ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಆರತಕ್ಷತೆ (ರಿಸೆಪ್ಷನ್) ಮದುಮಗ ಧರಿಸುವ ಗ್ರ್ಯಾಂಡ್ ಔಟ್‌ಫಿಟ್‌ಗಳು (Wedding Fashion) ಕೇವಲ ವೆಡ್ಡಿಂಗ್ ಫೋಟೋಗಳಲ್ಲಿ ಮಾತ್ರವಲ್ಲ, ನೋಡುಗರ ಕಣ್ಮನ ಸೆಳೆಯುವಂತಿರಬೇಕು. ಇದಕ್ಕೆ ಪೂರಕ ಎಂಬಂತೆ, ಇತ್ತೀಚಿನ ದಿನಗಳಲ್ಲಿ ಶೆರ್ವಾನಿ ಹೊರತುಪಡಿಸಿದಲ್ಲಿ, ಟ್ರೆಡಿಷನಲ್ ಔಟ್‌ಫಿಟ್‌ಗಿಂತ ಇದೀಗ ಇಂಡೋ-ವೆಸ್ಟರ್ನ್ ಶೈಲಿಯ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿಗೂ ಆದ್ಯತೆ ಹೆಚ್ಚಾಗಿದೆ. ಹಾಗಾಗಿ ಪ್ರತಿ ಮದುವೆಯ ಥೀಮ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು ಎನ್ನುತ್ತಾರೆ ವೆಡ್ಡಿಂಗ್ ಸ್ಟೈಲಿಸ್ಟ್‌ಗಳು.
“ಮದುವೆಯಲ್ಲಿ ಮಹೂರ್ತಕ್ಕೆ ಟ್ರೆಡಿಷನಲ್ ಔಟ್‌ಫಿಟ್ ಆಯಾ ಪ್ರಾದೇಶಿಕ ರಿವಾಜುಗಳಿಗೆ ತಕ್ಕಂತೆ ಧರಿಸಲಾಗುತ್ತದೆ. ಇನ್ನು ರಿಸೆಪ್ಷನ್ ಅಂದರೇ, ಆರತಕ್ಷತೆಯಲ್ಲಿ ಮಾತ್ರ ವಿಭಿನ್ನ ಔಟ್‌ಫಿಟ್‌ಗಳಿಗೆ ಮಹತ್ವ ನೀಡುವುದು ಹೆಚ್ಚಾಗಿದೆ. ಹಾಗೆಂದು ಟ್ರಯಲ್ ನೊಡದೇ ಆಯ್ಕೆ ಮಾಡುವುದು ಸೂಕ್ತವಲ್ಲ. ಅಲ್ಲದೇ, ಅವರವರ ಪರ್ಸನಾಲಿಟಿಗೆ ತಕ್ಕಂತೆ ಹಾಗೂ ಮದುಮಗಳ ಔಟ್‌ಫಿಟ್‌ಗೆ ಹೊಂದುವಂತೆ ಮ್ಯಾಚ್ ಮಾಡಬೇಕಾಗುತ್ತದೆ. ಇದಕ್ಕಾಗಿ ವೆಡ್ಡಿಂಗ್ ಅಥವಾ ಬೋಟಿಕ್ ಸ್ಟೈಲಿಸ್ಟ್‌ಗಳ ಸಹಾಯ ತೆಗೆದುಕೊಳ್ಳಬಹುದು”ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮೊದಲೇ ಪ್ಲ್ಯಾನ್ ಮಾಡಿ
ಮದುವೆಗೂ ಮುನ್ನವೇ ಯಾವ ಬಗೆಯ ಔಟ್‌ಫಿಟ್ ಸೂಕ್ತ? ಎಂಬುದನ್ನು ಬೋಟಿಕ್ ಇಲ್ಲವೇ ವೆಡ್ಡಿಂಗ್ ಡಿಸೈನರ್‌ಗಳ ಬಳಿ ಸಲಹೆ ಪಡೆದು ಆಯ್ಕೆ ಮಾಡುವುದು ಉತ್ತಮ. ಇದೀಗ ಆನ್‌ಲೈನ್‌ನಲ್ಲೂ ಟ್ರೆಂಡಿ ಔಟ್‌ಫಿಟ್‌ಗಳ ಬಗ್ಗೆ ತಿಳಿದುಕೊಂಡು ಚೂಸ್ ಮಾಡಬಹುದು.
