ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಬೆಚ್ಚಗಿಡುವ ಜಾಕೆಟ್ ಶೈಲಿಯ ಬ್ಲೌಸ್ ಸೀರೆ ಫ್ಯಾಷನ್ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣುವ ಈ ಸ್ಟೈಲ್ ಸೀರೆ ಪ್ರಿಯರನ್ನು ಸೆಳೆದಿದೆ. ಪರಿಣಾಮವಾಗಿ ಜಾಕೆಟ್ ಸ್ಟೈಲ್ ಬ್ಲೌಸ್‌ಗಳು ನಾನಾ ರೂಪದಲ್ಲಿ ಕಾಣಿಸಿಕೊಂಡು ಸೀರೆಯನ್ನು ಸಿಂಗರಿಸಿವೆ.
ಅಂದಹಾಗೆ, ಸೀರೆಗೆ ಡಿಸೈನರ್ ಬ್ಲೌಸ್ ಧರಿಸುವುದು ಇಂದಿನ ಫ್ಯಾಷನ್, ಅದೇ ಸೀರೆಗೆ ಜಾಕೆಟ್ ಶೈಲಿಯ ಬ್ಲೌಸ್ ಧರಿಸುವುದು ಡಿಫರೆಂಟ್ ಲುಕ್ ನೀಡುವ ಇಂಡೋ-ವೆಸ್ಟರ್ನ್ ಸ್ಟೈಲ್ ಎನ್ನುತ್ತಾರೆ ಸ್ಟೈಲಿಸ್ಟ್ ರಾಗ. ಅವರ ಪ್ರಕಾರ, ಈ ಟ್ರೆಂಡನ್ನು ಹುಟ್ಟು ಹಾಕಿದವರು, ಬಾಲಿವುಡ್ಡಿಗರು. ಸೋನಂ ಕಪೂರ್, ಜಾಕ್ವೆಲೀನ್, ಮಾಧುರಿ ದೀಕ್ಷೀತ್, ಶಿಲ್ಪಾ ಶೆಟ್ಟಿ ಸೇರಿದಂತೆ ನಾನಾ ಸೆಲೆಬ್ರಿಟಿಗಳು ಸೀರೆಗೆ ಡಿಫರೆಂಟ್ ಲುಕ್ ನೀಡುವ ಸಲುವಾಗಿ ಜಾಕೆಟ್ ಸ್ಟೈಲ್ ಬ್ಲೌಸ್ ಸೀರೆಯಲ್ಲಿ ಕಾಣಿಸಿಕೊಂಡು ಈ ಸೀರೆ ಟ್ರೆಂಡ್‌ಗೆ ನಾಂದಿ ಹಾಡಿದರು. ಬರಬರುತ್ತಾ ಇದು ಹೈ ಪ್ರೊಫೈಲ್ ಸೆಲೆಬ್ರಿಟಿಗಳಿಂದ ಇದೀಗ ಸಾಮಾನ್ಯ ಮಹಿಳೆಯರು ಇಷ್ಟಪಡುವ ಕಾನ್ಸೆಪ್ಟ್ ಆಗಿ ಬದಲಾಗಿದೆ ಎನ್ನುತ್ತಾರೆ.
ಇದು ನೋಡಲು ಕೊಂಚ ವಿಭಿನ್ನವಾಗಿ ಕಾಣುತ್ತಾದರೂ ಸಾವಿರ ಮಂದಿಯ ಮಧ್ಯೆಯೂ ಸೆಂಟರ್ ಆಫ್ ದಿ ಅಟ್ರಾಕ್ಷನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ರೀಯಾ. ಅವರ ಪ್ರಕಾರ, ಸರಿಯಾದ ಜಾಕೆಟ್ ಬ್ಲೌಸ್ ಆಯ್ಕೆ ಮಾಡುವುದು ಅವಶ್ಯ.
