Site icon Vistara News

Hula Hoop: ಹೊಸ ಟ್ರೆಂಡ್‌ ಹುಟ್ಟುಹಾಕಿದ ಹೂಲಾ ಹೂಪ್‌ ರ್‍ಯಾಂಪ್‌ ವಾಕ್‌

ಹೂಲಾ ಹೂಪ್‌ ವಾಕ್‌

ಶೀಲಾ ಸಿ. ಶೆಟ್ಟಿ ಬೆಂಗಳೂರು

ರ್‍ಯಾಂಪ್‌ ಮೇಲೆ ಹೂಲಾ ಹೂಪ್‌ನೊಂದಿಗೆ Hula Hoop ಮಾಡೆಲ್ಸ್‌ ವಾಕ್‌ ಮಾಡುವ ಟ್ರೆಂಡ್‌ಗೆ ಉದ್ಯಾನನಗರಿ ಸಾಕ್ಷಿಯಾಯಿತು. ಭಾರತೀಯ ಮಾಲ್‌ನಲ್ಲಿ ನಡೆದ ಕಿಡ್ಸ್‌ ಟ್ಯಾಲೆಂಟ್‌ ಹಂಟ್‌ ಫ್ಯಾಷನ್‌ ಶೋನಲ್ಲಿ ಹುಡುಗಿಯರು ಹೂಲಾ ಹೂಪ್‌ನೊಂದಿಗೆ ಹೆಜ್ಜೆ ಹಾಕುತ್ತಾ ಡಿಫರೆಂಟ್‌ ಆಗಿ ರ್‍ಯಾಂಪ್‌ ವಾಕ್‌ ಮಾಡಿದ್ದು ನೋಡುಗರ ಹುಬ್ಬೇರಿಸಿತು.

ನೋಡಲು ವಿಭಿನ್ನವಾಗಿರುವ ಈ ಕಾನ್ಸೆಪ್ಟ್‌ ಇತ್ತೀಚಿನ ರ್‍ಯಾಂಪ್‌ನ ಪ್ರಯೋಗಾತ್ಮಕ ವಾಕ್‌ನಲ್ಲಿ ಸೇರಿದೆ. ಅಂದಹಾಗೆ, ಎಲ್ಲರೂ ಈ ಹೂಲಾ ಹೂಪ್‌ನೊಂದಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ! ಇದು ತುಸು ಕಷ್ಟವೇ ಎನ್ನುತ್ತಾರೆ ಈ ಫ್ಯಾಷನ್‌ನ ಶೋ ಆಯೋಜಿಸಿದ ಜಾಸ್‌ ಸ್ಟುಡಿಯೋದವರು. ಅದರಲ್ಲೂ ಆಯ್ದ ಹುಡುಗಿಯರು ಇದರೊಂದಿಗೆ ಹೆಜ್ಜೆ ಹಾಕಿದ್ದು ಸಾಧನೆಯೇ ಸರಿ ಎಂಬುದು ಅವರ ಮಾತು. ಇದಕ್ಕಾಗಿ ಸಾಕಷ್ಟು ಅಭ್ಯಾಸ ಬೇಕು. ಇದರೊಂದಿಗೆ ನಡೆಯುವುದು ಇಲ್ಲವೇ ಡಾನ್ಸ್‌ ಮಾಡುವುದನ್ನು ಮೊದಲೇ ಅಭ್ಯಾಸ ಮಾಡಿರಬೇಕು ಎನ್ನುತ್ತಾರೆ ಶೋ ಡೈರೆಕ್ಟರ್ಸ್ ಜ್ಯೋತ್ಸ್ನಾ ಹಾಗೂ ಶಬರೀಸ್‌.

ಹೂಲಾ ಹೂಪ್‌ ವಾಕ್‌

ಏನಿದು ಹೂಲಾ ಹೂಪ್‌ ವಾಕ್‌?

