ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ನೆಕ್ ಬಾಡಿಕಾನ್ ಡ್ರೆಸ್‌ಗಳು ಇದೀಗ ಯುವತಿಯರನ್ನು ಸವಾರಿ ಮಾಡತೊಡಗಿವೆ. ಹೌದು. ವೆಸ್ಟರ್ನ್ ಔಟ್‌ಫಿಟ್‌ನಲ್ಲಿ, ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿರುವ ಲಿಸ್ಟ್‌ನಲ್ಲಿ, ಇದೀಗ ಹೈ ಸ್ಟ್ರೀಟ್ ಫ್ಯಾಷನ್‌ನಲ್ಲಿರುವ (High Street Fashion) ಹೈ ನೆಕ್ ಬಾಡಿಕಾನ್ ಡ್ರೆಸ್‌ಗಳು ವೆರೈಟಿ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ.
ಹೈ ಸ್ಟ್ರೀಟ್ ಫ್ಯಾಷನ್‌ಗೆ ಸಾಥ್ ನೀಡುವ ಹೈ ನೆಕ್ ಬಾಡಿಕಾನ್ ಡ್ರೆಸ್
ನೋಡಲು ಸಖತ್ ಕ್ಲಾಸಿ ಹಾಗೂ ಹೈ ಫ್ಯಾಷನ್‌ಗೆ ಮ್ಯಾಚ್ ಆಗುವಂತೆ ಕಾಣುವ ಹೈ ನೆಕ್ ಬಾಡಿಕಾನ್ ಡ್ರೆಸ್‌ಗಳು ಸ್ಟ್ರೀಟ್ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿವೆ. ಮಾತ್ರವಲ್ಲ, ಜೆನ್ ಜಿ ಹುಡುಗಿಯರು ಮಾತ್ರವಲ್ಲ, ಕಾರ್ಪೊರೇಟ್ ವರ್ಗದ ಮಾನಿನಿಯರ ವಾರ್ಡ್ರೋಬ್ ಅನ್ನು ಸೇರಿವೆ. ನೋಡಲು ತೀರಾ ಸಿಂಪಲ್ ಎಂದೆನಿಸುವ ಈ ಔಟ್‌ಪಿಟ್ ಮೊದಲಿನಿಂದಲೂ ಇತ್ತಾದರೂ ಹಾಲಿವುಡ್ –ಬಾಲಿವುಡ್ ಸೆಲೆಬ್ರೆಟಿಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಾನಾ ವಿದೇಶಿ ಬ್ರಾಂಡ್‌ಗಳು ನಮ್ಮ ರಾಷ್ಟ್ರಕ್ಕೆ ಕಾಲಿಟ್ಟ ನಂತರ ಇಲ್ಲಿಯೂ ಅತಿ ಸುಲಭವಾಗಿ ದೊರೆಯಲಾರಂಭಿಸಿತು. ಅದರಲ್ಲೂ ಕ್ವಾಲಿಟಿ ಹಾಗು ಡಿಸೈನ್‌ಗಳು ಕೂಡ ಬದಲಾಗದೇ ಇದ್ದದ್ದು, ಇಲ್ಲಿನ ಹೈ ಫ್ಯಾಷನ್ ಇಷ್ಟಪಡುವ ಹುಡುಗಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ. ಅವರ ಪ್ರಕಾರ, ಹೈ ಸ್ಟ್ರೀಟ್ ಫ್ಯಾಷನ್ ಕೂಡ ವಿದೇಶದ್ದು, ಇದೀಗ ಇಲ್ಲಿಯವರು ಇದನ್ನು ಫಾಲೋ ಮಾಡಲು ಆರಂಭಿಸಿದ್ದಾರೆ ಎನ್ನುತ್ತಾರೆ.
ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ?
ವೆಲ್ವೆಟ್ ಸ್ಟ್ರೈಪ್ಸ್, ಸಾಫ್ಟ್ ಫ್ಯಾಬ್ರಿಕ್ ಬಾಡಿಕಾನ್ ಫ್ರಾಕ್, ಟೈಟ್ ಫಿಟ್ಟಿಂಗ್ ಅನಿಮಲ್ ಪ್ರಿಂಟ್ ಡ್ರೆಸ್, ಸ್ಟ್ರೆಚಬಲ್ ಬಾಡಿಕಾನ್ ಫುಲ್ ಸ್ಲೀವ್ ಡ್ರೆಸ್, ಟರ್ಟಲ್ ನೆಕ್, ಹೈ ನೆಕ್ ಬಾಡಿಕಾನ್, ಪಾರ್ಟಿಗೆ ಧರಿಸಬಹುದಾದ ಸಿಕ್ವೀನ್ಸ್, ಶಿಮ್ಮರ್ ಫ್ಯಾಬ್ರಿಕ್‌ನ ಬಾಡಿಕಾನ್ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇಲ್ಲಿ ಸ್ಥಳೀಯ ಹುಡುಗಿಯರು ಕೆಲವರು ಇದರೊಂದಿಗೆ ಸ್ಟಾಕಿನ್ಸ್ ಧರಿಸುತ್ತಾರೆ ಎನ್ನುತ್ತಾರೆ ವೆಸ್ಟೆರ್ನ್ ಔಟ್‌ಫಿಟ್ ಎಕ್ಸ್‌ಪರ್ಟ್ ಸಿಯಾ.
ಹೈ ನೆಕ್ ಬಾಡಿಕಾನ್ ಡ್ರೆಸ್ ಧರಿಸುವವರ ಗಮನಕ್ಕೆ
- ಬಾಡಿ ಮಾಸ್ ಇಂಡೆಕ್ಸ್ಗೆ ಹೊಂದುವಂತಹದ್ದನ್ನು ಸೆಲೆಕ್ಟ್ ಮಾಡಿ.
- ಸ್ಲಿಮ್ ಇರುವವರಿಗೆ ಧರಿಸಲು ಯಾವುದಾದರೂ ಓಕೆ.
- ಟಮ್ಮಿ ಹೆಚ್ಚಿರುವವರಿಗೆ ಈ ಔಟ್‌ಫಿಟ್ ಸೂಕ್ತವಲ್ಲ.
- ಪಾರ್ಟಿಗೆ ಹೇಳಿ ಮಾಡಿಸಿದ ಔಟ್‌ಫಿಟ್ ಇದು.
- ಕಾಲನ್ನು ಎಕ್ಸ್ಪೋಸ್ ಮಾಡುವ ಇರಾದೆ ಇರದಿದ್ದಲ್ಲಿ ಮ್ಯಾಚಿಂಗ್ ಸ್ಟಾಕಿನ್ಸ್ ಧರಿಸಬಹುದು.
- ಫ್ಯಾಷನ್ ಜ್ಯುವೆಲರಿಗಳು ಈ ಉಡುಪಿಗೆ ಹೊಂದುತ್ತವೆ.
- ಅಪ್ಪಿ ತಪ್ಪಿಯೂ ಟ್ರೆಡಿಷನ್ ಸಿಂಗಾರ ಬೇಡ.
- (ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Celebrity Travel Fashion: ಬಿಂದಾಸ್ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟ ಆರ್ ಜೆ ರಾಜೇಶ್