Site icon Vistara News

Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

Tips for Mothers

ದುಡಿಯುವ ಅಮ್ಮಂದಿರಿಗೆ (Tips for Mothers) ತಮ್ಮ ವೃತ್ತಿಯನ್ನೂ ಮಕ್ಕಳನ್ನೂ (children) ಸಂಸಾರವನ್ನೂ (family) ತೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲು. ಕೆಲಸದ (work) ಧಾವಂತದಲ್ಲಿ, ಗಡಿಬಿಡಿಯಲ್ಲಿ ಇಂಥ ಅಮ್ಮಂದಿರು ಮನೆಯವರಿಗೆ ಬೇಕಾದ್ದೆಲ್ಲವನ್ನೂ ಮಾಡಿ ಕೊಟ್ಟರೂ ತಮ್ಮ ಆಹಾರ, ಕಾಳಜಿಯ ಬಗ್ಗೆ ಅತ್ಯಂತ ಕಡಿಮೆ ಗಮನ ಹರಿಸುತ್ತಾರೆ.

ಮಕ್ಕಳಿಗೆ ಬೇಕಾದ ಆಹಾರವನ್ನು, ಅವರ ಬೇಕು ಬೇಡಗಳನ್ನು ಗಮನ ಹರಿಸುವುದರಲ್ಲೇ ದಿನ ಕಳೆದು ಹೋಗಿ ತಮ್ಮ ಆಹಾರದ, ಆರೋಗ್ಯದ ಕಾಳಜಿಯನ್ನು ಮಾಡುವುದು ಗೌಣವಾಗುತ್ತದೆ. ಆದರೆ, ಮಹಿಳೆಯರ ಅತ್ಯಂತ ಅಗತ್ಯವಿರುವ ಇಂಥ ನಡುವಯಸ್ಸಿನಲ್ಲಿಯೇ ಬೇಕಾದ ಅಗತ್ಯ ಪೋಷಕಾಂಶಗಳು ಮಹಿಳೆಯರಿಗೆ ದಕ್ಕದೆ, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಈ ಸುಲಭ ಅಭ್ಯಾಸಗಳನ್ನಾದರೂ ಬೆಳೆಸಿಕೊಳ್ಳುವ ಮೂಲಕ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿಕೊಳ್ಳಬಗಹುದು. ಅವು ಯಾವುವು ಎಂಬುದನ್ನು ನೋಡೋಣ.

ಬಾದಾಮಿ ಗೆಳೆಯನಾಗಲಿ

ಬಾದಾಮಿ ನಿಮ್ಮ ಗೆಳೆಯನಾಗಲಿ. ಕಚೇರಿಗೆ ಹೋಗುವಾಗ ಒಂದಿಷ್ಟು ಬಾದಾಮಿ ನಿಮ್ಮ ಬ್ಯಾಗ್‌ನಲ್ಲಿರಲಿ. ಇದು ನಿಮ್ಮ ಆಪತ್ಬಾಂಧವನಾಗಿ, ಗೆಳೆಯನಾಗಿ ಸದಾ ನಿಮಮ ಸಹಾಯಕ್ಕೆ ಬರುತ್ತದೆ. ಪ್ರೊಟೀನ್‌, ಆರೋಗ್ಯಯುತ ಕೊಬ್ಬು, ನಾರಿನಂಶ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಬಾದಾಮಿಯನ್ನು ಕಚೇರಿಯ ಬಿಡುವಿನಲ್ಲಿ ಹೊಟ್ಟೆಗಿಳಿಸಬಹುದು. ಆಗ, ಏನೋ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸಕ್ಕೆ ಕಡಿವಾಣ ಬೀಳುತ್ತದೆ. ಮಹಿಳೆಯರ ದೇಹಕ್ಕೆ ಅಗತ್ಯ ಪೋಷಕಾಂಶಗಳೂ ದಕ್ಕುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮ, ಕೂದಲ ಆರೋಗ್ಯವೂ ಇಮ್ಮಡಿಗೊಳ್ಳುತ್ತದೆ.

ಸಮಯ ಮೀಸಲಿಡಿ

ವಾರಾಂತ್ಯದಲ್ಲಿ ಒಂದಿಷ್ಟು ಸಮಯ ಕೇವಲ ನಿಮಗಾಗಿ ಮೀಸಲಿಡಿ. ಆ ವಾರವಿಡೀ, ಕಚೇರಿಯಲ್ಲಿ ನೀವು ತಿನ್ನಬಹುದಾದ ಆರೋಗ್ಯಯುತ ಆಹಾರಗಳ ಸೇವನೆಗಾಗಿ ಪಟ್ಟಿ ತಯಾರಿಸಿ. ಮುಂಚಿತವಾಗಿ ಪಟ್ಟಿ ರೆಡಿ ಮಾಡುವುದರಿಂದ ಪ್ರತಿ ದಿನ ಯಾವ ಸ್ನ್ಯಾಕ್ಸ್‌ ತಾನು ತಿನ್ನಬೇಕೆಂಬ ಮುಂಚಿತ ಅರಿವು ಇರುತ್ತದೆ.

