Site icon Vistara News

Holi Dresscode: ಸಂಭ್ರಮದ ಹೋಳಿ ಪಾರ್ಟಿಗೂ ಉಂಟು ಡ್ರೆಸ್‌ಕೋಡ್‌

Holi Dresscode

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನೀವು ಭಾಗವಹಿಸುವ ಹೋಳಿ ಪಾರ್ಟಿಗೆ (Holi Dresscode) ತಕ್ಕಂತೆ ಧರಿಸುವ ಉಡುಪುಗಳು ಮ್ಯಾಚ್‌ ಆಗಬೇಕು ಹಾಗೂ ಡ್ರೆಸ್‌ಕೋಡ್‌ ರೂಲ್ಸ್‌ ಪಾಲಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌. ಹೌದು, ಹೋಳಿ ಪಾರ್ಟಿಯ ಜೊತೆಗೆ ಹೋಳಿಯಾಟವನ್ನು ಎಂಜಾಯ್‌ ಮಾಡಬೇಕಿದ್ದಲ್ಲಿ ಕಂಫರ್ಟಬಲ್‌ ಎಂದೆನಿಸುವ ಡ್ರೆಸ್‌ಕೋಡ್‌ ಪಾಲಿಸುವುದು ಅತ್ಯಗತ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಪಾರ್ಟಿಯ ಥೀಮ್‌ಗೆ ತಕ್ಕಂತೆ ಡ್ರೆಸ್‌ಕೋಡ್‌

ಒಂದೊಂದು ಹೋಳಿ ಪಾರ್ಟಿಯಲ್ಲೂ ಒಂದೊಂದು ಬಗೆಯ ಡ್ರೆಸ್‌ಕೋಡ್‌ ಇರುತ್ತದೆ. ಬಹುತೇಕ ಹೋಳಿ ಪಾರ್ಟಿಗಳಲ್ಲಿ ಶ್ವೇತ ವರ್ಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕೆಲವಲ್ಲಿ ಸಿಂಪಲ್‌ ಔಟ್‌ಫಿಟ್‌ ಹಾಗೂ ಕ್ಯಾಶುವಲ್‌ ವೇರ್‌ಗೆ ಆದ್ಯತೆ ನೀಡುತ್ತಾರೆ. ಇನ್ನು ಕೆಲವಲ್ಲಿ ಎಥ್ನಿಕ್‌ ಉಡುಪು ಧರಿಸಿ ಹೋಗಬೇಕಾಗುತ್ತದೆ. ಹಾಗಾಗಿ ಮೊದಲೇ ಈ ಬಗ್ಗೆ ತಿಳಿದುಕೊಂಡು ಧರಿಸಿ ಹೋಗುವುದು ಉತ್ತಮ.

ಶ್ವೇತವರ್ಣದ ಉಡುಪಿನ ಗಮ್ಮತ್ತು

ಶ್ವೇತ ವರ್ಣದ ಉಡುಪನ್ನು ಹೋಳಿ ಪಾರ್ಟಿಗೆ ಮಹಿಳೆಯರು ಧರಿಸುವುದಾದಲ್ಲಿ ಆದಷ್ಟೂ ಫ್ಯಾಬ್ರಿಕ್‌ ನೋಡಿ ಖರೀದಿಸಿ. ಒಮ್ಮೆ ಹೋಳಿ ಪಾರ್ಟಿಗೆ ಧರಿಸಿದ ಶ್ವೇತ ವರ್ಣದ ಉಡುಪನ್ನು ಮತ್ತೊಮ್ಮೆ ಧರಿಸಲಾಗದು. ಹಾಗಾಗಿ ಆದಷ್ಟೂ ಹೆಚ್ಚು ಬೆಲೆಯದ್ದನ್ನು ಕೊಂಡು ಧರಿಸಬೇಡಿ. ಪಾರದರ್ಶಕವಾಗಿದ್ದಲ್ಲಿ ಇನ್ನರ್‌ ಧರಿಸುವುದು ಉತ್ತಮ. ಸಲ್ವಾರ್‌ ಕಮೀಝ್‌ ಹಾಗೂ ಕುರ್ತಾ ಕೂಡ ಧರಿಸಬಹುದು. ಇನ್ನು ಪುರುಷರಾದಲ್ಲಿ ಇದ್ಯಾವ ಯೋಚನೆಯೂ ಇರದು. ಯಾವುದೇ ವೈಟ್‌ ಟೀ ಶರ್ಟ್, ಕುರ್ತಾ ಜೀನ್ಸ್‌ ಪ್ಯಾಂಟ್‌ನೊಂದಿಗೆ ಧರಿಸಬಹುದು.