ಗಾಳಿಯಲ್ಲಿ ಹೂಪ್‌ ಎಸೆದು ತಲೆಯ ಮೇಲಿನಿಂದ ಮೈಯೊಳಗೆ ನುಗ್ಗಿಸಿ, ಇಡೀ ಬೆಲ್ಲಿ ಹಾಗೂ ದೇಹವನ್ನು ಸುತ್ತಿಸುತ್ತಾ ನಡೆಯುವುದೇ ಹೂಲಾ ಹೂಪ್‌ ವಾಕ್‌. ಅಂದ ಹಾಗೆ ಹವಾಯಿ ದ್ವೀಪದಲ್ಲಿ ಹೂಲಾ ನೃತ್ಯದೊಂದಿಗೆ ಹೂಪ್‌ ಜತೆಗೆ ಹೆಜ್ಜೆ ಹಾಕುತ್ತಿದ್ದದ್ದರಿಂದ ಇದಕ್ಕೆ ಈ ಹೆಸರು ಬಂದಿತೆನ್ನಲಾಗಿದೆ. ಜಿಮ್‌ನಲ್ಲಿ ಬಳಸಲಾಗುತ್ತಿದ್ದ ಹೂಲಾ ಹೂಪ್‌ ಕಾಲಕಳೆದಂತೆ ಕ್ರೀಡೆಯೊಳಗೂ ಸೇರಿದೆ. ಕೆಲವರು ಇದನ್ನು ಇದೊಂದು ಕಲೆ ಎನ್ನುತ್ತಾರೆ.

“ಹೂಲಾ ಹೂಪ್‌ನೊಂದಿಗೆ ಮಾಡೆಲ್‌ಗಳಂತೆ ಹೆಜ್ಜೆ ಹಾಕುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ಕೊಂಚ ತರಬೇತಿ ಪಡೆಯಬೇಕಾಯಿತು. ಇದಕ್ಕಾಗಿ ಫ್ಯಾಷನ್‌ ಕೊರಿಯಾಗ್ರಾಫರ್‌ಗಳು ಕೂಡ ಸಹಾಯ ಮಾಡಿದರು. ಎರಡೂ ಒಟ್ಟೊಟ್ಟಿಗೆ ಮಾಡುವುದು ನಮ್ಮ ಗುರಿಯಾಗಿತ್ತು” ಎನ್ನುತ್ತಾರೆ ಮಾಡೆಲ್‌ಗಳು.

ಹೂಲಾ ಹೂಪ್‌ ಟ್ರೈ ಮಾಡುವ ಮುನ್ನ..

ಹೂಲಾ ಹೂಪ್‌ ಕಲಿತಿರುವುದು ಅತ್ಯಗತ್ಯ. ಇನ್ನು ರ್‍ಯಾಂಪ್‌ನಲ್ಲಿ ಹೆಜ್ಜೆ ಹಾಕುವ ಮುನ್ನ ರ್‍ಯಾಂಪ್‌ನ ಮಾರ್ಗ ಎಷ್ಟಿದೆ? ಎಲ್ಲಿಯ ತನಕ ಹೆಜ್ಜೆ ಹಾಕಬೇಕು. ರ್‍ಯಾಂಪ್‌ನಲ್ಲಿ ತಿರುಗುವ ಮುನ್ನ ಕೊನೆಯ ಭಾಗ ಎಲ್ಲಿದೆ ಎಂಬುದನ್ನು ಅರಿತು ಮೊದಲೇ ನಡೆದು ಪ್ರಾಕ್ಟೀಸ್‌ ಮಾಡಿರಬೇಕು ಎಂದು ಸಲಹೆ ನೀಡುತ್ತಾರೆ ಫ್ಯಾಷನ್‌ ಕೊರಿಯಾಗ್ರಾಫರ್‌ ಸುಜೇಶ್‌.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| ನನಗೆ ನನ್ನದೇ ಆದ ಫ್ಯಾಷನ್ ರೂಲ್ಸ್‌ ಇದೆ!

Exit mobile version