ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡಿಯಾ ಕೌಚುರ್ ವೀಕ್ ಹಾಗೂ ಎಫ್‌ಡಿಐ ಸಂಯೋಜನೆಯಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್‌ನಲ್ಲಿ (India Couture Week) ಡಿಸೈನರ್ ಸುನೀತ್ ವರ್ಮಾ ಅವರ ಭಾರತೀಯ ಕಲಾತ್ಮಕ ವಿನ್ಯಾಸವನ್ನೊಳಗೊಂಡ ಎಥ್ನಿಕ್ ಡಿಸೈನರ್‌ವೇರ್‌ಗಳು ಫ್ಯಾಷನ್ ಪ್ರಿಯರನ್ನು ಸಮ್ಮೋಹನಗೊಳಿಸಿದ್ದವು. ಅಷ್ಟು, ಮಾತ್ರವಲ್ಲ, ನೋಡುತ್ತಿದ್ದರೇ, ಇಂಡಿಯನ್ ರಾಯಲ್ ಔಟ್‌ಫಿಟ್‌ಗಳನ್ನು ನೆನಪಿಗೆ ತರುವಂತಿದ್ದವು.
ಈಗಾಗಲೇ ದಿಲ್ಲಿಯಲ್ಲಿ ಆರಂಭಗೊಂಡಿರುವ ಈ ಫ್ಯಾಷನ್ ವೀಕ್ ಅಗಸ್ಟ್ 2ರವರೆಗೂ ನಡೆಯಲಿದ್ದು, ಭಾರತದಾದ್ಯಂತ ಇರುವ ಡಿಸೈನರ್‌ಗಳು ಭಾಗವಹಿಸುತ್ತಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಅದಿತಿ ರಾವ್ ಹೈದರಿ ಕೂಡ ಈ ಫ್ಯಾಷನ್ ವೀಕ್‌ನಲ್ಲಿ ಶೋ ಸ್ಟಾಪರ್ ಆಗಿ ಈಗಾಗಲೇ ಮನಗೆದ್ದಿದ್ದಾರೆ. ಭಾರತೀಯ ಸಂಸ್ಕೃತಿ ಬಿಂಬಿಸುವ ವೆಡ್ಡಿಂಗ್‌ವೇರ್‌ಗಳಿಗೆ ಈ ಫ್ಯಾಷನ್ ಶೋನಲ್ಲಿ ಆದ್ಯತೆ ನೀಡಲಾಗಿದ್ದು, ಒಂದಕ್ಕಿಂತ ಒಂದು ಕಲೆಕ್ಷನ್‌ಗಳು ಫ್ಯಾಷನ್ ಪ್ರಿಯರ ಮನಗೆದ್ದಿವೆ. ಅವುಗಳಲ್ಲಿ ಡಿಸೈನರ್ ಸುನೀತ್ ವರ್ಮಾ ಅವರ ಎಕ್ಸ್‌ಕ್ಲ್ಯೂಸಿವ್ ವೆಡ್ಡಿಂಗ್‌ವೇರ್‌ಗಂತೂ ಸಾಕಷ್ಟು ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಭಾರತೀಯ ಸಂಸ್ಕೃತಿ ಬಿಂಬಿಸಿದ ಡಿಸೈನರ್‌ವೇರ್ಸ್
ಡಿಸೈನರ್ ಸುನೀತ್ ವರ್ಮಾ ಅವರ ವೆಡ್ಡಿಂಗ್ ಕಲೆಕ್ಷನ್‌ನಲ್ಲಿ ಪ್ರಸ್ತುತಪಡಿಸಿದ ಬ್ರೈಡಲ್ ರೆಡ್ ಲೆಹೆಂಗಾ ಇದೀಗ ರಾಯಲ್ ಕಲೆಕ್ಷನ್‌ನಲ್ಲಿ ಟಾಪ್ ಸ್ಥಾನ ಪಡೆದಿದ್ದು, ಮುಂಬರುವ ವೆಡ್ಡಿಂಗ್ ಸೀಸನ್‌ನ ಬ್ರೈಡಲ್ ಕಲೆಕ್ಷನ್‌ಗೆ ಸ್ಫೂರ್ತಿ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಇನ್ನು, ರಾಯಲ್ ಕಲಾತ್ಮಕ ವಿನ್ಯಾಸದೊಂದಿಗೆ ಶಿಮ್ಮರ್ ಹಾಗೂ ಜಗಮಗಿಸುವ ಲೆಹೆಂಗಾಗಳ ಬಗ್ಗೆ ಹೇಳುವುದಕ್ಕಿಂತ ನೋಡಿಯೇ ತೀರಬೇಕು. ಆ ಮಟ್ಟಿಗೆ ಅವು ಸಾಮಾನ್ಯ ಮಹಿಳೆಯರನ್ನು ಕೂಡ ಸೆಳೆಯುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಸರಿಯೇ ಇಂತಹ ಒಂದು ಲೆಹೆಂಗಾವನ್ನು ಧರಿಸಬೇಕು ಎನ್ನುವ ಮಹದಾಸೆಯನ್ನು ಹುಟ್ಟುಹಾಕುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಡಿಸೈನರ್ ಸುನೀತ್ ವರ್ಮಾ ಕೇವಲ ತಮ್ಮ ಡಿಸೈನರ್‌ವೇರ್ ಪ್ರದರ್ಶಿಸಿಲ್ಲ, ಬದಲಿಗೆ ಭಾರತೀಯ ಕಲೆಯನ್ನು ಜಾಗತಿಕ ಮ,ಟ್ಟದಲ್ಲಿ ಪ್ರದರ್ಶಿಸಿ, ಭಾವಿ ಫ್ಯಾಷನ್ ಡಿಸೈನರ್‌ಗಳಿಗೆ ಸ್ಫೂರ್ತಿ ನೀಡಿದ್ದಾರೆ. ಪ್ರೇರಣೆ ನೀಡಿದ್ದಾರೆ ಎನ್ನುತ್ತಾರೆ.
ಅದ್ಭುತವೆನಿಸುವ ಸಿಕ್ವೀನ್ಸ್ ವಿನ್ಯಾಸ
ಉತ್ತರ ಭಾರತದಲ್ಲಿನ ಸೀರೆಗಳ ಛಾಯೆಯನ್ನು ಇವರ ಈ ಕಲೆಕ್ಷನ್‌ನಲ್ಲಿ ಕಾಣಬಹುದು. ಅದರೊಂದಿಗೆ ಇಂಡೋ-ವೆಸ್ಟರ್ನ್ ಕಲೆಕ್ಷನ್‌ಗಳು ನಿಬ್ಬೆರಗು ಮೂಡಿಸುವಂತಿವೆ. ಸಿಕ್ವೀನ್ಸ್ ಡಿಸೈನ್ ಮೂಲಕ ಪ್ರತಿ ಡಿಸೈನರ್‌ವೇರ್‌ಗಳನ್ನು ಹ್ಯಾಂಡ್‌ಮೇಡ್ ವರ್ಕ್‌ನಲ್ಲಿ ಅದ್ಭುತವಾಗಿ ಡಿಸೈನ್ ಮಾಡಲಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Earrings Fashion: ಕಿವಿಯ ಅಲಂಕಾರಕ್ಕೆ ಬಂತು ಓವರ್ ಸೈಜ್ ಇಯರಿಂಗ್ಸ್