Site icon Vistara News

JP Nadda meet Sanjeev Juneja : ಖ್ಯಾತ ಉದ್ಯಮಿ ಸಂಜೀವ್‌ ಜುನೇಜಾ ಜತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮಾತುಕತೆ

JP Nadda

ಚಂಡೀಗಢ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಚಂಡೀಗಢದಲ್ಲಿ ಖ್ಯಾತ ಉದ್ಯಮಿ ಸಂಜೀವ್‌ ಜುನೇಜಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ನಡ್ಡಾ ಅವರು 1000 ಮಂದಿ ಗಣ್ಯರನ್ನು ಸಂಪರ್ಕಿಸಿ ಬಿಜೆಪಿಯ ಸಾಧನೆಯನ್ನು ಮನವರಿಕೆ ಮಾಡಿಕೊಡುವ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. (JP Nadda meet Sanjeev Juneja) ಸಂಪರ್ಕದಿಂದ ಬೆಂಬಲ (sampark se support) ಅಭಿಯಾನವನ್ನು ಭಾರತದಾದ್ಯಂತ ಕೈಗೊಂಡಿದ್ದಾರೆ.

ಚಂಡೀಗಢದಲ್ಲಿ ನಡ್ಡಾ ಅವರು ಬುಧವಾರ ಖ್ಯಾತ ಉದ್ಯಮಿ ಹಾಗೂ ಎಸ್‌ಬಿಎಸ್‌ ಬಯೊಟೆಕ್‌ ಗ್ರೂಪ್‌ ಆಫ್‌ ಕಂಪನಿ ಮುಖ್ಯಸ್ಥ ಡಾ. ಸಂಜೀವ್‌ ಜುನೇಜಾ ಅವರನ್ನು ಭೇಟಿಯಾದರು. ನಡ್ಡಾ ಜತೆಗೆ ಸಾವ್‌ಧಾನ್‌ ಸಿಂಗ್‌ ( ರಾಷ್ಟ್ರೀಯ ಉಪಾಧ್ಯಕ್ಷ), ಅನಿಲ್‌ ಜೈನ್‌ ( ರಾಜ್ಯಸಭಾ ಸಂಸದ), ಅರುಣ್‌ ಸೂದ್‌ (ರಾಜ್ಯ ಅಧ್ಯಕ್ಷ), ನಿವಾಸನ್‌ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಡಾ. ಸಂಜೀವ್‌ ಜುನೇಜಾ ಮಾತುಕತೆ

ಜುನೇಜಾ ಅವರು ಜೆ.ಪಿ. ನಡ್ಡಾ ಅವರಿಗೆ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು. ಅವರ ತಾಯಿ ಉಷಾ ಜುನೇಜಾ, ಸೋದರಿ ರಾಧಿಕಾ ಚೀಮಾ ಎಲ್ಲರನ್ನೂ ಉಡುಗೊರೆ ಕೊಟ್ಟು ಬರ ಮಾಡಿಕೊಂಡರು. ಈ ಸಂದರ್ಭ ಮಾತನಾಡಿದ ಸಂಜೀವ್‌ ಜುನೇಜಾ, ಇವತ್ತು ಜಗತ್ತಿನ ದೊಡ್ಡ ದೊಡ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ. ಮೇ ತಿಂಗಳೊಂದರಲ್ಲಿಯೇ 28,000 ಕೋಟಿ ರೂ. ವಿದೇಶಿ ಹೂಡಿಕೆಯಾಗಿದೆ. ಮೇನಲ್ಲಿ 28,000 ಕೋಟಿ ರೂ. ಸಾಂಸ್ಥಿಕ ಹೂಡಿಕೆ ಹರಿದು ಬಂದಿತ್ತು. ಮೋದೀಜಿಯವರ 10 ಟ್ರಿಲಿಯನ್‌ ಡಾಲರ್‌ ಎಕಾನಮಿ ನಿಗದಿತ ಗುರಿಗೂ ಮುನ್ನವೇ ಕಾರ್ಯಗತವಾಗುವ ಲಕ್ಷಣ ಕಾಣಿಸುತ್ತಿದೆ. ಇದೇ ವೇಳೆ ಜಿಎಸ್‌ಟಿ ಸಂಗ್ರಹ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಮಾರುಕಟ್ಟೆ ಚೇತೋಹಾರಿಯಾಗಿದೆ ಎಂದು ಜುನೇಜಾ ಹೇಳಿದರು. ಜತೆಗೆ ಆಯುರ್ವೇದ ವೈದ್ಯಕೀಯ ಆಧರಿತ ಆಸ್ಪತ್ರೆಗಳಿಗೆ ಸರ್ಕಾರ ಸಬ್ಸಿಡಿ ನೆರವು ಮತ್ತು ಸಹಕಾರ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಕಾಶಗಳು, ಸಂಭವನೀಯತೆಗಳ ಬಗ್ಗೆ ಜುನೇಜಾ ಅವರು ವಿವರಿಸಿದರು. ಅಂಬಾಲದ ಸಣ್ಣ ಗ್ರಾಮದಿಂದ ಶುರುವಾದ ತಮ್ಮ ಬಿಸಿನೆಸ್‌ ಇಂದು ಭಾರತ ಮತ್ತು ವಿದೇಶಗಳಲ್ಲೂ ಹರಡಿದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಮಾತ್ರ ಇದು ಸಾಧ್ಯ ಎಂದು ವಿವರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ಫಸ್ಟ್‌ ಜನರೇಶನ್‌ ಉದ್ಯಮಿಯಾಗಿರುವ ಸಂಜೀವ್‌ ಜುನೇಜಾ ಅವರ ಸಾಧನೆ ದೊಡ್ಡದು. ದೇಶಕ್ಕೆ ಇಂಥ ಪ್ರಾಮಾಣಿಕ, ಪರಿಶ್ರಮಿ ಉದ್ಯಮಿಗಳ ಅಗತ್ಯ ಇದೆ ಎಂದು ಪ್ರಶಂಸಿಸಿದರು. ದೇಶ ಮತ್ತು ರಾಜ್ಯಗಳಲ್ಲಿ ಕೇಂದ್ರದ ಅಭಿವೃದ್ಧಿಯೋಜನೆಗಳ ಬಗ್ಗೆ ನಡ್ಡಾ ವಿವರಿಸಿರು. ಜಿಸ್‌ಟಿ ಬಗ್ಗೆ ಚರ್ಚಿಸಿದರು.

ಜೆ.ಪಿ ನಡ್ಡಾ ಅವರು 1000 ಗಣ್ಯ ವ್ಯಕ್ತಿಗಳನ್ನು ಸಂದರ್ಶಿಸಿ ಬಿಜೆಪಿ ಸಾಧನೆಗಳನ್ನು ತಿಳಿಸುವ ಗುರಿ ಹೊಂದಿದ್ದಾರೆ. ಈ ಕ್ಯಾಂಪೇನ್‌ ಬಳಿಕ ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕ ಪ್ರಚಾರ ಶುರು ಮಾಡಲಿದ್ದಾರೆ.

ಇದನ್ನೂ ಓದಿ :The Kerala Story : ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

Exit mobile version