ಗ್ರೂಪ್‌ ಡ್ರೆಸ್‌ಕೋಡ್‌

ಹೋಳಿ ಪಾರ್ಟಿಯಲ್ಲಿ ಗ್ರೂಪ್‌ ಡ್ರೆಸ್‌ಕೋಡ್‌ಗೆ ಆದ್ಯತೆ. ಹಾಗಾಗಿ ಎಲ್ಲರಿಗೂ ಯೂನಿಫಾರ್ಮ್‌ನಂತಹ ಡ್ರೆಸ್‌ಕೋಡ್‌ ನಿಗದಿಪಡಿಸಲಾಗಿರುತ್ತದೆ. ಪಾರ್ಟಿಗೆ ಹೋಗುವ ಮುನ್ನ ಈ ಬಗ್ಗೆ ತಿಳಿದುಕೊಂಡು ಪ್ಲಾನ್‌ ಮಾಡಿ. ಉಡುಪನ್ನು ಗ್ರೂಪ್‌ನೊಂದಿಗೆ ಮ್ಯಾಚ್‌ ಮಾಡಿ.

ಡಿಜೆ ಹಾಡಿಗೆ ಹೆಜ್ಜೆ ಹಾಕಲು ಔಟ್‌ಫಿಟ್‌ ಕಂಫರ್ಟಬಲ್‌ ಆಗಿರಲಿ

ಹೋಳಿಯ ರಂಗಿನಾಟದಲ್ಲಿ ಪಾಲ್ಗೊಳ್ಳುವವರ ಜೋಷ್‌ ಹೆಚ್ಚಿಸಲು ಡಿಜೆ ಲೈವ್‌ ಹಾಗೂ ಮ್ಯೂಸಿಕ್‌ ಸಾಥ್‌ ಎಲ್ಲೆಡೆ ಆಯೋಜನೆಗೊಂಡಿರುತ್ತವೆ. ಪಾರ್ಟಿಯ ಮ್ಯೂಸಿಕ್‌ಗೆ ಹೆಜ್ಜೆ ಹಾಕಲು ಕಂಫರ್ಟಬಲ್‌ ಆಗಿರುವಂತಹ ಡ್ರೆಸ್‌ಕೋಡ್‌ ನಿಮ್ಮದಾಗಿರಲಿ. ಮೊದಲೇ ಉಡುಪನ್ನು ಧರಿಸಿ, ಡಾನ್ಸ್‌ ಮಾಡಲು ಸಾಧ್ಯವೇ ಎಂಬುದನ್ನು ಪ್ರಾಕ್ಟೀಸ್‌ ಟ್ರಯಲ್‌ ಮಾಡಿ, ನೋಡಿ ಎನ್ನುತ್ತಾರೆ ಸ್ಟೈಲಿಸ್ಟ್‌.

ಹೋಳಿ ಆಚರಣೆಗೆ ಸಿಂಪಲ್‌ ಡ್ರೆಸ್‌ಕೋಡ್‌ ಟಿಪ್ಸ್‌

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holi Sarees Fashion: ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಲಗ್ಗೆ ಇಟ್ಟ ರಂಗು ರಂಗಿನ ಪ್ರಿಂಟೆಡ್‌ ಸೀರೆಗಳು

Exit mobile version