Site icon Vistara News

Covid 19: ಜೆಎನ್.1 ಕೋವಿಡ್‌ನ ಜಾಗೃತೆ ವಹಿಸಬೇಕಾದ ರೂಪಾಂತರ! ವಿಶ್ವ ಸಂಸ್ಥೆ ಘೋಷಣೆ

JN.1 as covid 19 variant of interest, Classifies World Health Organisation

ನವದೆಹಲಿ: ಸಾಕಷ್ಟು ಆತಂಕಕ್ಕೆ ಕಾರಣವಾಗಿರುವ ಜೆಎನ್‌.1 (JN.1) ಕೋವಿಡ್ (Covid 19) ಉಪತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ‘ಆಸಕ್ತಿಯ ರೂಪಾಂತರ’ (Variant of Interest) ಅಥವಾ ‘ಜಾಗೃತೆ ವಹಿಸಬೇಕಾದ ರೂಪಾಂತರ’ ಎಂದು ವರ್ಗೀಕರಿಸಿದೆ. ‘ವೇರಿಯಂಟ್ ಆಫ್ ಇಂಟರೆಸ್ಟ್’ ಎಂದರೆ, ಹಿಂದಿನ ಸೋಂಕು ಅಥವಾ ವ್ಯಾಕ್ಸಿನೇಷನ್ ವಿರುದ್ಧ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ತಟಸ್ಥಗೊಳಿಸಬಹುದಾದ ತಳಿ ಎಂದರ್ಥ. ಈ ರೀತಿಯ ಸೋಂಕಿನಿಂದ ಸಾರ್ವಜನಿಕ ಆರೋಗ್ಯಕ್ಕೆ ಅಂಥ ತೊಂದರೆ ಇರುವುದಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ(World Health Organisation). ಜೆಎನ್.1 ಅನ್ನು ಅನ್ನು ಹಿಂದೆ ಅದರ ಪೋಷಕ ವಂಶಾವಳಿಯ BA.2.86 ರ ಭಾಗವಾಗಿ ವೆರಿಯಂಟ್ ಆಫ್ ಇಂಟರೆಸ್ಟ್ ಆಗಿ ವರ್ಗಿಕರಿಸಲಾಗಿತ್ತು.

ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಜೆಎನ್‌.1 ಸೋಂಕಿನಿಂದ ಉಂಟಾಗುವ ಹೆಚ್ಚುವರಿ ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯವನ್ನು ಪ್ರಸ್ತುತ ಕಡಿಮೆ ಎಂದು ಮೌಲ್ಯಮಾಪನ ಮಾಡಲಾಗಿದೆ. ಈ ಸೋಂಕಿನಿಂದ ಅಂಥ ತೀವ್ರತರವಾದ ತೊಂದರೆಗಳಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಪ್ರಸ್ತುತ ಲಭ್ಯವಿರುವ ಲಸಿಕೆಗಳು ಜೆಎನ್.1 ಮತ್ತು ಕೋವಿಡ್-19 ವೈರಸ್‌ನ ಇತರ ಪರಿಚಲನೆಯ ರೂಪಾಂತರಗಳಿಂದ ತೀವ್ರವಾದ ರೋಗ ಮತ್ತು ಸಾವಿನ ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಇದಕ್ಕೂ ಮೊದಲು ವಿಶ್ವ ಆರೋಗ್ಯ ಸಂಸ್ಥೆಯು, ವೈರಲ್ ಬದಲಾಗುತ್ತಿದ್ದು ಮತ್ತು ಬೆಳವಣಿಗೆಯಾಗುತ್ತಿರುವ ಪರಿಣಾಮ ನಿರಂತರ ನಿಗಾ ಇಡುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. ವೈದ್ಯರು ಉಸಿರಾಟದ ಕಾಯಿಲೆಗಳ ಪ್ರಸ್ತುತ ಉಲ್ಬಣವನ್ನು ಕುರಿತು ಮಾತನಾಡುತ್ತಾರೆ. ಕೋವಿಡ್ ಮತ್ತು ಜೆಎನ್.1 ಉಪತಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಈಗ ಉದ್ಭವಿಸಿರುವ ಪರಿಸ್ಥಿಯಿನ್ನು ವಿಶ್ಲೇಷಣೆ ಮಾಡುತ್ತಿದೆ. ಈ ರಜಾದಿನಗಳಲ್ಲಿ ನಿಮ್ಮ ಕುಟುಂಬಗಳು ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿರಿಸಲು ವಿಶ್ವ ಆರೋಗ್ಯ ಸಂಸ್ಥೆ ಒದಗಿಸುವ ಸಾರ್ವಜನಿಕ ಆರೋಗ್ಯ ಸಲಹೆಗಳನ್ನು ಅನುಸರಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಎಕ್ಸ್ ವೇದಿಕೆಯ ಖಾತೆಯಲ್ಲಿ ತಿಳಿಸಿತ್ತು.

ಭಾರತದ ಪರಿಸ್ಥಿತಿ ಕುರಿತು ಹೇಳುವುದಾದರೆ; ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆಯಾಗಿದೆ. ಹಾಗಾಗಿ, ಅಗತ್ಯ ಆರೋಗ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೂ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ. ಮುಂಬರುವ ಹಬ್ಬದ ಋತುವನ್ನು ಪರಿಗಣಿಸಿ, ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವ ಮೂಲಕ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ತಿಳಿಸಿತ್ತು.

ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: 11 ದೇಶಗಳಲ್ಲಿ ಪತ್ತೆಯಾದ ಹೊಸ ಕೋವಿಡ್ ರೂಪಾಂತರಿ JN.1; ವಿಜ್ಞಾನಿಗಳಿಗೆ ಚಿಂತೆ ಏಕೆ?

Exit mobile version