Site icon Vistara News

What Is Stage 3 Breast Cancer: ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು? ಇದರ ಲಕ್ಷಣಗಳೇನು?

Breast Cancer Awareness

ಬಾಲಿವುಡ್‌ ಮತ್ತು ಕಿರುತೆರೆ (What is Stage 3 Breast) Cancer? ನಟಿ ಹಿನಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಮೂರನೇ ಹಂತದಲ್ಲಿರುವ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಮಂದಿಗೆ ಕ್ಯಾನ್ಸರ್‌ ಎಂಬ ಹೆಸರು ಕೇಳುತ್ತಿದ್ದಂತೆಯೇ, ಮರಣ ಶಾಸನದಂತೆ ಕೇಳುತ್ತದೆ. ಅದರಲ್ಲೂ ಮೂರನೇ ಹಂತ ಎಂಬುದು ಇನ್ನೂ ಕಷ್ಟವಾಗುತ್ತದೆ. ಹಿನಾ ಖಾನ್ ಅವರಿಗೆ ರೋಗ ಆರಂಭಿಕ ಹಂತವನ್ನು ದಾಟಿದೆ ಎಂಬುದು ಹೌದು. ಆದರೆ ರೋಗಮುಕ್ತರಾಗುವ ಆಸೆಯನ್ನು ತ್ಯಜಿಸುವ ಅಗತ್ಯವಿಲ್ಲ. ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು ಎಂಬ ವಿವರಗಳು ಇಲ್ಲಿವೆ.

ಹಂತಗಳೆಂದರೇನು?

ಕ್ಯಾನ್ಸರ್‌ ಗಡ್ಡೆ ಎಷ್ಟು ದೊಡ್ಡದಿದೆ ಮತ್ತು ಎಲ್ಲೆಲ್ಲಿ ಹಬ್ಬಿದೆ ಎನ್ನುವುದರ ಆಧಾರದ ಮೇಲೆ ಅದನ್ನು ಭಿನ್ನ ಹಂತಗಳನ್ನಾಗಿ ವಿಂಗಡಿಸಲಾಗುತ್ತದೆ. ಮೂರನೇ ಹಂತವೆಂದರೆ ಆರಂಭದ ಹಂತಗಳನ್ನು ದಾಟಿ ಬೆಳೆದಿದ್ದು, ಸ್ತನಗಳಿಂದ ಹೊರಗೂ ಕ್ಯಾನ್ಸರ್‌ ಹರಡಿದೆ ಎಂದು ಹೇಳಬಹುದು. ಆದರೆ ದೇಹದಲ್ಲಿ ಎಲ್ಲೆಲ್ಲೋ ಇರುವಂಥ ಅಂಗಾಂಗಗಳಿಗೆ ಇನ್ನೂ ಹರಡಿಲ್ಲ. ಸುತ್ತಮುತ್ತಲಿನ ಭಾಗದಲ್ಲಿ ಮಾತ್ರವೇ ವಿಸ್ತರಿಸಿದೆ ಎಂದು ಅರ್ಥ.

ಮೂರನೇ ಹಂತದಲ್ಲೂ ಮೂರು ಉಪವಿಭಾಗಗಳನ್ನು ವೈದ್ಯ ವಿಜ್ಞಾನ ಮಾಡುತ್ತದೆ. ಮೊದಲನೆಯದು 3ಎ ಹಂತ. ಇದರಲ್ಲಿ-

ಇದಕ್ಕೇನು ಕಾರಣ?

ಇದಕ್ಕೆ ನಿಖರವಾದ ಕಾರಣವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ. ಆದರೆ ಇದರ ಭೀತಿಯನ್ನು ಹೆಚ್ಚಿಸುವಂಥ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

ಲಕ್ಷಣಗಳೇನು?

ಕ್ಯಾನ್ಸರ್‌ನ ಮೂರನೇ ಹಂತದಲ್ಲಿ ಸ್ತನಗಳಲ್ಲಿ ಕಾಣುವಂಥ ಲಕ್ಷಣಗಳೇನು ಎಂಬುದನ್ನು ತಿಳಿಯೋಣ. ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ಗಡ್ಡೆ ಕಾಣಿಸುತ್ತದೆ. ಸ್ತನಗಳು ಮೇಲ್ನೋಟಕ್ಕೆ ಬದಲಾದಂತೆ ಗೋಚರಿಸುತ್ತವೆ. ಸ್ತನಗಳಲ್ಲಿ ಸ್ರಾವ ಕಾಣಬಹುದು. ನೋವು, ಊತವೂ ಇದ್ದೀತು. ಚರ್ಮ ಕೆಂಪಾಗಿ ಹೆಕ್ಕಳಿಕೆ ಎದ್ದಂತೆ ಕಾಣಬಹುದು. ಇಂಥ ಯಾವುದೇ ಲಕ್ಷಣಗಳು ಕಂಡರೂ ತುರ್ತಾಗಿ ವೈದ್ಯರನ್ನು ಕಾಣಬೇಕು.

ತಪಾಸಣೆ

ಮೊದಲಿಗೆ ವೈದ್ಯರು ದೈಹಿಕ ಬದಲಾವಣೆಗಳನ್ನು ತಪಾಸಣೆ ಮಾಡುತ್ತಾರೆ. ಮೊಮೊಗ್ರಾಮ್‌, ಅಲ್ಟ್ರಾಸೌಂಡ್‌ಗಳ ಮೂಲಕ ಈ ಗಡ್ಡೆಗಳು ಮತ್ತು ಕೋಶಗಳನ್ನು ಪರಿಶೀಲಿಸಲಾಗುತ್ತದೆ. ಇವುಗಳ ಸಣ್ಣ ಭಾಗವನ್ನು ತೆಗೆದು ಬಯಾಪ್ಸಿ ಮಾಡಲಾಗುತ್ತದೆ. ದುಗ್ಧರಸ ಗ್ರಂಥಿಗಳಿಗೆ ಅಂಟಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: Hina Khan: ಬಿಗ್ ಬಾಸ್ ಸ್ಪರ್ಧಿ, ʻಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಧಾರಾವಾಹಿ ಖ್ಯಾತಿಯ ನಟಿಗೆ ಸ್ತನ ಕ್ಯಾನ್ಸರ್!

ಚಿಕಿತ್ಸೆ

ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಗಳನ್ನು ತೆಗೆಯಲಾಗುತ್ತದೆ. ಕೆಲವೊಮ್ಮೆ ಸ್ತನಗಳನ್ನೇ ಸಂಪೂರ್ಣವಾಗಿ ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ. ತೀವ್ರ ಶಕ್ತಿಯ ಕಿರಣಗಳ ಮೂಲಕ (ರೇಡಿಯೇಶನ್)‌ ಕ್ಯಾನ್ಸರ್‌ ಕೋಶಗಳನ್ನು ಸಾಯಿಸಲಾಗುತ್ತದೆ. ಇರುವ ಕೋಶಗಳನ್ನು ಸಾಯಿಸಿ, ಮುಂದೆ ಹರಡದಂತೆ ಮಾಡಲು ಕಿಮೊ ಸಹ ಅಗತ್ಯ. ಉಳಿದಂತೆ ಹಾರ್ಮೋನ್‌ ಥೆರಪಿ, ಇಮ್ಯುನೋಥೆರಪಿಯಂಥ ಚಿಕಿತ್ಸೆಗಳನ್ನು ವೈದ್ಯರು ನಿರ್ಧರಿಸುತ್ತಾರೆ.

Exit mobile version