ಥೀಮ್‌ಗೆ ತಕ್ಕಂತೆ ಆಯ್ಕೆ ಮಾಡಿ
ಮದುವೆಯ ಥೀಮ್‌ಗೆ ತಕ್ಕಂತೆ ಆರತಕ್ಷತೆಯ ಔಟ್‌ಫಿಟ್ ಆಯ್ಕೆ ಮಾಡಬೇಕಾಗುತ್ತದೆ. ತೀರಾ ಟ್ರೆಡಿಷನಲ್ ಆದಲ್ಲಿ ಅದಕ್ಕೆ ಮ್ಯಾಚ್ ಆಗುವಂತಹ ಬಂದ್ಗಲಾ, ಶೆರ್ವಾನಿ, ಕುರ್ತಾ ಧರಿಸಬಹುದು. ಇಲ್ಲವಾದಲ್ಲಿ ಸೂಟ್ ಕೂಡ ಓಕೆ.
ಮದುಮಗಳ ಔಟ್‌ಫಿಟ್‌ಗೆ ಮ್ಯಾಚ್
ಮದುಮಗಳ ಔಟ್‌ಫಿಟ್‌ಗೆ ಹೊಂದುವಂತಿರಬೇಕು. ಉದಾಹರಣೆಗೆ., ಆಕೆ ಗೌನ್ ಧರಿಸಿದಲ್ಲಿ, ವೆಸ್ಟರ್ನ್ ಬ್ಲೇಝರ್, ಕೋಟ್ ಸೂಟ್ ಧರಿಸಬಹುದು. ಲೆಹೆಂಗಾ, ಗಾಗ್ರ ಆದಲ್ಲಿ ಶೆರ್ವಾನಿ, ಕುರ್ತಾ ಧರಿಸಬಹುದು.
ಗ್ರ್ಯಾಂಡಾಗಿರಲಿ ಔಟ್‌ಫಿಟ್
ಮದುವೆಯಲ್ಲಿ ಭಾಗವಹಿಸುವವರು ಧರಿಸುವಂತಹ ಅಥವಾ ತೀರಾ ಕಾಮನ್ ಆದ ಡಿಸೈನ್‌ನ ಔಟ್‌ಫಿಟ್ ಧರಿಸಬೇಡಿ. ಸಮಾರಂಭದಲ್ಲಿ ಎಲ್ಲರ ಮಧ್ಯೆಯೂ ಎದ್ದು ಕಾಣುವಂತಹ ಯೂನಿಕ್ ಡಿಸೈನ್‌ನ ಔಟ್‌ಫಿಟ್ ಆಯ್ಕೆಗೆ ಆದ್ಯತೆ ನೀಡಿ. ಇಲ್ಲವಾದಲ್ಲಿ ನೀವು ಗುಂಪಲ್ಲಿ ಗೋವಿಂದ ಎಂಬ ಮಾತಿನಂತೆ ಕಾಣಬಹುದು.
ಪರ್ಸನಾಲಿಟಿಗೆ ತಕ್ಕಂತಿರಲಿ
ಮದುಮಗನ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಿರಬೇಕು. ಇಲ್ಲವಾದಲ್ಲಿ ನೋಡುಗರ ನಗೆಪಾಟಲೀಗಿಡಾಗಬಹುದು. ಉದ್ದಗಿರುವವರಿಗೆ ಯಾವುದೇ ಬಗೆಯ ಔಟ್‌ಫಿಟ್ ಓಕೆ. ಅದೇ ಕೊಂಚ ಪ್ಲಂಪಿಯಾಗಿರುವವರು ಹಾಗೂ ಕುಳ್ಳಗಿರುವವರು ಆದಷ್ಟೂ ಅವರಿಗೆ ಮ್ಯಾಚ್ ಆಗುವಂತಹ ಪ್ರಿಂಟ್ಸ್ ಹಾಗೂ ಡಿಸೈನ್ ಸ್ಟಿಚ್ಚಿಂಗ್ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ವೆಡ್ಡಿಂಗ್ ಪರ್ಸ್