ತುಳಸಿಯೆಂದರೆ ಹಿಂದೂಗಳಿಗೆ ದೇವರ ಹಾಗೆ. ಮನೆಯ ಮುಂದೆ ತುಳಸಿಯ ಗಿಡವಿಲ್ಲದಿದ್ದರೆ (tulsi plant care), ಮನೆಗೆ ಶೋಭೆಯಲ್ಲ ಎಂಬ ನಂಬಿಕೆ ಹಿಂದೂಗಳದ್ದು. ಅಪಾರ್ಟ್‌ಮೆಂಟೇ ಇರಲಿ, ಜಾಗ ಎಷ್ಟೇ ಚಿಕ್ಕದೇ ಇರಲಿ, ಬಹುತೇಕರು ತಮ್ಮ ಸಣ್ಣ ಬಾಲ್ಕನಿಗಳಲ್ಲಿ ತುಳಸಿಯನ್ನಿಟ್ಟುಕೊಂಡು ನೀರೆರೆದು ಪೊರೆಯುತ್ತಾರೆ. ಪುಟ್ಟ ಕುಂಡಗಳಲ್ಲಿ ತುಳಸಿಯನ್ನು ಬೆಳೆಸುತ್ತಾರೆ. ಕೇವಲ ಧಾರ್ಮಿಕ ನಂಬಿಕೆಗಳಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ತುಳಸಿಗೆ ಸಾಕಷ್ಟು ಮಹತ್ವವಿದೆ. ನಿತ್ಯವೂ ತುಳಸಿಯ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲ, ತುಳಸಿಯ ಎಲೆಗಳನ್ನು ಶೀತ, ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಬಂದಾಗಲೂ ಸೇವಿಸುವುದು ನಮಗೆ ತಿಳಿದೇ ಇದೆ. ಇಂತಹ ಸಾಕಷ್ಟು ಉಪಯೋಗಗಳು ತುಳಸಿಯಿಂದ ನಮಗೆ ಇರುವುದರಿಂದ, ಎಲ್ಲರ ಮನೆಗಳಲ್ಲೂ ತುಳಸಿ ಸರ್ವೇಸಾಮಾನ್ಯ.
ಆದರೆ, ತುಳಸಿಯನ್ನು ಬೆಳೆಸುವುದು ಅಂದುಕೊಳ್ಳುವಷ್ಟು (tulsi plant care) ಸುಲಭವಲ್ಲ. ತುಳಸಿ ಎಲ್ಲೆಂದರಲ್ಲಿ ಸುಲಭವಾಗಿ ಬೆಳೆದುಬಿಡುತ್ತದೆ ಅಂದುಕೊಂಡರೆ ಅದು ಸುಳ್ಳು. ತುಳಸಿಯನ್ನು ಬೆಳೆಸುವ ಪ್ರತಿಯೊಬ್ಬರೂ ಈ ಸಮಸ್ಯೆ ಅನುಭವಿಸಿರುತ್ತಾರೆ. ಅದರಲ್ಲೂ ಕುಂಡಗಳಲ್ಲಿ ತುಳಸಿಯನ್ನು ಬೆಳೆಸುವ ಸಂದರ್ಭ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಯಾಕೆಂದರೆ, ತುಳಸಿಗೆ ಸಾಕಷ್ಟು, ಬೆಳಕು ಬೇರಿ ಹರಡಿಕೊಳ್ಳಲು ಜಾಗ ಬೇಕು. ಹಾಗಾಗಿ ಚಳಿಗಾಲದ ಸಂದರ್ಭ, ಬಹುಬೇಗನೆ ತುಳಸಿಯ ಗಿಡ ಸೊರಗಿಬಿಡುತ್ತದೆ. ಕೆಲವೊಮ್ಮೆ ತುಳಸಿ ಚಳಿಗಾಲದಲ್ಲೇ ಸತ್ತು ಹೋಗುತ್ತದೆ. ಸಮಸ್ಯೆಯನ್ನು ನೀವೂ ಅನುಭವಿಸಿರಬಹುದು. ಹಾಗಾದರೆ, ಬನ್ನಿ, ತುಳಸಿ ಚಳಿಗಾಲದಲ್ಲಿ ಹೀಗೆ ಆಗುವುದೇಕೆ ಹಾಗೂ, ಇದನ್ನು ಯಾವ ಸುಲಭ ಕ್ರಮಗಳ ಮೂಲಕ ಸರಿಯಾಗಿ ಬೆಳೆಯುವಂತೆ ಕಾಪಾಡಬಹುದು ಎಂಬುದನ್ನು ನೋಡೋಣ.
- ತುಳಸೀ ಗಿಡವನ್ನು, ಹೆಚ್ಚು ಚಳಿಗಾಳಿ ಬೀಸದ ಜಾಗದಲ್ಲಿಡಿ. ಗಾಳಿ ಹೆಚ್ಚು ಬೀಸುವ ಚಳಿ ಹೆಚ್ಚು ಗಿಡಕ್ಕೆ ತಾಗುವ ಜಾಗದಲ್ಲಿಟ್ಟರೆ ತುಳಸಿಗೆ ಬದುಕು ಕಷ್ಟವಾಗುತ್ತದೆ.
