ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಸಿಲಿನಲ್ಲಿ ಹೊರ ಹೋದಾಗ ಮೇಕಪ್ ಕಾಪಾಡಿಕೊಳ್ಳುವುದು ತುಸು ಕಷ್ಟ. ಬೆವರಿನೊಂದಿಗೆ ಮೇಕಪ್(Makeup) ಕೂಡ ಹರಡಿ ಹಾಳಾಗುತ್ತದೆ. ಈ ರೀತಿ ಆಗದಿರಲು ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದಲ್ಲಿ ದಿನವಿಡೀ ಮೇಕಪ್ ಹಾಳಾಗದಂತೆ ಕಾಪಾಡಿಕೊಳ್ಳಬಹುದು. ಈ ಬಗ್ಗೆ ಬ್ಯೂಟಿ ಎಕ್ಸ್‌ಪರ್ಟ್ಸ್ ಚಂದ್ರರೇಖಾ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಸನ್‌ಸ್ಕ್ರೀನ್ ಬಳಸಿ:
ಬಿಸಿಲಿನಲ್ಲಿ ಹೊರ ಹೋಗುವಾಗ ಚರ್ಮಕ್ಕೆ ಸೂರ್ಯನಿಂದ ಸಂರಕ್ಷಣೆ ನೀಡಲು ತಪ್ಪದೇ ಸನ್‌ಸ್ಕ್ರೀನ್(Sun screen) ಬಳಕೆ ಮಾಡಿ.
ಮೇಕಪ್‌ಗೂ ಮುನ್ನ:
ಕೆಲವರು ಹೆಚ್ಚು ಬೆವರುತ್ತಾರೆ. ಪರಿಣಾಮ, ಮೇಕಪ್ ಮಾಡಿದ ತಕ್ಷ ಣವೇ ಬೆವರಿನಿಂದ ಮೇಕಪ್ ಕರಗಿ ಮುಖದ ಅಂದ ಕ್ಷೀಣಿಸುತ್ತದೆ. ಅಂತಹವರು ಮೇಕಪ್ ಮಾಡುವ ಮುನ್ನ ಹೀಗೆ ಮಾಡಿ ನೋಡಿ. ಐಸ್ ಕ್ಯೂಬ್‌ನಿಂದ ಒಂದೆರೆಡು ನಿಮಿಷ ಮುಖಕ್ಕೆ ಮಸಾಜ್ ಮಾಡಿ. ಚರ್ಮ ಕೊಂಚ ಟೈಟಾಗುತ್ತದೆ. ನಂತರ ಮಾಡಿದ ಮೇಕಪ್ ಹೆಚ್ಚು ಸಮಯ ಉಳಿಯುತ್ತದೆ. ಇನ್ನು ಫೌಂಡೇಷನ್ ಕ್ರೀಂ ಸ್ವಲ್ಪ ತೆಳುವಾಗಿ ಮುಖಕ್ಕೆ ಹಚ್ಚುವುದರಿಂದ ಬೆವರನ್ನು ತಡೆಗಟ್ಟಬಹುದು. ಕಾಂಪ್ಯಾಕ್ಟ್ ಪೌಡರ್‌ಅನ್ನು ಕೊಂಚ ಕಡಿಮೆ ಬಳಸುವುದರಿಂದ ತ್ವಚೆಯ ರಂಧ್ರಗಳು ಮುಚ್ಚುವುದಿಲ್ಲ. ಸೆಕೆಯಾಗುವುದಿಲ್ಲ.
ಗ್ಲೊಸಿ ಲಿಪ್‌ಸ್ಟಿಕ್ ಬಳಸಿ:
ಗ್ಲೊಸಿ ಲಿಪ್ ಕ್ರಯಾನ್‌ಗಳು ಮುಖವನ್ನು ಬ್ರೈಟಾಗಿ ಬಿಂಬಿಸುತ್ತವೆ. ಇನ್ನು ಸಿಂಪಲ್ ಮೇಕಪ್‌ಗೆ ಮಾಡಿಕೊಳ್ಳುವವರು ಲಿಪ್ ಲೈನರ್ ಅಥವಾ ಲಿಪ್‌ಸ್ಟಿಕ್ ಗಾಢವಾಗಿ ಹಚ್ಚುವುದರಿಂದ ಮೇಕಪ್ ಹೆಚ್ಚು ಮಾಡದಿದ್ದರೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಬ್ಲಷ್ ಮಾಡಿ
ಹೆಚ್ಚು ಪೌಡರ್ ಬಳಸದೆ ಮೂಗಿನ ಭಾಗ ಗಲ್ಲದ ಮೇಲೆ ಬ್ಲಷ್ ಮಾಡಿ. ಇದು ವಧನವನ್ನು ಹೈಲೈಟಾಗಿಸುತ್ತದೆ.
ಐ ಮೇಕಪ್
ಕಣ್ಣಿಗೆ ಸ್ಮಡ್ಜ್ ಫ್ರೀ ಐ ಲೈನರ್ ಹಾಗೂ ಕಾಜಲ್ ಬಳಸಿ. ಆಗ ಬೆವರಿಗೆ ಐ ಮೇಕಪ್ ಹರಡದು. ಮಲ್ಟಿಪಲ್ ಕಲರ್ ಐ ಶ್ಯಾಡೋ ಹಚ್ಚುವುದನ್ನು ಅವಾಯ್ಡ್ ಮಾಡಿ. ಆಗ ಕಣ್ಣಿನ ಸುತ್ತಲಿನ ಮೇಕಪ್‌ಮಿಕ್ಸ್ ಆಗದು.
ಉರಿ ಬಿಸಿಲಿಗೆ ಮೈ ಒಡ್ಡದಿರಿ
ಎಲ್ಲದಕ್ಕಿಂತ ಹೆಚ್ಚಾಗಿ ಆದಷ್ಟೂ ಉರಿಬಿಸಿಲಿನಲ್ಲಿಓಡಾಟ ಕಡಿಮೆ ಮಾಡಿ. ಮುಖವನ್ನು ಬಿಸಿಲಿಗೆ ಒಡ್ಡಬೇಡಿ. ಆಯಿಲ್‌ಸಹಿತ ಇರುವ ಕ್ರೀಂ ಗಳನ್ನು ಬಳಸದಿರುವುದು ಸೂಕ್ತ.ಒಂದು ಪೌಡರ್ ಪಫ್ ಜತೆಯಲ್ಲಿಟ್ಟು ಕೊಳ್ಳುವುದು ಉತ್ತಮ. ಬೆವರಿದಾಗ ಪೌಡರ್ ಟಚ್ ನೀಡಬಹುದು.. ಅನಿವಾರ್ಯ ಎನಿಸಿದಾಗ ಛತ್ರಿ ಹಿಡಿದು ನಡೆದಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಭಾರತೀಯ ಸಂಸ್ಕೃತಿ ಬಿಂಬಿಸಿದ ಫ್ಯಾಷನ್ ಡಿಸೈನರ್ ಶೋ