Site icon Vistara News

National Nutrition Week 2023 : ಸಿರಿ ಧಾನ್ಯಗಳ ಉತ್ತೇಜನಕ್ಕೇ ಮೀಸಲು ಐಐಎಂಆರ್‌ ಸಂಸ್ಥೆ

iimr

ಭಾರತದಲ್ಲಿ ಸಿರಿಧಾನ್ಯಗಳ ಕುರಿತಾಗಿ ಸಂಶೋಧನೆ ನಡೆಸುವುದಕ್ಕೆಂದೇ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಿಲೆಟ್ಸ್‌ ರಿಸರ್ಚ್‌ (ಐಐಎಂಆರ್‌)(IIMR) ಸ್ಥಾಪಿಸಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ಇದನ್ನು ನಡೆಸಲಾಗುತ್ತಿದೆ. ಭಾರತದಲ್ಲಿ ಸಿರಿ ಧಾನ್ಯಗಳ (National Nutrition Week 2023) ಪ್ರಗತಿಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಐಐಎಂಆರ್‌ ಅಖಿಲ ಭಾತ ಮಟ್ಟದಲ್ಲಿ ಸಿರಿಧಾನ್ಯಗಳ ಬಗ್ಗೆ ನಡೆಯುವ ಸಂಶೋಧನೆಗಳನ್ನು ಸಂಯೋಜಿಸುತ್ತದೆ. ಹಾಗೆಯೇ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ಸಂಪರ್ಕವನ್ನು ಸಾಧಿಸಿಕೊಳ್ಳುತ್ತದೆ. ಇದರಲ್ಲಿ 50 ವಿಜ್ಞಾನಿಗಳು, 36 ತಾಂತ್ರಿಕ ತಜ್ಞರಿರುವ 17 ವಿಭಾಗಗಳು ಹಾಗೂ 18 ಪೋಷಕ ಸಿಬ್ಬಂದಿ ಕೆಲಸ ಮಾಡುತ್ತಾರೆ. ಹೈದರಾಬಾದ್‌ನಲ್ಲಿ ಐಐಎಂಆರ್‌ನ ಮುಖ್ಯ ಕಚೇರಿಯಿದೆ. ಸೊಲ್ಲಾಪುರ ಮತ್ತು ವಾರಂಗಲ್‌ನಲ್ಲಿ ಎರಡು ಪ್ರಾದೇಶಿಕ ಕೇಂದ್ರಗಳಿವೆ.

ಇದರ ಮೂಲ ಉದ್ದೇಶವೇನು?

ಸಿರಿಧಾನ್ಯಗಳ ಬಗ್ಗೆಯೇ ಒಂದು ಸಂಶೋಧನಾ ಕೇಂದ್ರ ತೆರೆಯುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ಹಲವಾರು ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಿರಿಧಾನ್ಯಗಳಿಗೆ ಮಾರುಕಟ್ಟೆಗಳನ್ನು ಸೃಷ್ಟಿಸುವುದು, ಪ್ರಸ್ತುತ ಇರುವ ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ಬೇಡಿಕೆಕೆ ಪ್ರತಿಕ್ರಿಯಿಸುವುದು ಇದರ ಮೂಲ ಉದ್ದೇಶವಾಗಿದೆ. ಹಾಗೆಯೇ ಸಮರ್ಪಕ ತಂತ್ರಜ್ಞಾನಗಳನ್ನು ಸಿರಿಧಾನ್ಯಗಳ ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಇದರ ಉದ್ದೇಶಗಳಲ್ಲಿ ಒಂದು. ಸಿರಿಧಾನ್ಯಗಳ ಬೆಳೆ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆ ಮಾಡುವುದನ್ನೂ ಇದರ ಉದ್ದೇಶದಲ್ಲಿ ಇರಿಸಲಾಗಿದೆ.

ಮಹತ್ವದ ಗುರಿ

ದೇಶದಲ್ಲಿ ಪರಿಸರ ಸ್ನೇಹಿ ಬೆಳೆಗಳ ಉತ್ಪಾದನೆ, ಅವುಗಳ ಸಂಸ್ಕರಣೆ, ಮೌಲ್ಯವರ್ಧನೆ, ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಜಾಲಗಳ ಮೂಲಕ ಸಿರಿಧಾನ್ಯಗಳ ಕೃಷಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಕೃಷಿಯನ್ನಾಗಿ ಪರಿವರ್ತಿಸುವುದು ಐಐಎಂಆರ್‌ನ ಗುರಿಯಾಗಿದೆ. ರಾಗಿ ಸೇರಿದಂತೆ ಬೇರೆ ಬೇರೆ ಸಿರಿಧಾನ್ಯಗಳಲ್ಲಿ ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸುವುದು, ಹೆಚ್ಚು ತಾಪಮಾನದಲ್ಲಿಯೂ ಸಿರಿಧಾನ್ಯದ ಬೆಳೆ ಕೆಡದಂತೆ ಇರುವುದಕ್ಕೆ ಔಷಧ ಕಂಡು ಹಿಡಿಯುವುದು, ಸಿರಿಧಾನ್ಯಗಳ ಗುಣಮಟ್ಟ ಹೆಚ್ಚಿಸುವುದು ಈ ಐಐಎಂಆರ್‌ನ ಗುರಿಯಾಗಿದೆ.

ಮತ್ತೇನು ಟಾಸ್ಕ್‌?

ಇದನ್ನೂ ಓದಿ: National Nutrition Week 2023 : ಈ 5 ಪೋಷಕಾಂಶ ಹಿರಿಯರ ಆಹಾರದಲ್ಲಿ ಇರಲೇಬೇಕು

Exit mobile version