Site icon Vistara News

Viral Story: ಈ ʼಬ್ರೆಸ್ಟ್‌ ಫ್ರೆಂಡ್ಸ್‌ʼ ಮಹಿಳೆಯರ ನಗ್ನ ಫೋಟೋಶೂಟ್‌ನ ಹಿಂದಿದೆ ಜೀವನಪ್ರೇಮದ ಕಥೆ

breast friends viral story

ಲಂಡನ್:‌ ಇಲ್ಲಿ ಕಾಣಿಸುವ ಮಹಿಳೆಯ ನಗ್ನ ಫೋಟೋಶೂಟ್‌ಗಳು (Nude Photoshoot) ಒಂದು ಕ್ಯಾಲೆಂಡರ್‌ನಿಂದ ಎತ್ತಿಕೊಂಡದ್ದು. ಇವರೇನೂ ನಟಿಯರಲ್ಲ. ನಮ್ಮನಿಮ್ಮಂಥ ಸಾಮಾನ್ಯರೇ. ಹೀಗೆ ನಗ್ನವಾಗಿ ಗ್ರೂಪ್‌ ಫೋಟೋ ತೆಗೆಸಿಕೊಳ್ಳಲು ಒಂದು ಮೂಲ ಕಾರಣ- ಕ್ಯಾನ್ಸರ್ (Breast cancer).‌ ಇವರ ಸುದ್ದಿ ಈಗ ವೈರಲ್‌ (Viral Story).

ಇಲ್ಲಿರುವ ಮಹಿಳೆಯರೆಲ್ಲಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರು; ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದವರು ಅಥವಾ ಅದನ್ನು ಎದುರಿಸುತ್ತಿರುವವರು. ಒಂದು ಕ್ಯಾಲೆಂಡರ್‌ಗಾಗಿ ಒಟ್ಟಾಗಿ ನಗ್ನ ಪೋಸ್‌ ನೀಡಿದ ಇವರಿಗೆ ಇದು ತಮ್ಮ ದೇಹದ ಮೇಲಿನ ಪ್ರೀತಿ, ಘನತೆಯನ್ನು ಹೆಚ್ಚಿಸಿದ ಒಂದು ಸನ್ನಿವೇಶ ಆಗಿತ್ತು.

ಈ ಚಿತ್ರಗಳನ್ನು ಚಿತ್ರೀಕರಿಸಿದವವಳು 53 ವರ್ಷದ ಸ್ಯಾಲಿ ಸ್ಮಾರ್ಟ್ ಎಂಬಾಕೆ. ಇದರಲ್ಲಿ ಹೆಚ್ಚಿನವರು ಕ್ಯಾಮೆರಾ ಮುಂದೆ ದಿರಸು ಕಳಚಲು ಮೀನಮೇಷ ಎಣಿಸಿದರು. ಆದರೆ ನಂತರ ಈ ಪ್ರಕ್ರಿಯೆ ಅವರಿಗೆ ಅಪೂರ್ವ ಬಿಡುಗಡೆಯ ಭಾವ ಕೊಟ್ಟಿತಂತೆ. ತಮ್ಮನ್ನು ತಾವೇ ದೇವತೆಗಳಂತೆ ಅವರು ಭಾವಿಸಿದರು.

breast cancer photoshoot viral story

ಡೆನ್‌ಬಿಗ್‌ಶೈರ್‌ನ ಬೋಡೆಲ್‌ಡನ್‌ ಎಂಬಲ್ಲಿ ತಾವು ಚಿಕಿತ್ಸೆ ಪಡೆದ ಕ್ಯಾನ್ಸರ್ ಕೇಂದ್ರಕ್ಕೆ ಹಣವನ್ನು ಸಂಗ್ರಹಿಸುವ ಗುರಿ ಈ ಕ್ಯಾಲೆಂಡರ್‌ ಫೋಟೋಶೂಟ್‌ನ ಹಿಂದಿದೆ. ಇದರ ಮೂಲಕ ಇವರು 20,000 ಪೌಂಡ್‌ ಸಂಗ್ರಹಿಸಿದ್ದಾರೆ. ಇವರೆಲ್ಲಾ 30ರಿಂದ 63ರ ನಡುವಿನ ವಯಸ್ಸಿನ ಮಹಿಳೆಯರು.