- ಚಳಿಗಾಲದಲ್ಲಿ ತುಳಸಿಗೆ ಹೆಚ್ಚು ನೀರು ಹಾಕಬೇಡಿ. ಹಾಗಂತ, ಮಣ್ಣು ಒಣಗದಂತೆ ನೋಡಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರು ಹಾಕಿ.
- ಒಣಗಿದ ಗೆಲ್ಲುಗಳನ್ನು ಕತ್ತರಿಸಿ ತೆಗೆಯಿರಿ. ಆಗಾಗ ಗಿಡವನ್ನು ಟ್ರಿಮ್ ಮಾಡುತ್ತಿರಿ. ಹೀಗೆ ಮಾಡುವುದರಿಂದ ಗಿಡ ಸಮೃದ್ಧವಾಗಿ ಬೆಳೆಯುತ್ತದೆ. ಗಿಡದ ಆರೋಗ್ಯ ಹೆಚ್ಚಿ ಕಳೆಕಳೆಯಾಗುತ್ತದೆ.
- ಮಂಜು ಕವಿಯುವ ರಾತ್ರಿಗಳಲ್ಲಿ, ಅಥವಾ ಹಿಮ ಸುರಿಯುವ ಚಳಿಯಲ್ಲಿ ಗಿಡವನ್ನು ಒಂದು ಹೊದಿಗಕೆ ಹೊದೆಸಿ ಕಾಳಜಿ ಮಾಡಿ. ಇವು ಗಿಡಕ್ಕೆ ನೇರವಾಗಿ ಬಿದ್ದರೆ, ಖಂಡಿತವಾಗಿಯೂ ತುಳಸಿಯ ಆರೋಗ್ಯ ಹದಗೆಡುತ್ತದೆ. ಮಂಜು ಹಾಗೂ ಹಿಮ ತುಳಸಿಯ ಶತ್ರು. ಹೀಗಾಗಿ, ಅಥವಾ ರಾತ್ರಿಗಳಲ್ಲಿ ಗಿಡಕ್ಕೊಂದು ಹೊದಿಕೆ ಹೊದೆಸಿಡಿ.
- ನಿಮ್ಮ ತುಳಸಿ ಗಿಡಕ್ಕೆ ಸರಿಯಾದ ಪ್ರಮಾಣದಲ್ಲಿ ಸೂರ್ಯನ ಬೆಳಕು ಹಗಲಿನಲ್ಲಿ ಸಿಗುವಂತೆ ನೋಡಿಕೊಳ್ಳಿ. ಕುಂಡಗಳಲ್ಲಿ ತುಳಸಿ ಬೆಳೆಸಿದ್ದರೆ, ಅದನ್ನು ಸೂರ್ಯನ ಬೆಳಕು ಚೆನ್ನಾಗಿ ಸಿಗುವ ಕಡೆ ಇಡಿ. ತುಳಸಿಗೂ ಸೂರ್ಯನಿಗೂ ಬಿಡಿಸಲಾಗದ ನಂಟು. ಹೀಗಾಗಿ, ಸೂರ್ಯನ ಬೆಳಕಿನಿಂದ ತುಳಸಿಯನ್ನು ಬೇರೆ ಮಾಡಬೇಡಿ. ಎಷ್ಟೇ ಚಳಿಯಿದ್ದರೂ, ತುಳಸಿಗೆ ಬೆಳಗಿನ ನಾಲ್ಕೈದು ಗಂಟೆ ಬಿಸಿಲು ಸಿಗುವಂತೆ ನೋಡಿಕೊಳ್ಳಿ.
- ಚೆನ್ನಾಗಿ ನೀರು ಬಸಿದುಹೋಗುವ ಕುಂಡಗಳಲ್ಲಿ ತುಳಸಿಯನ್ನು ಬೆಳೆಸಿ. ಕುಂಡದಲ್ಲಿ ನೀರು ನಿಂತರೆ, ಗಿಡದ ಆರೋಗ್ಯ ಹದಗೆಡುತ್ತದೆ.
- ತುಳಸಿ ಗಿಡಕ್ಕೆ ಹುಳ ಹಿಡಿಯದಂತೆ ನೋಡಿಕೊಳ್ಳಿ. ಹುಳ ಬಂದರೆ, ಕಹಿಬೇವಿನ ಎಣ್ಣೆ ಸಿಂಪಡಿಸುವುದು ಮತ್ತಿತರ ಪ್ರಯತ್ನ ಮಾಡಬಹುದು.
- ಚಳಿಗಾಲದಲ್ಲಿ ಚಳಿ ಅತ್ಯಂತ ಹೆಚ್ಚಿದ್ದರೆ, ನಿಮ್ಮ ತುಳಸೀ ಕುಂಡವನ್ನು ಮನೆಯೊಳಗಿಡಿ. ಗಿಡ ಆಗ ಕೊಂಚ ಬೆಚ್ಚಗಿನ ವಾತಾವರಣದಲ್ಲಿರುತ್ತದೆ. ಹಾಗೂ ಗಿಡದ ಆರೋಗ್ಯ ವೃದ್ಧಿಸುತ್ತದೆ.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು