Site icon Vistara News

Summer Tips: ಬೇಸಿಗೆಯಲ್ಲಿ ಜೋರಾಗಿ ಫ್ಯಾನ್‌ ಹಾಕೋದು ಮಾತ್ರವಲ್ಲ, ಈ ಸಂಗತಿಗಳನ್ನೂ ತಿಳಿದುಕೊಂಡಿರಿ!

Summer Season

ಬೆಂಗಳೂರು: ಸೆಕೆ ಅನ್ನುವುದೊಂದು (Summer Tips) ಬಿಟ್ಟರೆ ಬೇಸಿಗೆ (Summer Season) ಕಾಲವೆಂದರೆ ಒಂದು ರೀತಿಯಲ್ಲಿ ಎಲ್ಲರಿಗೂ ಖುಷಿ ಕೊಡುತ್ತದೆ. ಸಾಲುಸಾಲು ಶುಭ ಸಮಾರಂಭಗಳು ಒಂದೆಡೆಯಾದರೆ, ಶಾಲಾ ಮಕ್ಕಳಿಗೆ (school childrens) ರಜೆ ಇರುವುದರಿಂದ ಪ್ರವಾಸ (tour) ಹೊರಡಲು ಇದು ಸೂಕ್ತ ಸಮಯ ಎಂಬುದು ಮತ್ತೊಂದು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ ಬೆಳಗ್ಗೆ 9ರ ಅನಂತರ ಸಂಜೆ 5 ಗಂಟೆಯ ಮಧ್ಯೆ ಮನೆಯ ಹೊರಗೆ ಕಾಲಿಡುವುದೇ ಕಷ್ಟ ಎನ್ನುವಂತಿದೆ. ತೀವ್ರ ಬಿಸಿಲಿಗೆ ಹೆದರಿ ಪ್ರವಾಸ ಯೋಚನೆಯನ್ನೂ ಕೆಲವರು ಈಗಾಗಲೇ ಕೈಬಿಟ್ಟಿರುತ್ತಾರೆ. ಬಿಸಿಲು ತೀವ್ರವಾಗಿದೆ ನಿಜ. ಆದರೆ ಆರೋಗ್ಯದ (health) ಬಗ್ಗೆ ಹೆಚ್ಚು ಜಾಗರೂಕರಾಗಿದ್ದರೆ ಬಿಸಿಲಿನ ತಾಪದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಹಾಗಾಗಿ ಬೇಸಿಗೆಯಲ್ಲಿ ಈ ಸೂತ್ರಗಳನ್ನು ಪಾಲಿಸಿ.

1. ವ್ಯಾಯಾಮ (workout)

ಬೇಸಿಗೆಯಲ್ಲಿ ಹೆಚ್ಚು ಕೆಲಸ ಮಾಡದೇ ಇದ್ದರೂ ದಣಿವು ಉಂಟಾಗುತ್ತದೆ. ದೇಹ, ಮನಸ್ಸಿಗೆ ಹೆಚ್ಚು ಸುಸ್ತು ಕಾಡುತ್ತದೆ. ಹೀಗಾಗಿ ಹೆಚ್ಚು ನಿದ್ದೆ ಬಯಸುವುದು ಸಹಜ. ಆದರೆ ಆರೋಗ್ಯವಾಗಿರಲು ಬೆಳಗ್ಗೆ ಅಥವಾ ಸಂಜೆ ವ್ಯಾಯಾಮವನ್ನು ಬೇಸಗೆಯಲ್ಲೂ ಮಾಡಲೇಬೇಕು. ಈಜು, ಸೈಕ್ಲಿಂಗ್ ಅಥವಾ ವಾಕಿಂಗ್‌ ಚಟುವಟಿಕೆಗಳು ಈ ಸಂದರ್ಭದಲ್ಲಿ ದೇಹ ಮತ್ತು ಮನಸ್ಸಿಗೆ ಉಲ್ಲಾಸ ಕೊಡುತ್ತದೆ.

