ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವರ್ಷಕ್ಕೆ ಹೊಸ ಬಗೆಯ ಪ್ರಯೋಗಾತ್ಮಕ ಮೇಕಪ್ ಟ್ರೆಂಡ್ (2024 Beauty trend) ಯುವತಿಯರನ್ನು ಸೆಳೆಯಲಿವೆ. ಇವು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ್ದೂ, ಮುಂದೊಮ್ಮೆ ನಮ್ಮಲ್ಲೂ ಟ್ರೆಂಡ್ ಲಿಸ್ಟ್‌ಗೆ ಸೇರಿದರೂ ಸೇರಬಹುದು ಎಂದು ಅಂದಾಜಿಸಿದ್ದಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ಹೌದು. ಬ್ಯೂಟಿ ಎಕ್ಸ್‌ಪರ್ಟ್ಸ್ ಪ್ರಕಾರ, ಈ ಸಾಲಿನ ಹೊಸ ವರ್ಷದಲ್ಲಿ ಒಂದಿಷ್ಟು ಹೊಸ ಬಗೆಯ ಮೇಕಪ್ ಟ್ರಿಕ್‌ಗಳು ಟ್ರೆಂಡಿಯಾಗುವ ಚಾನ್ಸ್ ಇದೆ. ಪ್ರಯೋಗಾತ್ಮಕ ಲಿಸ್ಟ್‌ನಲ್ಲಿರುವ ಈ ಮೇಕಪ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೂ ವಿದೇಶಿ ಕಾನ್ಸೆಪ್ಟ್ ಅನ್ನು ಒಳಗೊಂಡ ನಾನಾ ಬಗೆಯ ಮೇಕಪ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ. ಅವುಗಳಲ್ಲಿ ಯಾವ್ಯಾವು ಟಾಪ್ ಲಿಸ್ಟ್‌ನಲ್ಲಿ ಸೇರಿವೆ ಎಂಬುದರ ಬಗ್ಗೆ ಬ್ಯೂಟಿ ತಜ್ಞರು ಸಂಕ್ಷೀಪ್ತ ಮಾಹಿತಿ ನೀಡಿದ್ದಾರೆ.
ಸ್ಟ್ರಾಬೆರ್ರಿ ಮೇಕಪ್
ಅರರೆ., ಹೆಸರೇ ಇಷ್ಟು ಸ್ವೀಟ್ ಆಗಿದೆಯಲ್ಲಾ ಎಂದು ಕೊಂಡಿರಾ! ಸ್ಟ್ರಾಬೆರ್ರಿ ಮೇಕಪ್ ತೀರಾ ಸಿಂಪಲ್ ಆಗಿ ಕಾಣುತ್ತದೆ. ಕೆನ್ನೆಯ ಬಳಿ ಸ್ಟ್ರಾಬೆರ್ರಿ ಶೇಡ್‌ನ ಬ್ಲಷ್ ಹೈಲೈಟಾಗಿರುತ್ತದೆ. ಇನ್ನು ನ್ಯಾಚುರಲ್ ಲಿಪ್ ಶೇಡ್ ಹಾಗೂ ಮಸ್ಕರಾ ಈ ಮೇಕಪನ್ನು ಆಕರ್ಷಕವಾಗಿಸುತ್ತದೆ.
ಡೊಯಿನ್ ಮೇಕಪ್
ಸೆಲೆಬ್ರೆಟಿಗಳಂತೆ ಕಾಣುವ ಮೇಕಪ್ ಇದು. ಸದ್ಯಕ್ಕೆ ಅತಿ ಹೆಚ್ಚು ಗೂಗಲ್‌ನಲ್ಲಿ ಸರ್ಚ್ ಮಾಡಿರುವ ಮೇಕಪ್ ಸ್ಟೈಲ್ ಇದು. ಸದ್ಯ ವಿದೇಶದಲ್ಲಿ ಪ್ರಚಲಿತದಲ್ಲಿದೆ. ಡಾಲ್‌ನಂತೆ ಕಾಣುವ ಬ್ಲಷ್, ಆಕರ್ಷಕ ಮೊನಾಚಾದ ಲ್ಯಾಷ್, ಸ್ಪಾರ್ಕಲಿಂಗ್ ಮೇಕಪ್ ಶೇಡ್ಸ್ ರೆಡ್ ಕಾರ್ಪೆಟ್ ಹಾಗೂ ರನ್ ವೇ ಫ್ಯಾಷನ್ ಲುಕ್ ನೀಡುತ್ತವೆ.
ಕ್ಲೌಡ್ ಸ್ಕಿನ್ ಮೇಕಪ್ ಲುಕ್
ಹೆಚ್ಚು ಡಾರ್ಕ್ ಶೇಡ್‌ಗಳನ್ನು ಬಳಸದೇ ಕೇವಲ ಫೌಂಡೇಷನ್ ಹಾಗೂ ಕನ್ಸಿಲರ್ ಬಳಸಿ ಮಾಡುವ ಮೇಕಪ್ ಇದು. ನೋಡಲು ತೀರಾ ನ್ಯಾಚುರಲ್ ಗ್ಲಾಸ್ ಸ್ಕಿನ್ ಲುಕ್ ಇದು ನೀಡುತ್ತದೆ.
ನಾಸ್ಟಾಲಜಿಕ್ ಮೇಕಪ್
ಹೆಸರೇ ಹೇಳುವಂತೆ ಹಳೆಯ ಸ್ಟೈಲಿಂಗ್ ನೆನಪಿಸುವ ಮೇಕಪ್ ಇದು. ರೆಟ್ರೊ ಲುಕ್ ಎಂದರೂ ತಪ್ಪಾಗಲಾರದು. ಮ್ಯಾಟ್ ಪೌಂಡೇಷನ್, ಹೆವ್ವಿ ಕಾಂಟೊರ್ ಬಳಸಲಾಗುತ್ತದೆ. ಕಣ್ಣಗಳನ್ನು ಹೈಲೈಟ್ ಮಾಡುವಂತೆ ಕಾಜಲ್, ಮಸ್ಕರಾ, ಐ ಲೈನರ್ ಹಚ್ಚಲಾಗುತ್ತದೆ.
ಮ್ಯಾಟ್ ಮೇಕಪ್
ಈಗಾಗಲೇ ಟ್ರೆಂಡ್‌ನಲ್ಲಿದ್ದ ಮ್ಯಾಟ್ ಮೇಕಪ್ ಮತ್ತೊಮ್ಮೆ ಟ್ರೆಂಡಿಯಾಗಲಿದೆ ಎಂಬುದು ಸೌಂದರ್ಯ ತಜ್ಞರ ಲೆಕ್ಕಚಾರ. ನಮ್ಮಲ್ಲಿ ಇನ್ನು ಚಳಿಗಾಲ ಇರುವುದರಿಂದ ಈ ಮೇಕಪ್ ಸದ್ಯ ಎಂಟ್ರಿ ನೀಡುವುಎದು ಡೌಟ್. ಎನಿದ್ದರೂ ಮುಂದಿನ ಸೀಸನ್‌ಗೆ ಕಾಲಿಡಬಹುದೇನೋ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Fashion 2024 : ಈ ವರ್ಷ ಟ್ರೆಂಡಿಯಾಗಲಿರುವ ವೆಸ್ಟರ್ನ್ ವೇರ್ಸ್ ಡಿಟೇಲ್ಸ್ ಇಲ್ಲಿದೆ!