ಸರಳ ಆಹಾರ ತಯಾರಿಸಿ

ಸುಲಭ ಹಾಗೂ ಸರಳವಾದ ಆಹಾರ ತಯಾರಿಸಿ. ವಾರಾಂತ್ಯದಲ್ಲೇ, ಈ ಬಗ್ಗೆ ತಯಾರಿ ನಡೆಸಿ, ಒಂದಿಷ್ಟು ಅಡುಗೆಗೆ ಪೂರಕ ತಯಾರಿಯನ್ನು ಮಾಡಿಡಬಹುದು. ಉದಾಹರಣೆಗೆ ಮಾರುಕಟ್ಟೆಯ ಕೆಚಪ್‌ ಪದೇ ಪದೇ ಬಳಸುವ ಮೊದಲು ಟೊಮೇಟೋ ಚಟ್ನಿ ತಯಾರಿಸಿ ಇಟ್ಟುಕೊಳ್ಳಬಹದು. ಒಂದಿಷ್ಟು ಚಟ್ನಿಪುಡಿಗಳು, ತರಕಾರಿ ಕತ್ತರಿಸಿಡುವುದು, ಹಿಟ್ಟು ಮೊದಲೇ ರೆಡಿ ಮಾಡಿಡುವುದು ಇತ್ಯಾದಿ ಕೆಲಸಗಳನ್ನು ಮಾಡಿದರೆ, ಕೆಲಸ ಸುಲಭವಾಗುತ್ತದೆ.


ಆರೋಗ್ಯಕರ ಸ್ನ್ಯಾಕ್

ಕಚೇರಿಗೆ ಒಯ್ಯುವಾಗ ಆರೋಗ್ಯಕರ ಸ್ನ್ಯಾಕ್‌ ತೆಗೆದುಕೊಂಡು ಹೋಗಿ. ಉದಾಹರಣೆ, ಒಂದು ಹಣ್ಣು, ಒಂದಿಷ್ಟು ಬಾದಾಮಿ ಅಥವಾ ಬೀಜಗಳು, ಒಣ ಹಣ್ಣುಗಳು, ಮೊಳಕೆಕಾಳು ಹಸಿ ತರಕಾರಿಗಳು, ಸಲಾಡ್‌ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

ಪೋಷಕಾಂಶಗಳ ಆಹಾರ

ಆಹಾರದ ಆಯ್ಕೆ ಮಾಡುವಾಗ ಪೋಷಕಾಂಶಗಳಿಂದ ಸಮೃದ್ಧವಾದ್ದನ್ನೇ ಆಯ್ಕೆ ಮಾಡಿ. ಸಂಪೂರ್ಣ ಆಹಾರದತ್ತ ಗಮನ ಇರಲಿ. ನಿತ್ಯವೂ ಬಗೆಬಗೆಯ ಪೋಷಕಾಂಶಗಳ ವೆರೈಟಿ ಆಹಾರಗಳು ಹೊಟ್ಟೆ ಸೇರಲಿ. ಒಂದೇ ಬಗೆಯ ನೀರಸ ಆಹಾರಗಳ ಅಭ್ಯಾಸವಿದ್ದರೆ ಬಿಟ್ಟುಬಿಡಿ.

ಮೈಂಡ್‌ಫುಲ್‌ ಈಟಿಂಗ್‌

ಮೈಂಡ್‌ಫುಲ್‌ ಈಟಿಂಗ್‌ ಬಗ್ಗೆ ಗಮನ ಹರಿಸಿ. ಅಂದರೆ ಪ್ರತಿ ತುತ್ತನ್ನೂ ಅನುಭವಿಸಿ ತಿನ್ನಿ. ನಿಧಾನವಾಗಿ ತಿನ್ನಲು ಅಭ್ಯಾಸ ಮಾಡಿ. ಊಟ ಮಾಡುವಾಗ ಬೇರೆ ಕೆಲಸಗಳ ಮೇಲೆ ಗಮನ ಹರಿಸಬೇಡಿ. ಊಟವನ್ನು ಅನುಭವಿಸಿ ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನಿ. ನಿಧಾನವಾಗಿ ತಿನ್ನುವುದರಿಂದ ಹೆಚ್ಚು ತಿನ್ನುವ ಬಯಕೆಯಾಗುವುದಿಲ್ಲ. ಅಗತ್ಯಕ್ಕಿಂದ ಹೆಚ್ಚು ಉಣ್ಣುವುದು ತಪ್ಪುತ್ತದೆ. ಸರಿಯಾಗಿ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇರುತ್ತದೆ.

Exit mobile version