Site icon Vistara News

Medicine prices : ಬಿಪಿ, ಡಯಾಬಿಟಿಸ್ ಸೇರಿದಂತೆ ನಾನಾ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 74 ಔಷಧ ದರ ಇಳಿಕೆ

medicine

ನವ ದೆಹಲಿ: ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್‌, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯಾವ ಔಷಧಗಳು ಅಗ್ಗ?

ಡಪಾಗ್ಲಿಪ್ಲೊಜಿನ್‌ ಸಿಟಾಗ್ಲಿಪ್ಟಿನ್‌ (Dapagliflozin Sitagliption) : 27.75 ರೂ.

ಮೆಟ್‌ಫಾರ್ಮಿನ್‌ ಹೈಡ್ರೊಕ್ಲೋರೈಡ್‌ : 27.75 ರೂ.

ಡಪಾಗ್ಲಿಪ್ಲೊಜಿನ್ ಟೆಲ್‌ಮಿಸರ್ಟಾನ್‌ ( Dapagliflozin sitagliptin)‌ : 10.92 ರೂ.

ಬಿಸೊಪ್ರೊಲೋಲ್‌ ಫ್ಯುಮರಾರಾಟ್‌ (Bisoprolol fumarate) 10.92 ರೂ.

ಸೋಡಿಯಂ ವಾಲ್ಪ್ರೊರೇಟ್‌: 3.20 ರೂ.

Exit mobile version