Site icon Vistara News

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Weight Loss Tips

ಹಿಂದೆ ಕಲ್ಲನ್ನಾದರೂ ತಿಂದು (Weight loss Tips) ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ಇರಲಿ, ವಿಷಯ ಅದಲ್ಲ. ವಯಸ್ಸನ್ನು ಹೇಳಿದರೂ ಹೇಳದಿದ್ದರೂ, ಆಗುವುದಂತೂ ಹೌದಲ್ಲ. ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು ೪೦ ದಾಟಿದ್ದು ಹೌದು. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ? ಹೆಚ್ಚಿನ ಸಾರಿ ತೂಕ ಕರಗಿಸುವ ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಪ್ರಾಯ ಹೆಚ್ಚುತ್ತಿದ್ದಂತೆ ಗಾಯ ಮಾಯುವುದು ನಿಜಕ್ಕೂ ಕಷ್ಟ. ಹಾಗಾದರೆ ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ತೂಕ ಇಳಿಸುವುದಕ್ಕೆ 40ರ ನಂತರ ಏನು ಮಾಡಬೇಕು?

ಆಹಾರದ ಬಗ್ಗೆ ಗಮನ

ಬೆಳಗಿನ ಉಪಾಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸಬೇಕು ಜೊತೆಗೆ ಕ್ಯಾಲರಿ ಇಳಿಸಬೇಕು. ಅಂದರೆ, ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು. ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಇದರಿಂದ ನಾರು ಭರಪೂರ ದೊರೆಯುತ್ತದೆ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ.

ವ್ಯಾಯಾಮ

ಯೋಗದಂಥ ವ್ಯಾಯಾಮಗಳು ಸರಳ ಎನ್ನಿಸಿದರೂ ಹಲವು ರೀತಿಯಲ್ಲಿ ಪ್ರಯೋಜನಕಾರಿ. ದೇಹ-ಮನಸ್ಸುಗಳನ್ನು ಶಾಂತವಾಗಿಸುವುದರ ಜೊತೆಗೆ, ದೇಹದ ವಿವಿಧ ಸ್ನಾಯುಗಳನ್ನು ಸಶಕ್ತಗೊಳಿಸುತ್ತವೆ. ಕೀಲುಗಳ ಆರೋಗ್ಯ ಸುಧಾರಿಸಿ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ. ಇವೆಲ್ಲ ಕ್ರಮೇಣ ನೆರವಾಗುವುದು ದೇಹದ ಕೊಬ್ಬು ಕರಗಿಸುವಲ್ಲಿ.

ಇದನ್ನೂ ಓದಿ: Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

ಕಾರ್ಡಿಯೊ

ಇದಕ್ಕಾಗಿ ಥ್ರೆಡ್‌ಮಿಲ್‌ಗಳ ಮೇಲೆ ಉಸಿರುಗಟ್ಟಿ ಓಡಬೇಕೆಂದಿಲ್ಲ. ಸರಳವಾಗಿ ಬೀಸು ನಡಿಗೆ, ಜಾಗಿಂಗ್‌ ಸಹ ಸಾಕಾಗುತ್ತದೆ. ನಿಮ್ಮಿಷ್ಟದ ಇಂಥ ಯಾವುದೇ ವ್ಯಾಯಾಮ ಮಾಡಬಹುದು. ಕಾರ್ಡಿಯೊ ವ್ಯಾಯಾಮಗಳು ದೇಹಕ್ಕೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ, ಹೃದಯದ ಆರೋಗ್ಯ ಹೆಚ್ಚಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾಲರಿ ಕರಗುವ ಪ್ರಮಾಣವನ್ನು ಅಧಿಕಗೊಳಿಸುತ್ತವೆ.

ನಿದ್ದೆ

ಆರೋಗ್ಯದ ವಿಷಯ ಹೇಳುವಾಗ ನಿದ್ದೆಯನ್ನುಳಿದು ಮುಂದೆ ಹೋಗುವಂತೆಯೇ ಇಲ್ಲ. ತೂಕ ಇಳಿಸುವುದು, ಫಿಟ್‌ನೆಸ್‌ ಇತ್ಯಾದಿಗಳ ವಿಷಯ ಮಾತಾಡುವಾಗ ನಿದ್ದೆಯನ್ನು ಸಂಪೂರ್ಣ ಮರೆತೇ ಬಿಟ್ಟಿರುತ್ತೇವೆ. ದೇಹದ ರಿಪೇರಿಗೆ ಅಗತ್ಯ ಅವಕಾಶವನ್ನು ನೀಡದಿದ್ದರೆ ಯಾವುದೂ ಸರಿಯಾಗಿ ಆಗುವುದಿಲ್ಲ. ಆದರೆ ದಿನಕ್ಕೆ ಕಡ್ಡಾಯ 7-8 ತಾಸು ನಿದ್ದೆ ಮಾಡಿ. ಜೊತೆಗೆ, ನಿದ್ರೆಗೆಟ್ಟರೆ ತೂಕ ಹೆಚ್ಚುತ್ತದೆ. ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಹೆಚ್ಚುತ್ತದೆ, ಇದರಿಂದಲೂ ತೂಕ ಏರುತ್ತದೆ. ಮತ್ತೆ ತೂಕ ಇಳಿಸುವುದು ಹೇಗೆ ಸಾಧ್ಯ?

Exit mobile version