ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಮಾನ್ಸೂನ್‌ನ ಸಂಡೇ ಔಟಿಂಗ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಡಿಕ್ಲೇರ್ ಆಗಿವೆ. ಆರಾಮ ಎನಿಸುವ ಈ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಯುವಕ-ಯುವತಿಯರು ಸೈ ಎಂದಿದ್ದಾರೆ.
ಸಿಂಪಲ್ ಸ್ಟೇಟ್‌ಮೆಂಟ್ ಟೀ ಶರ್ಟ್, ತ್ರೀ ಫೋರ್ತ್ ಪ್ಯಾಂಟ್, ಇಲ್ಲವೇ ಬರ್ಮಡಾ, ಅದರ ಮೇಲೊಂದು ಫಂಕಿ ಜಾಕೆಟ್, ಬೆನ್ನ ಹಿಂದೊಂದು ಬ್ಯಾಕ್‌ಪ್ಯಾಕ್ ಹುಡುಗರ ಸಿಂಪಲ್ ಸಂಡೇ ಔಟಿಂಗ್ ಫ್ಯಾಷನ್‌ಗೆ ಸೇರಿದೆ. ಇನ್ನು ಹುಡುಗಿಯರ ಫ್ಯಾಷನ್‌ನಲ್ಲಿ ಟ್ರೆಂಡಿ ಟಾಪ್, ಟೀ ಶರ್ಟ್, ಕೇಪ್ರಿಸ್, ಫ್ಲೋರಲ್ ಶಾರ್ಟ್ ಫ್ರಾಕ್, ಕಟೌಟ್ ಡ್ರೆಸ್, ಶಾರ್ಟ್ ಕುರ್ತಾ, ಡೆನೀಮ್ ಲೆಗ್ಗಿಂಗ್ಸ್-ಟ್ರೆಗ್ಗಿಂಗ್ಸ್, ಜತೆಗೆ ನೇತಾಡುವ ಸ್ಲಿಂಗ್ ಬ್ಯಾಗ್ ಸೇರಿವೆ.
“ಸಂಡೇ ಔಟಿಂಗ್ ಫ್ಯಾಷನ್ ಕಾನ್ಸೆಪ್ಟ್ ಇಂದು ಯಾವ ಮಟ್ಟಿಗೆ ಪಾಪ್ಯುಲರ್ ಆಗಿದೆ ಎಂದರೆ ಒಂದು ದಿನ ರಜೆ ಸಿಕ್ಕರೇ ಸಾಕು, ಬಿಂದಾಸ್ ಔಟ್‌ಫಿಟ್‌ನಲ್ಲಿ ಔಟಿಂಗ್‌ಗೆ ಹಾರುವ ಸಂಭ್ರಮ ಎಲ್ಲರದ್ದು” ಎನ್ನುತ್ತಾರೆ ಮಾಡೆಲ್, ನಟಿ ಚಂದನಾ.
ಫಾರ್ಮಲ್ ಉಡುಪು ಸೈಡಿಗಿಡಿ
ನೀವು ಪ್ರತಿದಿನ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಧರಿಸುವ ಉಡುಪುಗಳನ್ನು ಧರಿಸಿದಲ್ಲಿ 100 ಪರ್ಸೆಂಟ್ ಎಂಜಾಯ್ ಮಾಡಲಾಗುವುದಿಲ್ಲ. ಸೋ, ತಿರುಗಾಡಲು ಆರಾಮದಾಯಕವೆನಿಸುವ ಹಾಗೂ ಪೋಟೋಗಳಲ್ಲೂಆಕರ್ಷಕವಾಗಿ ಕಾಣುವಂತಹ ಟ್ರೆಂಡಿ ಉಡುಪುಗಳನ್ನು ಧರಿಸಿ ಹೊರಡಿ.
ನೆನಪಿರಲಿ ಯಾವತ್ತೂ ಪ್ರೊಫೆಷನಲ್ ಲುಕ್ ಔಟಿಂಗ್ ಫ್ಯಾಷನ್‌ಗೆ ಹೊಂದುವುದಿಲ್ಲ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ರೈನಾ.