2. ಬಿಸಿಲಿಗೆ ಹೋಗಬೇಡಿ

ಬಿಸಿಲು ತೀವ್ರವಾಗಿದ್ದಾಗ ಹೊರಾಂಗಣ ಚಟುವಟಿಕೆಗಳು ಅಪಾಯಕಾರಿ. ಇದರಿಂದ ಅಲರ್ಜಿ ತೊಂದರೆಗಳು ಮಾತ್ರವಲ್ಲ ಹೃದಯಾಘಾತ, ಅತಿಸಾರ, ದಡಾರ, ಟೈಫಾಯಿಡ್ ಗಳಿಗೆ ಕಾರಣವಾಗಬಹುದು. ಹೀಗಾಗಿ ತೀವ್ರ ಬಿಸಿಲು ಇದ್ದಾಗ ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಿ.

ಇದನ್ನೂ ಓದಿ: Vitamin B12: ನಮ್ಮ ಹಲವು ಸಮಸ್ಯೆಗಳಿಗೆ ವಿಟಮಿನ್‌ ಬಿ12 ಕೊರತೆಯೇ ಕಾರಣ!

3. ಹೆಚ್ಚು ನೀರು ಸೇವಿಸಿ

ನೀರು ನಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ನಮ್ಮನ್ನು ನಿರ್ಜಲೀಕರಣ ಉಂಟು ಮಾಡುತ್ತದೆ. ದೇಹದ ಉಷ್ಣತೆಯನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳಲು ಆಗಾಗ ನೀರು ಸೇವಿಸುತ್ತಿರಬೇಕು. ಇದರಿಂದ ಬಿಸಿಲಿನಲ್ಲಿ ಇದ್ದರೂ ನಿರ್ಜಲೀಕರಣ ಉಂಟಾಗುವುದಿಲ್ಲ. ನೀರು ಚಯಾಪಚಯ ಕ್ರಿಯೆಯನ್ನು ಸಮತೋಲನದಲ್ಲಿರಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

4. ತಂಪು, ಸಕ್ಕರೆ ಬೇಡ

ತಂಪಾದ, ಸಕ್ಕರೆ ಮಿಶ್ರಿತ ಪಾನೀಯಗಳ ಬದಲಿಗೆ ಪ್ರತಿದಿನ 3- 4 ಲೀಟರ್ ಸಾದಾ ನೀರನ್ನು ಕುಡಿಯಿರಿ. ತಂಪು ಮತ್ತು ಸಕ್ಕರೆ ಮಿಶ್ರಿತ ಪಾನೀಯವು ಹಲವು ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಇವುಗಳಿಂದ ಸಾಧ್ಯವಾದಷ್ಟು ದೂರ ಇರಿ.

5. ಲಘು ಆಹಾರ ಸೇವಿಸಿ

ಬೇಸಿಗೆಯಲ್ಲಿ ಆರೋಗ್ಯಕರ ಮತ್ತು ಲಘು ಆಹಾರ ಸೇವನೆ ಒಳ್ಳೆಯದು. ಹೆಚ್ಚು ಫೈಬರ್ ಇರುವ ಆಹಾರ ಸೇವಿಸಬೇಕು. ಇದು ಸುಲಭವಾಗಿ ಜೀರ್ಣವಾಗುತ್ತದೆ. ಬೇಸಗೆಯಲ್ಲಿ ಪ್ರತಿ ದಿನಕ್ಕೆ ಕನಿಷ್ಠ 2- 3 ಬಾರಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಉತ್ತಮ. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ವಿವಿಧ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

6. ಟೀ, ಕಾಫಿ ಬೇಡ

ಬೇಸಿಗೆಯಲ್ಲಿ ಆಲ್ಕೋಹಾಲ್, ಕೆಫೀನ್ ಮತ್ತು ಜಿಡ್ಡಿನ ಆಹಾರ ಸೇವಿಸದೇ ಇರುವುದು ಒಳ್ಳೆಯದು. ಹೊರಗೆ ಬಿಸಿಯಾಗಿರುವಾಗ ಇದು ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

7. ದೇಹವನ್ನು ತಂಪಾಗಿರಿಸಿ

ಬೇಸಿಗೆಯಲ್ಲಿ ಬಾಯಾರಿದಾಗ ನೀರು, ಸೌತೆಕಾಯಿ, ಪುದೀನಾ ಶರಬತ್ತು, ಎಳನೀರು, ಮೊಸರು ಮತ್ತು ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು ಮತ್ತು ಮನಸ್ಸನ್ನು ಹೆಚ್ಚು ಉಲ್ಲಾಸದಿಂದ ಇರುವಂತೆ ಮಾಡಬಹುದು.

