ಮುಂಬಯಿ: ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಜಾನ್ಸನ್ & ಜಾನ್ಸನ್ಸ್ ಬೇಬಿ ಪೌಡರ್ ಉತ್ಪಾದನೆಗೆ ಲೈಸೆನ್ಸ್ (Baby Powder) ರದ್ದುಪಡಿಸಿದೆ.
ಮಹಾರಾಷ್ಟ್ರ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ( ಎಫ್‌ಡಿಎ) ಈ ಬಗ್ಗೆ ಆದೇಶ ಹೊರಡಿಸಿದೆ. ಜಾನ್ಸನ್ & ಜಾನ್ಸನ್ಸ್‌ನ ಟಾಲ್ಕಮ್ ಆಧಾರಿತ ಬೇಬಿ ಪೌಡರ್‌ನ ಉತ್ಪಾದನೆ ಮತ್ತು ಮಾರಾಟವನ್ನು ಅದು ನಿಷೇಧಿಸಿದೆ.
ಬೇಬಿ ಪೌಡರ್‌ನ ಗುಣಮಟ್ಟ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಕಳಪೆ ಗುಣಮಟ್ಟದ ಪೌಡರ್ ಅನ್ನು ಹಿಂತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಎಫ್‌ಡಿಎ ಕಂಪನಿಗೆ ಸೂಚಿಸಿದೆ. ಈ ಪೌಡರ್ ಮಕ್ಕಳ ತ್ವಚೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತಿಳಿಸಿದೆ. ಮುಲಂದ್, ಮುಂಬಯಿನಲ್ಲಿ ಸ್ಯಾಂಪಲ್‌ಗಳನ್ನು ಪರೀಕ್ಷಿಸಿದ ಬಳಿಕ ಎಫ್‌ಡಿಎ ಈ ನಿರ್ಧಾರ ಕೈಗೊಂಡಿದೆ.