Site icon Vistara News

Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

Nita Ambani Beauty Secrets

ಮಗನ ಭರ್ಜರಿ ಮದುವೆಯಿಂದ (Nita Ambani Beauty Secrets) ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಅಂಬಾನಿ ಕುಟುಂಬದ ಕಣ್ಣು ನೀತಾ ಅಂಬಾನಿ. ವರ್ಷ ಅರುವತ್ತು ದಾಟಿದರೂ ಪುಟಿದೇಳುವ ಉತ್ಸಾಹ, ಮಾಸದ ಚೆಲುವಿನಿಂದಾಗಿಯೂ ಹಲವರಿಗೆ ಸ್ಫೂರ್ತಿ. ಬ್ಯುಸಿನೆಸ್‌ ವುಮನ್‌ ಆಗಿ, ರಿಲಯನ್ಸ್‌ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನೀತಾ ಅಂಬಾನಿ ಆರೋಗ್ಯದ ಕಾಳಜಿಯನ್ನೂ ಸಾಕಷ್ಟು ಮಾಡುತ್ತಾರಂತೆ. ತಮ್ಮ ಫಿಟ್‌ನಸ್‌ ಕಾಳಜಿಯನ್ನು ವಹಿಸುವ ಇವರು ಬೆಳಗ್ಗೆ ಎದ್ದ ಕೂಡಲೇ ಒಂದು ವಾಕ್‌ ಹಾಗೂ ಪೋಷಕಾಂಶಯುಕ್ತ ಬ್ರೇಕ್‌ಫಾಸ್ಟ್‌ ಇವರ ಇಡೀ ದಿನದ ಲವಲವಿಕೆಯ ಸೀಕ್ರೆಟ್‌. ಅಷ್ಟೇ ಅಲ್ಲ, ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌ ಅಂತೆ. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವ ಅವರ, ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬನ್ನಿ ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬುದನ್ನು ನೋಡೋಣ.

ಹೇರಳವಾಗಿ ಪೋಷಕಾಂಶ

ಬೀಟ್‌ರೂಟ್‌ ಜ್ಯೂಸ್‌ನಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಿದರೆ, ಕಬ್ಬಿಣಾಂಶವು ರಕ್ತವನ್ನು ಹೆಚ್ಚಿಸುತ್ತದೆ.

ಚುರುಕಾಗಿ ಇರಲು ಸಾಧ್ಯ

ನೀತಾ ಅಂಬಾನಿ ಈ ಜ್ಯೂಸ್‌ ಹೀರುವುದಕ್ಕೆ ಮೂಲ ಕಾರಣ ದಿನವಿಡೀ ಚುರುಕಾಗಿ ಇರುವುದಕ್ಕೆ. ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ದೇಹವು ಇದ್ನು ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ನೆರವಾಗುವುದಲ್ಲದೆ, ನಮ್ಮ ದೇಹಕ್ಕೆ ರಕ್ತದ ಮೂಲಕ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಒದಗಿಸುವಲ್ಲಿಯೂ ಸಹಾಯ ಮಾಡುತ್ತದೆ. ಇದರಿಂದಾಗಿ, ಉಲ್ಲಾಸ, ಚುರುಕುತನ ಹೆಚ್ಚುತ್ತದೆ.

ಹೃದಯದ ಆರೋಗ್ಯ ಸುಧಾರಣೆ

ಹೃದಯದ ಆರೋಗ್ಯಕ್ಕೆ ಬೀಟ್‌ರೂಟ್‌ ಜ್ಯೂಸ್‌ ಬಹಳ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ನೈಟ್ರೇಟ್‌ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯವನ್ನೂ ಚುರುಕಾಗಿ ಇರಿಸುತ್ತದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೀತಾ ಅಂಬಾನಿ ಇದಕ್ಕಾಗಿ ಬೀಟ್‌ರೂಟ್‌ ಜ್ಯೂಸ್‌ ಅನ್ನು ಮರೆಯದೆ ಸೇವಿಸುತ್ತಾರಂತೆ.

ಜೀರ್ಣಕ್ರಿಯೆಗೆ ಅಗತ್ಯ

ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದಾಗಿರುವ ಬೀಟ್‌ರೂಟ್‌ನಲ್ಲಿ ನಾರಿನಂಶ ಸಮೃದ್ಧವಾಗಿದೆ. ಮಲಬದ್ಧತೆಯಂತಹ ಸಮಸ್ಯೆ ಹತ್ತಿರ ಸುಳಿಯದು. ಜೀರ್ಣಾಂಗವ್ಹೂಹವನ್ನು ಸದಾ ಆರೋಗ್ಯವಾಗಿಡಲು ಇದು ಸುಲಭ ನೈಸರ್ಗಿಕವಾದ ವಿಧಾನ.

