಬೇಕು (Jackfruit Benefits) ಎಂಬುದಕ್ಕೆ 10 ಕಾರಣಗಳು ಇಲ್ಲಿವೆ.

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ

ಕಡಿಮೆ ಕ್ಯಾಲರಿಯ ಈ ಹಣ್ಣು (Jackfruit) ಪೋಷಕಾಂಶಗಳ ವಿಚಾರದಲ್ಲಿಯೂ ಶ್ರೀಮಂತಿಕೆಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸದಾ ಮುಂದಿರುವ ಸೇಬು, ಆಪ್ರಿಕಾಟ್‌, ಅವಕಾಡೋ, ಬಾಳೆಹಣ್ಣು ಮತ್ತಿತರ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ಹಲಸಿನಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ದೇಹಕ್ಕೆ ಯಾವುದೇ ಇನ್‌ಫೆಕ್ಷನ್‌ ಅಥವಾ ವೈರಸ್‌ನ ಪ್ರವೇಶವಾದಾಗ ಅವುಗಳ ವಿರುದ್ಧ ಹೋರಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಹಲಸಿನ ಹಣ್ಣಿನ ಬೀಜ ಹಾಗೂ ತೊಳೆಯಲ್ಲಿ ಉತ್ತಮ ಮಟ್ಟದಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣಾಂಶವಿದ್ದು, ವಿಟಮಿನ್‌ ಬಿ1 ಬಿ3, ಬಿ6 ಹಾಘೂ ಫೋಲೇಟ್‌ ಅನ್ನೂ ಹೊಂದಿದೆ.

ಉತ್ತಮ ಶಕ್ತಿವರ್ಧಕ

100 ಗ್ರಾಂಗಳಷ್ಟು ಹಲಸಿನ ಹಣ್ಣಿನಲ್ಲಿ 94 ಕ್ಯಾಲರಿಗಳಿದ್ದು ಇದು ಸಾಕಷ್ಟು ಕಾರ್ಬೋಹೈಡ್ರೇಟನ್ನು ಹೊಂದಿದೆ. ಹಾಗಾಗಿ, ಹೆಚ್ಚು ಹಸಿವಾದಾಗ, ಬಹುಬೇಗನೆ ಹಸಿವನ್ನು ತಣಿಸಿ ಶಕ್ತಿಯನ್ನು ನೀಡುತ್ತದೆ.ಹಲಸಿನ ಹಣ್ಣಿನಲ್ಲಿರುವ ಸಕ್ಕರೆಯು ದೇಹದಲ್ಲಿ ಸುಲಭವಾಗಿ ಕರಗಬಲ್ಲದ್ದಾಗಿದೆ. ಹಾಗೂ, ಇದು ಆರೋಗ್ಯಕರವೂ ಕೂಡಾ.

ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಹಲಸಿನ ಹಣ್ಣಿನಲ್ಲಿ ಕಡಿಮೆ ಮಟ್ಟದ ಗ್ಲಿಸೆಮಿಕ್ಸ್‌ ಇಂಡೆಕ್ಸ್‌ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಬಹುಬೇಗನೆ ಉದ್ದೀಪನೆ ಮಾಡುವುದಿಲ್ಲ. ಹೀಗಾಗಿ.ಸಕ್ಕರೆಯ ಮಟ್ಟ ದಿಢೀರ್‌ ಏರಿಕೆಯಾಗದು. ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವ ಇದು ನೀಡುವುದರಿಂದ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ರಕ್ತದೊತ್ತಡ ಸಮತೋಲನಗೊಳಿಸುತ್ತದೆ

ಹಲಸಿನಹಣ್ಣಿನಲ್ಲಿ ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡುತ್ತದೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್‌ ಎ ಯಿಂದ ಹಲಸಿನ ಹಣ್ಣು ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಇದು ಕಣ್ಣನ್ನು ಬ್ಯಾಕ್ಟೀರಿಯಾ ಹಾಗೂ ವೈರಲ್‌ ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ. ದೃಷ್ಟಿದೋಷವಿರುವ ಮಂದಿಗೆ ಇದು ಒಳ್ಳೆಯದು. ಕಣ್ಣನ್ನು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸಲೂ ಇವು ಸಹಾಯ ಮಾಡುತ್ತವೆ.

