ಥಾಯ್ಲೆಂಡ್: ಕೋವಿಡ್ ಹೊಸ ತಳಿ ಆರ್ಕ್ಟರಸ್‌ಗೆ ಥಾಯ್ಲೆಂಡ್‌ನಲ್ಲಿ ಮೊದಲ ಸಾವು ಸಂಭವಿಸಿದೆ ಎಂದು ಥಾಯ್ಲೆಂಡ್‌ನ ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳ ವರದಿ ಮಾಡಿವೆ. ಕೋವಿಡ್‌ನ ಈ ಹಿಂದಿನ ಎಲ್ಲ ಉಪ ತಳಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿರುವ ಆರ್ಕ್ಟರಸ್ ಬಗ್ಗೆ ಈಗ ಜಗತ್ತಿನಾದ್ಯಂತ ಆತಂಕ ಶುರುವಾಗಿದೆ(Covid Variant Arcturus).
ದಿ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಕೋವಿಡ್‌ನ ಈ ಹಿಂದಿನ ಉಪ ತಳಿಗಳಿಗಿಂತಲೂ ಸುಮಾರು ಒಂದೂವರೆ ಪಟ್ಟು ಅಪಯಕಾರಿಯಾಗಿರುವ ಆರ್ಕ್ಟರಸ್ ತಳಿಗೆ ಥಾಯ್ಲೆಂಡ್‌ನಲ್ಲಿ ಮೊದಲ ಬಲಿಯಾಗಿದೆ. ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಹೊಸ ತಳಿಯ ಆರ್ಭಟ ಜೋರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಏಪ್ರಿಲ್ 17ರ ಹೊತ್ತಿಗೆ ಥಾಯ್ಲೆಂಡ್‌ನಲ್ಲಿ ಒಟ್ಟು XBB.1.16 ಹದಿನೇಳು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಒಂದು ಪ್ರಕರಣದಲ್ಲಿ ಸಾವಾಗಿದೆ ಎಂದು ಡಾ. ಸಿರಿಲಾಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಿಬಿಎಸ್ ವರ್ಲ್ಡ್ ವರದಿ ಮಾಡಿದೆ.
ಹೊಸ ಕೋವಿಡ್‌ನಿಂದಾಗಿ ವಿದೇಶಿ ವೃದ್ಧರು ಮೃತರಾಗಿದ್ದಾರೆ. ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಹಾಗಾಗಿ, ಅವರ ಸಾವು ನೇರವಾಗಿ ಈ ಹೊಸ ತಳಿಯಿಂದಲೇ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇತರ ಅಪಾಯಕಾರಿ ಅಂಶಗಳ ಮೇಲೆ ಅದರ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಸಿರಿಲಾಕ್ ಸುಪಾಕಿತ್ ಹೇಳಿದರು. ಈ ಪ್ರಕರಣದ ಬೆನ್ನಲ್ಲೇ ಥಾಯ್ಲೆಂಡ್ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವಂತೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: Madhya Pradesh: 2 ವರ್ಷದ ಹಿಂದೆ ಕೋವಿಡ್‌ನಿಂದ ಸತ್ತ ವ್ಯಕ್ತಿ, ಜೀವಂತವಾಗಿ ಪ್ರತ್ಯಕ್ಷ! ಮುಂದೆ ಏನಾಯ್ತು?
ಆರ್ಕ್ಟರಸ್ ಮೊದಲು ಜನವರಿಯಲ್ಲಿ ಪತ್ತೆಯಾಯಿತು. ಇದು ಓಮಿಕ್ರಾನ್ ಉಪ-ತಳಿಯಾಗಿದ್ದು, ಸುಲಭವಾಗಿ ಹರಡಬಹುದು. XB.1.16 ರೂಪಾಂತರವು XBB.1.5 ರೂಪಾಂತರವನ್ನು ಹೋಲುತ್ತದೆ. ಆದರೆ ಹೆಚ್ಚುವರಿ ರೂಪಾಂತರವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ, ಇದು ತ್ವರಿತವಾಗಿ ಹರಡಬಹುದಾರೂ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಭಾರತದಲ್ಲಿ ಆರ್ಕ್ಟರಸ್ ವೇಗವಾಗಿ ಹರಡುತ್ತಿದೆಯಾದರೂ ಅಂಥ ಅಪಾಯಕಾರಿ ಮಟ್ಟಕ್ಕೆ ಹೋಗಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.