ಮಿದುಳಿಗೂ ಪೂರಕ

ಮಿದುಳಿನ ಆರೋಗ್ಯಕ್ಕೂ ಕೂಡಾ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಹಾಗೂ ರಕ್ತದ ಮೂಲಕ ದೇಹಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವುದರಿಂದ ಮಿದುಳಿಗೂ ಸರಿಯಾದ ಪೋಷಣೆ ದೊರೆಯುತ್ತದೆ. ಕೆಲಸದಲ್ಲಿ ದೃಢತೆ, ಫೋಕಸ್‌, ಚುರುಕುತನ, ತೀಕ್ಷ್ಣ ಬುದ್ಧಿ ಇವೆಲ್ಲವಕ್ಕೂ ಬೀಟ್‌ರೂಟ್‌ ಒಳ್ಳೆಯ ಆಹಾರ.

ಚರ್ಮದ ಆರೋಗ್ಯಕ್ಕೂ ಉತ್ತಮ

ಮುಖ್ಯವಾಗಿ ಚರ್ಮದ ಆರೋಗ್ಯಕ್ಕೂ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ವಿಟಮಿನ್‌ ಸಿ ಯೂ ಇವೆ. ಇದು ಆರೋಗ್ಯಯುತ ಚರ್ಮಕ್ಕೆ ಅಗತ್ಯ ಬೇಕಾದವು. ಆಂಟಿ ಏಜಿಂಗ್‌ ಕೂಡಾ. ನೀತಾ ಅಂಬಾನಿ ತನ್ನ ಸೌಂದರ್ಯದ ಗುಟ್ಟು ಆರೋಗ್ಯದಲ್ಲಿ ಅಡಗಿದೆ ಎಂಬುದನ್ನು ಬಲವಾಗಿ ನಂಬುವ ಕಾರಣ, ಚರ್ಮಕ್ಕೆ ಬೇಕಾದ ನೈಸರ್ಗಿಕ ಆಹಾರವನ್ನು ಇದರಲ್ಲಿ ಕಾಣುತ್ತಾರಂತೆ.

ಪಿತ್ತಕೋಶದ ಆರೋಗ್ಯಕ್ಕೂ ಉತ್ತಮ

ಪಿತ್ತಕೋಶದ ಆರೋಗ್ಯಕ್ಕೂ ಬೀಟ್‌ರೂಟ್‌ ಬಹಳ ಉತ್ತಮ. ಇದರಲ್ಲಿ ಡಿಟಾಕ್ಸಿಫೈಯಿಂಗ್‌ ಗುಣಗಳಿದ್ದು, ಮುಖ್ಯವಾಗಿ ಪಿತ್ತಕೋಶದ ವಿಚಾರದಲ್ಲಿ ಅದ್ಭುತ ಜಾದೂ ಮಾಡುತ್ತದೆ. ಪಿತ್ತಕೋಶದ ಆರೋಗ್ಯ ಅತ್ಯಂತ ಹೆಚ್ಚು ಗಮನ ಕೊಡಬೇಕಾದವುಗಳಲ್ಲಿ ಒಂದು.

ಔಷಧೀಯ ಗುಣ

ಸಂಧಿವಾತ ಸೇರಿದಂತೆ ಅನೇಕ ಬಗೆಯ ಉರಿಯೂತಗಳಿಗೂ ಬೀಟ್‌ರೂಟ್‌ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ನಿತ್ಯ ಸೇವನೆಯಿಂದ ಇಂತಹ ಸಮಸ್ಯೆಯೂ ಬರದಂತೆ ತಡೆಯುವ ಗುಣವನ್ನು ಬೀಟ್‌ರೂಟ್‌ ಹೊಂದಿದೆ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಕಡಿಮೆ ಕ್ಯಾಲರಿ

ಬೀಟ್‌ರೂಟ್‌ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಹಾಗಾಗಿ ತೂಕ ಇಳಿಕೆಗೂ ಇದು ಒಳ್ಳೆಯದು. ನೀತಾ ಅಂಬಾನಿ ಆರೋಗ್ಯಕರ ತೂವನ್ನು ಹೊಂದಲು ಸದಾ ಬೀಟ್‌ರೂಟ್‌ ಜ್ಯೂಸ್‌ ಅನ್ನು ತಮ್ಮ ಡಯಟ್‌ನ ಭಾಗವಾಗಿಸಿಕೊಂಡಿದ್ದಾರೆ.

Exit mobile version