ಜಾಕೆಟ್ ಬ್ಲೌಸ್ ಆಯ್ಕೆ
ಯಾವುದೇ ಸೀರೆಗೆ ಜಾಕೆಟ್ ಬ್ಲೌಸ್ ಮ್ಯಾಚ್ ಮಾಡಬೇಕಿದ್ದಲ್ಲಿ ಆದಷ್ಟು ಆ ಬ್ಲೌಸ್ ಹಾಗೂ ಸೀರೆಗೆ ಮೆಟೀರಿಯಲ್ ಮ್ಯಾಚ್ ಆಗುವಂತಿರಬೇಕು. ಇನ್ನು ಡಾರ್ಕ್ ಶೇಡ್ಸ್ ಬಳಕೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಒಂದಕ್ಕೊಂದು ಅದು ಮ್ಯಾಚ್ ಆಗದು ಎನ್ನುತ್ತಾರೆ ಮಾಡೆಲ್ ಡೀನಾ. ಈ ಸೀಸನ್‌ಗೆ ತಕ್ಕಂತೆ ಜಾಕೆಟ್ ಬ್ಲೌಸ್ ಸೀರೆಗೆ ಲೆಯರ್ ಲುಕ್ ನೀಡುತ್ತದೆ. ರೆಡಿಮೇಡ್ ಬ್ಲೌಸ್‌ಗಳು ಲಭ್ಯ. ಇವನ್ನು ಹೊಲೆಸಲುಬಹುದು ಎನ್ನುತ್ತಾರೆ.
ಪರ್ಸನಾಲಿಟಿಗೆ ತಕ್ಕಂತೆ ಜಾಕೆಟ್ ಬ್ಲೌಸ್ ಆಯ್ಕೆ
ಪ್ಲಂಪಿಯಾಗಿರುವ ಮಹಿಳೆಯರಿಗೆ ಈ ಜಾಕೆಟ್ ಸೀರೆ ಸ್ಟೈಲ್ ಮ್ಯಾಚ್ ಆಗುವುದಿಲ್ಲ. ಯಾಕೆಂದರೆ, ಇದು ಮತ್ತಷ್ಟು ಪ್ಲಂಪಿ ಲುಕ್ ನೀಡುತ್ತದೆ. ಜತೆಗೆ ಸೀರೆಯ ಇಮೇಜನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಧರಿಸಲೇಬೇಕಿದ್ದಲ್ಲಿ ಆದಷ್ಟೂ ಸಾಫ್ಟ್ ಫ್ಲೋ ಆಗುವ ಫ್ಯಾಬ್ರಿಕ್‌ನದ್ದು ಆಯ್ಕೆ ಮಾಡುವುದು ಉತ್ತಮ. ಸ್ಲಿಮ್ ಆಗಿರುವವರಿಗೆ ಹಾಗೂ ಉದ್ದಗಿರುವವರಿಗೆ ಇದು ಬೆಸ್ಟ್ ಸ್ಟೈಲ್‌ಸ್ಟೇಟ್‌ಮೆಂಟ್ ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ. ಇನ್ನು ಧರಿಸಲೇಬೇಕಿದ್ದವರು ಆದಷ್ಟೂ ಟ್ರೆಂಡಿ ಡಿಸೈನ್‌ನವನ್ನು ಆಯ್ಕೆ ಮಾಡಬೇಕು ಎನ್ನುತ್ತಾರೆ.
ಜಾಕೆಟ್ ಬ್ಲೌಸ್ ಸೀರೆ ಪ್ರಿಯರಿಗೆ ಸಲಹೆ
- ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ.
- ಫ್ಯಾಬ್ರಿಕ್ಗೆ ತಕ್ಕಂತೆ ವಿನ್ಯಾಸ ಆಯ್ಕೆ ಮಾಡಿ.
- ಫ್ರೀ ಹೇರ್ಸ್ಟೈಲ್ಗಿಂತ ಇತರೇ ವಿನ್ಯಾಸ ಮಾಡಿ.
- ಸ್ಯಾಂಡಲ್ ಮ್ಯಾಚಿಂಗ್ ಇರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ವಿಂಟರ್ ಫ್ಯಾಷನ್‌ನಲ್ಲಿ ಯುವತಿಯರ ಮನಗೆದ್ದ ಲಾಂಗ್ ಶ್ರಗ್ಸ್