ಶೀಲಾ ಸಿ. ಶೆಟ್ಟಿ, ನಟಿ
ಬಾಲಿವುಡ್ ನಟಿ ಪೂಜಾ ಹೆಗ್ಡೆಗೆ (Star Fashion) ಹಾಫ್ ಸ್ಯಾರಿ ಮೇಲೆ ಅವರಿಗೆ ಲವ್ ಆಗಿದೆಯಂತೆ. ಹೌದು, ಉಡುಪಿಯ ಪರಿಸರದಲ್ಲಿ ಪಕ್ಕಾ ಸೌತ್ ಇಂಡಿಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರು ಲಂಗ-ದಾವಣಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಆಕರ್ಷಕವಾಗಿ ಕಾಣಿಸುತ್ತಿರುವ ಅವರಂತೆ ಕಾಣಿಸಲು ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಪೂಜಾ ಹೆಗ್ಡೆ ಹಾಫ್ ಸೀರೆ ಲವ್
ಇನ್ನು, ಪೂಜಾ ಹೆಗ್ಡೆಯವರ ಬಗ್ಗೆ ಹೇಳುವುದಾದಲ್ಲಿ, ಮೂಲತಃ ಸೌತ್ ಕೆನರಾದವರಾದ ಇವರು ಕಳೆದ ಬಾರಿಯೂ ಕೂಡ ತಮ್ಮ ಸಹೋದರನ ಮದುವೆ ಸಂದರ್ಭದಲ್ಲಿ ಕುಟುಂಬದ ಮದುವೆ ಸಮಾರಂಭದಲ್ಲಿ ಸೀರೆ ಹಾಗೂ ಒಂದೊಂದು ಔಟ್‌ಫಿಟ್‌ಗಳ ಫೋಟೋಗಳನ್ನು ಅಪ್‌ಡೇಟ್ ಮಾಡಿದ್ದರು. ದಕ್ಷಿಣ ಭಾರತೀಯರ ಔಟ್‌ಫಿಟ್‌ಗಳ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಉಡುಪಿ ಹಾಗೂ ಮಂಗಳೂರಿನ ಸುತ್ತಮುತ್ತಾ ಭೇಟಿ ನೀಡಿದಾಗಲೆಲ್ಲಾ ಎಥ್ನಿಕ್ ಹಾಗೂ ದೇಸಿ ಲುಕ್ ನೀಡುವ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಫಾಲೋವರ್ಸ್ ಕೂಡ ಪ್ರತಿ ಬಾರಿಯೂ ಪೂಜಾ, ನಿಮ್ಮಂತೆ ನಾವು ಕಾಣಿಸಿಕೊಳ್ಳುವುದು ಹೇಗೆ? ಟಿಪ್ಸ್ ನೀಡಿ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಎಕ್ಸ್ಪಟ್ರ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಪೂಜಾ ಹೆಗ್ಡೆಯಂತೆ ಕಾಣುವುದು ಹೇಗೆ?
ಹಾಫ್ ಸೀರೆಯಲ್ಲಿ ಪೂಜಾ ಹೆಗ್ಡೆಯಂತೆ ನೀವೂ ಕೂಡ ಕಾಣಿಸಬಹುದು. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಬೇಕು. ಅಂದಹಾಗೆ, ಈ ಲುಕ್‌ನಲ್ಲಿ ಪೂಜಾ ಅವರು ಒಂದಿಷ್ಟು ಫ್ಯೂಶನ್ ಸ್ಟೈಲಿಂಗ್ ಮಾಡಿದ್ದಾರೆ. ಟ್ರೆಡಿಷನಲ್ ಜಡೆ ಬದಲು ಬನ್ ಹೇರ್‌ಸ್ಟೈಲ್ ಮಾಡಿದ್ದು, ಅದಕ್ಕೆ ನ್ಯಾಚುರಲ್ ಬೇಬಿ ಪಿಂಕ್ ರೋಸ್‌ಗಳನ್ನು ಸೈಡಿಗೆ ಮುಡಿದಿದ್ದಾರೆ. ಇದು ಲುಕ್ ಡಿಫರೆಂಟ್ ಆಗಿಸಿದೆ. ಹೀಗೆಯೇ ಹೇರ್‌ಸ್ಟೈಲ್ ಫಾಲೋ ಮಾಡುವುದು ಉತ್ತಮ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪಟ್ರ್ಸ್ .
ಡಿಫರೆಂಟ್ ಶೇಡ್‌ನ ಹಾಫ್ ಸೀರೆ ಸೆಟ್
ಪೂಜಾರ ಹಸಿರು ಕಲರ್‌ನ ಬ್ಲೌಸ್‌ಗೆ ಬೇಬಿ ಪಿಂಕ್ ಶೇಡ್‌ನ ಲಂಗ, ಇನ್ನು ದಾವಣಿ ಕೂಡ ಕೊಂಚ ಡಿಫರೆಂಟ್ ಗ್ರೀನ್ ಶೇಡ್, ಒಂದಕ್ಕೊಂದು ಯಾವುದೂ ಇಲ್ಲಿ ಮ್ಯಾಚಿಂಗ್ ಇಲ್ಲ. ಸೋ, ನೀವೇನಾದರೂ ಪೂಜಾರಂತೆ ಕಾಣಿಸಬೇಕಿದ್ದಲ್ಲಿ ಆದಷ್ಟೂ ಕಾಂಟ್ರಸ್ಟ್ ಶೇಡ್‌ನ ಬಾರ್ಡರ್ ಇರುವಂತಹ ದಾವಣಿ ಹಾಗೂ ಬ್ಲೌಸ್ ಚೂಸ್ ಮಾಡಿ. ಅವರಂತೆಯೇ ನಾರ್ತ್ ಇಂಡಿಯನ್ ಶೈಲಿಯ ಚೋಕರ್, ಕಡ, ಫಿಂಗರ್ ರಿಂಗ್ ಹಾಗೂ ಇಯರಿಂಗ್ಸ್ ಆಯ್ಕೆ ಮಾಡಿ ಧರಿಸಿ. ಕಣ್ಣಿಗೆ ಕಾಡಿಗೆ, ತಿಳಿ ಶೆಡ್‌ನ ಲಿಪ್‌ಸ್ಟಿಕ್ ಸೇರಿದಂತೆ ಸಿಂಪಲ್ ಮೇಕಪ್, ಹಣೆಗೊಂದು ಬಿಂದಿ ಇಟ್ಟಲ್ಲಿ ಸೌತ್ ಇಂಡಿಯನ್ ಗರ್ಲ್ ಲುಕ್ ದೊರೆಯುತ್ತದೆ ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ನೀಳಾ ಶರ್ಮಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಬೆಂಗಳೂರಿನ ಚುಮು ಚುಮು ಚಳಿಗೆ ಬದಲಾಯಿತು ನಟ ಶೈನ್ ಶೆಟ್ಟಿ ವಿಂಟರ್ ಫ್ಯಾಷನ್!