ಮುಪ್ಪನ್ನು ತಡೆಯುತ್ತದೆ

ನೀವು ಯೌವನದಿಂದ ಕಂಗೊಳಿಸಬೇಕಿದ್ದರೆ ನಿಮ್ಮ ಚರ್ಮ ಲಕಲಕ ಹೊಳೆಯಬೇಕಿದ್ದರೆ ನೀವು ಖುಷಿಯಿಂದ ಹಲಸಿನಹಣ್ಣು ತಿನ್ನಬಹುದು. ಹಲಸಿನ ಹಣ್ಣು ಚರ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಎಲುಬನ್ನು ಗಟ್ಟಿಯಾಗಿಸುತ್ತದೆ

ಹಲಸಿನಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶೀಯಂ ಇರುವುದರಿಂದ ಇದು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುವಲ್ಲಿ ನೆರವಾಗುತ್ತದೆ.

ಥೈರಾಯ್ಡ್‌ ಸಮಸ್ಯೆಗೆ ಒಳ್ಳೆಯದು

ಹಲಸಿನ ಹಣ್ಣಿನಲ್ಲಿ ತಾಮ್ರವೂ ಇರುವುದರಿಂದ ಇದು ಥೈರಾಯ್ಡ್‌ನಲ್ಲಿ ಹಾರ್ಮೋನಿನ ಉತ್ಪಾದನೆ ಹಾಗೂ ಹೀರುವಿಕೆಗೆ ನೆರವಾಗುತ್ತದೆ. ಆ ಮೂಲಕ ಥೈರಾಯ್ಡ್‌ನ ಆರೋಗ್ಯವನ್ನು ಕಾಪಾಡುತ್ತದೆ.

ಅಸ್ತಮಾಕ್ಕೆ ಒಳ್ಳೆಯದು

ಮಾಲಿನ್ಯದಿಂದ ಉಂಟಾಗುವ ಅಸ್ತಮಾದಂತಹ ತೊಂದರೆಗಳಿಗೆ ಹಲಸಿನಹಣ್ಣು ಬಹಳ ಒಳ್ಳೆಯದು. ಹಾಗಾಗಿ ಅಸ್ತಮಾ ಇರುವ ಮಂದಿ ಹಲಸಿನ ಹಣ್ಣು ತಿನ್ನಲು ಭಯಪಡಬೇಕಾಗಿಲ್ಲ.

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹಲಸಿನಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ಫೈಟೋನ್ಯೂಟ್ರಿಯೆಂಟ್‌ಗಳೂ, ಫ್ಲೇವನಾಯ್ಡ್‌ಗಳೂ ಇರುವುದರಿಂದ ದೇಹದಲ್ಲಿರುವ ವಿಷಕಾರಕ, ಕಲ್ಮಶ, ಹಾಗೂ ಫ್ರೀರ್ಯಾಡಿಕಲ್‌ಗಳನ್ನು ಹೊರಕ್ಕೆ ಕಳಿಸುವಲ್ಲಿ ಇದು ನೆರವಾಗುತ್ತದೆ. ಕಲ್ಮಶಗಳೂ, ಫ್ರೀ ರ್ಯಾಡಿಕಲ್ಸ್‌ಗಳೂ ಕೂಡಾ ಕ್ಯಾನ್ಸರ್‌ ಕಾರಕಗಳಾಗಿರುವುದರಿಂದ ಹಲಸಿನ ಹಣ್ಣು ನಮಗೆ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Exit mobile version