ಬಿಂದಾಸ್ ಔಟ್‌ಫಿಟ್ಸ್
ವಿಶೇಷವಾಗಿ ಔಟಿಂಗ್‌ಗೆ ಧರಿಸುವಂತಹ ನಾನಾ ಬಗೆಯ ಉಡುಪುಗಳು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತಿರುತ್ತವೆ. ಈ ಸೀಸನ್‌ನಲ್ಲಿ ಕಲರ್‌ಫುಲ್ ತ್ರಿ ಫೋರ್ತ್ ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್ ಹಾಗೂ ಸ್ಟ್ರೈಪ್ಸ್, ಜೆಮೆಟ್ರಿಕಲ್ ಹಾಗೂ ಫ್ಲೋರಲ್ ವಿನ್ಯಾಸದ ಶಾರ್ಟ್, ಲಾಂಗ್ ಟಾಪ್, ಕಟೌಟ್, ಸ್ಲಿಮ್ ಫಿಟ್ ಶರ್ಟ್ ಡ್ರೆಸ್, ಜಾಕೆಟ್ ಡ್ರೆಸ್ ಸೇರಿದಂತೆ ನಾನಾ ಬಗೆಯವು ಟ್ರೆಂಡಿಯಾಗಿವೆ. ಇನ್ನು ಸೆಮಿ ಫಾರ್ಮಲ್ಸ್‌ನಲ್ಲಿ ಸ್ಲಿಟ್ ಶಾರ್ಟ್ ಕುರ್ತಾ, ಅಸ್ಸೆಮ್ಮಿಟ್ರಿಕಲ್ ಉಡುಪುಗಳು, ಲೆಯರ್ ಲುಕ್ ನೀಡುವ ಕಾರ್ಡಿಗಾನ್ಸ್ ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್.
ಯುವಕರ ಫಂಕಿ ಔಟಿಂಗ್ ಲುಕ್
ಔಟಿಂಗ್ ಹೋಗುವಾಗ ಯುವಕರನ್ನು ಫಾರ್ಮಲ್ ಲುಕ್‌ನಲ್ಲಿನೋಡಲು ಸಾಧ್ಯವೇ ಇಲ್ಲ. ಕ್ಯಾಶುವಲ್ಸ್ ಧರಿಸುವ ಅಭ್ಯಾಸವಿಲ್ಲದ ಪುರುಷರು ಆದಷ್ಟೂ ಫುಲ್‌ಸ್ಲೀವ್ ಶರ್ಟ್ ಹಾಗೂ ಚೆಕ್ಸ್ ಶರ್ಟ್ ಆವಾಯ್ಡ್ ಮಾಡಬೇಕು. ಟೀ ಶರ್ಟ್, ಬರ್ಮಡಾ ಇಲ್ಲವೇ ಡೆನೀಮ್ ಪ್ಯಾಂಟ್‌ಗೆ ಮೊರೆ ಹೋಗಬೇಕು. ಫರ್, ಡೆನೀಮ್, ಬಾಂಬರ್ ಲೈಟ್‌ವೇಟ್ ಜಾಕೆಟ್‌ಗಳನ್ನು ಲೇಯರ್ ಲುಕ್‌ಗಾಗಿ ಬಳಸಬಹುದು.
ಸಂಡೇ ಔಟಿಂಗ್ ಲುಕ್‌ಗೆ ಟಿಪ್ಸ್
- ಸಂಡೇ ಔಟಿಂಗ್ ಉಡುಪುಗಳು ಹೆವಿಯಾಗಿರಬಾರದು, ಸಿಂಪಲ್ಲಾಗಿರಬೇಕು.
- ಧಾರ್ಮಿಕ ಸ್ಥಳಗಳಿಗೆ ವಿಸಿಟ್ ಹಾಕುವುದಾದರೆ ಗ್ಲಾಮರ್ಲೆಸ್ ಆಗಿರಬೇಕು. ಕುರ್ತಾ ಇಲ್ಲವೇ ಸೆಮಿ ಫಾರ್ಮಲ್ ಸೆಲ್ವಾರ್ ಕಮೀಝ್ ಉತ್ತಮ. ಹುಡುಗರಿಗೆ ಕುರ್ತಾ ಜೀನ್ಸ್ ಓಕೆ.
- ಔಟಿಂಗ್‌ಗೆ ಆದಷ್ಟೂ ಟ್ರೆಡಿಷನಲ್ ಲುಕ್ ಆವಾಯ್ಡ್ ಮಾಡಿ. ಯಾವುದೇ ಕಾರಣಕ್ಕೂ ಗಾಗ್ರ, ಲೆಹೆಂಗಾ, ಸೀರೆ ಧರಿಸುವುದು ತರವಲ್ಲ.
- ಬೆಲೆಬಾಳುವ ಜ್ಯುವೆಲರಿಗಳನ್ನು ಧರಿಸುವುದು ಸೂಕ್ತ ಅಲ್ಲ.
- ಕುಳಿತುಕೊಳ್ಳಲು, ನಡೆದಾಡಲು ಸಮಸ್ಯೆಯುಂಟಾಗುವ ಉಡುಪುಗಳನ್ನು ಧರಿಸಕೂಡದು. ಧರಿಸುವ ಉಡುಪು ಕಂಫರ್ಟಬಲ್ ಆಗಿರಲಿ.
- ಹೈ ಹೀಲ್ಸ್ ಬಳಕೆ ಬೇಡ. ಹೇರ್ಸ್ಟೈಲ್ ಕೂಡ ಫಂಕಿಯಾಗಿರಲಿ.
………………
ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್ ಸೆನ್ಸ್