ಸ್ಯಾಲಿ ಡೆನ್‌ಬಿಗ್‌ಶೈರ್‌ನ ವೃತ್ತಿಪರ ಫೋಟೋಗ್ರಾಫರ್.‌ ನಾರ್ತ್‌ವೇಲ್ಸ್‌ನ ಗ್ಲಾನ್‌ ಕ್ಲಾಡ್‌ ಕ್ಯಾನ್ಸರ್‌ ಸೆಂಟರ್‌ನಲ್ಲಿ ಇತರ ಕೆಲವು ಮಹಿಳೆಯರಂತೆ ಸ್ಯಾಲಿ ಕೂಡ ಸ್ತನ ಕ್ಯಾನ್ಸರ್‌ ಚಿಕಿತ್ಸೆ ಪಡೆದರು. ಅದೇ ಹೊತ್ತಿಗೆ, ತಾನು ಚಿಕಿತ್ಸೆ ಪಡೆದ ಕ್ಯಾನ್ಸರ್‌ ಕೇಂದ್ರಕ್ಕಾಗಿ ಏನಾದರೂ ಮಾಡುವ ಐಡಿಯಾ ಅವರಿಗೆ ಬಂತು. ತನ್ನಂತೆಯೇ ಇರುವ ಇತರ ಮಹಿಳೆಯರನ್ನು ಸಂಪರ್ಕಿಸಿ ಈ ಐಡಿಯಾ ರೂಪಿಸಿದಳು.

breast cancer photoshoot viral story

ಇದೇಗ ಅವರೆಲ್ಲಾ ತಮ್ಮನ್ನು ʼಬ್ರೆಸ್ಟ್‌ ಫ್ರೆಂಡ್ಸ್‌ʼ (Breast Friends) ಎಂದು ಕರೆದುಕೊಳ್ಳುತ್ತಾರೆ. ಬೆಸ್ಟ್‌ ಫ್ರೆಂಡ್ಸ್‌ ಇದ್ದ ಹಾಗೆ. ಮೊದಲಿಗಿಂತ ಹೆಚ್ಚು ಆಶಾವಾದಿಗಳೂ, ಜೀವನಪ್ರೇಮಿಗಳೂ, ಧೈರ್ಯವಂತರೂ ಆಗಿದ್ದಾರಂತೆ.

ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ. ಸ್ತನ ಕ್ಯಾನ್ಸರ್‌ ಪತ್ತೆಯಾದಾಗಿನ ಭಯ, ಆತಂಕ, ಹತಾಶದ ಸ್ಥಿತಿಯಿಂದ, ಚಿಕಿತ್ಸೆಯ ನೋವು, ದಿಟ್ಟತನ- ಡಿಪ್ರೆಶನ್-‌ ಇತ್ಯಾದಿಗಳ ಮಿಶ್ರ ಭಾವಗಳ ಮೆರವಣಿಗೆಯಿದೆ. ಈ ಕ್ಯಾಲೆಂಡರ್‌ ನೋಡಿದ ಇತರ ಮಹಿಳೆಯರು ತಮ್ಮ ದೇಹದ ಬಗ್ಗೆ ಇನ್ನಷ್ಟು ಕಾಳಜಿ, ಪ್ರೀತಿ ಹೊಂದಬಹುದು; ಹಾಗೂ ಸಕಾಲದಲ್ಲಿ ಕ್ಯಾನ್ಸರ್‌ ಪರೀಕ್ಷೆ- ಚಿಕಿತ್ಸೆ ಪಡೆಯಬಹುದು ಎಂಬುದು ಇವರೆಲ್ಲರ ನಿರೀಕ್ಷೆ.

ಇದನ್ನೂ ಓದಿ: Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

Exit mobile version