ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು (children’s) ಅಲರ್ಜಿ (allergies ) ತೊಂದರೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ಆರೈಕೆ ಮಾಡಿದರೂ ಸಂಪೂರ್ಣ ಗುಣಮುಖರಾಗುವುದಿಲ್ಲ. ಎಷ್ಟೋ ಬಾರಿ ಪೋಷಕರು (parents) ತಮ್ಮ ಮಕ್ಕಳಿಗೆ ಏಕೆ ಈ ತೊಂದರೆ ಕಾಣಿಸಿಕೊಂಡಿತು ಎಂದು ತಮ್ಮನ್ನು ತಾವು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಇದಕ್ಕೆ ಉತ್ತರವೇ ಸಿಗುವುದಿಲ್ಲ. ಪ್ರಸಿದ್ಧ ಆಧ್ಯಾತ್ಮಿಕ ಮಾರ್ಗದರ್ಶಿ ಮತ್ತು ಆರೋಗ್ಯ ತಜ್ಞ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಇದೀಗ ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವನ್ನು ಹೇಳಿದ್ದಾರೆ.
ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು ಎಂದಿದ್ದಾರೆ ಅವರು.
ಮಗುವು ಅಲರ್ಜಿಯೊಂದಿಗೆ ಹೋರಾಡುವುದನ್ನು ನೋಡುವುದು ಪ್ರತಿಯೊಬ್ಬ ಪೋಷಕರಿಗೂ ಸಂಕಟ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ. ಎಷ್ಟೇ ಔಷಧ ಮಾಡಿದರೂ ಇದು ಗುಣವಾಗದೇ ಇರುವುದು ನಮ್ಮನ್ನು ಚಿಂತೆಗೆ ಈಡಾಗುವಂತೆ ಮಾಡುತ್ತದೆ. ಎಷ್ಟೋ ಬಾರಿ ಇದು ಪುಟ್ಟ ಮಕ್ಕಳಿಗೆ ತಮ್ಮ ಬದುಕಿನಲ್ಲಿ ಬೇಸರ, ನಿರಾಸೆಯನ್ನು ಉಂಟು ಮಾಡಬಹುದು. ಆದರೂ ಮಕ್ಕಳ ಈ ಅಲರ್ಜಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಪರಿಹರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು, ಆಧ್ಯಾತ್ಮಿಕ ಚಿಂತಕರಾದ ಜಗ್ಗಿ ವಾಸುದೇವ್.
ಮಕ್ಕಳಲ್ಲಿ ಅಲರ್ಜಿಯನ್ನು ನಿರ್ವಹಿಸುವ ಕುರಿತು ಅವರು ತಮ್ಮ ಸಲಹೆಯನ್ನು ನೀಡಿದ್ದಾರೆ. ಸುಲಭವಾದ ಜೀವನಶೈಲಿ ಹೊಂದಾಣಿಕೆಯಿಂದ ಶಕ್ತಿಯುತವಾದ ಮನೆ ಚಿಕಿತ್ಸೆಗಳವರೆಗೆ ಎಲ್ಲವೂ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಸಾಮಾನ್ಯ ಆರೋಗ್ಯವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ ಅವರು.
ಇತ್ತೀಚಿಗೆ ಅವರು ಅಲರ್ಜಿಯ ಪ್ರಮುಖ ವಿಷಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲರ್ಜಿಯನ್ನು ಜಯಿಸಲು ಪ್ರಮುಖ ಮಾರ್ಗಗಳನ್ನು ಸೂಚಿಸಿದ್ದಾರೆ.
ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಮಕ್ಕಳ ಬಗ್ಗೆ ಮಾತನಾಡಿದ ಅವರು, ಅಲರ್ಜಿಯಿಂದ ಪರಿಹಾರ ಪಡೆಯಲು ಹಲವು ದಾರಿಗಳಿವೆ. ಆರೋಗ್ಯಕರ ಜೀವಿಗಳಿಗೆ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಸಲಹೆ ನೀಡಿದ್ದಾರೆ.
ಮಕ್ಕಳಿಗೆ ಅಲರ್ಜಿಗಳು ಹೋಗಬೇಕಾದರೆ ಹಾಲು ಮತ್ತು ಮಾಂಸದ ಉತ್ಪನ್ನಗಳಿಂದ ಅವರನ್ನು ದೂರವಿರಿಸಿ. ಇವು ತುಂಬಾ ಕೆಟ್ಟದಾಗಿ ಅಲರ್ಜಿ ಉಂಟು ಮಾಡಬಲ್ಲದು. ಸ್ವಲ್ಪ ಅಲರ್ಜಿ ಕಾಣಿಸಿ ಕೊಂಡರೆ ಪರವಾಗಿಲ್ಲ. ತುಂಬಾ ಕೆಟ್ಟದಾಗಿ ಅಲರ್ಜಿಯಾಗಿದ್ದರೆ ಮಾಂಸ ಉತ್ಪನ್ನಗಳನ್ನು ತ್ಯಜಿಸಿ ಸಾಕಷ್ಟು ತರಕಾರಿ, ತಾಜಾ ಹಣ್ಣು ಮತ್ತು ವಸ್ತುಗಳನ್ನೇ ಅವರಿಗೆ ಸೇವಿಸಲು ಕೊಡಿ. ಇದರಿಂದ ಅವರು ಬಹುಬೇಗನೆ ಅಲರ್ಜಿ ತೊಂದರೆಯಿಂದ ಗುಣಮುಖರಾಗುತ್ತಾರೆ ಎಂದು ಸದ್ಗುರು ತಿಳಿಸಿದ್ದಾರೆ.