8. ಇವು ಆಹಾರದಲ್ಲಿರಲಿ

ವಿಟಮಿನ್ ಡಿ- ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರದಲ್ಲಿ ಮುಖ್ಯವಾಗಿ ವಿಟಮಿನ್ ಡಿ ಇರಲೇಬೇಕು. ಸ್ನಾಯು ಮತ್ತು ಮೂಳೆಯ ಆರೋಗ್ಯ ಕಾಪಾಡುವ ಇದು ಕ್ಯಾನ್ಸರ್ ಮತ್ತು ಹೃದ್ರೋಗದಿಂದಲೂ ದೇಹಕ್ಕೆ ರಕ್ಷಣೆ ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಒಮೆಗಾ -3 ಕೊಬ್ಬಿನಾಮ್ಲಗಳು- ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಕ್ಯಾಲ್ಸಿಯಂ- ಆರೋಗ್ಯವನ್ನು ಕಾಪಾಡುವಲ್ಲಿ ಕ್ಯಾಲ್ಸಿಯಂ ಪಾತ್ರ ಅತ್ಯಮೂಲ್ಯವಾದದ್ದು. ಹೀಗಾಗಿ ಆಹಾರದಲ್ಲಿ ಕ್ಯಾಲ್ಸಿಯಂ ಗೆ ಆದ್ಯತೆ ನೀಡಿ.
ಹಣ್ಣು, ತರಕಾರಿ ಬೇಸಗೆಯಲ್ಲಿ ತಾಜಾ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಖನಿಜಗಳು ಮತ್ತು ವಿಟಮಿನ್‌ ಗಳು ದೊರೆಯುತ್ತದೆ. ಇದು ಶಾಖದ ಹೊಡೆತ ಮತ್ತು ನಿರ್ಜಲೀಕರಣದ ವಿರುದ್ಧ ದೇಹಕ್ಕೆ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಕಲ್ಲಂಗಡಿ, ಪಪ್ಪಾಯಿ, ಮಾವು, ಕಿತ್ತಳೆ, ನಿಂಬೆ ಹಣ್ಣು ಮೊದಲಾದವುಗಳು ದೇಹಕ್ಕೆ ಹೆಚ್ಚು ಶಕ್ತಿ ತುಂಬುತ್ತದೆ. ಇನ್ನು ತರಕಾರಿಗಳಲ್ಲಿ ಟೊಮ್ಯಾಟೊ, ಸೌತೆಕಾಯಿ ಒಳ್ಳೆಯದು. ಸ್ವೀಟ್ ಕಾರ್ನ್ ನಲ್ಲಿ ವಿಟಮಿನ್ ಎ, ಬಿ, ಇ, ಫೈಬರ್ ಮತ್ತು ಖನಿಜಗಳ ಸಮೃದ್ಧವಾಗಿದ್ದು, ಬೇಸಗೆಯಲ್ಲಿ ಇದನ್ನು ಸೇವಿಸಬಹುದು.

9. ಚರ್ಮದ ರಕ್ಷಣೆಗಾಗಿ ಹೀಗೆ ಮಾಡಿ

ಬಿಸಿಲಿಗೆ ಹೋಗುವ ಸನ್‌ಸ್ಕ್ರೀನ್‌ನೊಂದಿಗೆ ಲೈಟ್ ಮಾಯಿಶ್ಚರೈಸರ್ ಬಳಸಿ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಛತ್ರಿ, ಸನ್ ಗ್ಲಾಸ್, ಟೋಪಿಗಳು ಇರಲಿ. ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ಹೊರಗೆ ಓಡಾಡುವುದನ್ನು ತಪ್ಪಿಸಿ.

Exit mobile version